ಇಂದು ಸಂವಾದ
ಹುಬ್ಬಳ್ಳಿ: ವಿಶ್ವ ಕೀಲೂತ ದಿನಾಚರಣೆ ಅಂಗವಾಗಿ ಇಲ್ಲಿನ ಜೆ.ಜಿ. ಕಾಮರ್ಸ್ ಮಹಾವಿದ್ಯಾಲಯದಲ್ಲಿ ಅ. 12ರಂದು ಬೆಳಗ್ಗೆ 11ಕ್ಕೆ ಬೆಳಗಾವಿಯ ಡಾ. ಪ್ರಭಾಕರ್ ಕೋರೆ ಆಸ್ಪತ್ರೆಯ ಕೀಲುನೋವು ತಜ್ಞ ಡಾ. ರಾಜೇಂದ್ರ ಭಂಡಾರಕರ್ ಅವರು ಕೀಲು ನೋವು ಕುರಿತು ಉಪನ್ಯಾಸ ನೀಡಲಿದ್ದಾರೆ. ನಂತರ ಹೆಸರು ನೋಂದಣಿ ಮಾಡಿಕೊಂಡಿರುವ ಕೀಲು ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಗ್ರಂಥಗಳ ಬಿಡುಗಡೆ
ಧಾರವಾಡ: ಇಲ್ಲಿಯ ಚಂದ್ರನಾಥ ಪ್ರಕಾಶನ ಪ್ರಕಟಿಸಿದ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ ಅ. 13ರಂದು ಸಂಜೆ 5.30ಕ್ಕೆ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಜರುಗಲಿದೆ. ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಜಯಶ್ರೀ ಮುದಿಗೌಡರ ಅವರ 'ಲೋಕೋಪಕಾರಂ - ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಕೃತಿಯನ್ನು ಡಾ. ಶ್ರೀನಿವಾಸ ಪಾಡಿಗಾರ ಬಿಡುಗಡೆಗೊಳಿಸುತ್ತಾರೆ. ಈಶ್ವರ ಕಮ್ಮಾರರ 'ಸಮಗ್ರ ಕಾವ್ಯ'ವನ್ನು ಡಾ. ಧನವಂತ ಹಾಜವಗೋಳ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಶುಭದಾ ಅಮ್ಮಿನಬಾವಿಯವರ 'ಪ್ರಕಾಶದಾ ಸ್ಪರ್ಶ' ಕೃತಿಯನ್ನು ಡಾ. ಮಾಲತಿ ಆದವಾನಿ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ. ಎಲ್.ಜಿ. ದೇವಾಂಗಮಠ ಅವರ 'ಸಮಗ್ರ ನಾಟಕಗಳು' ಕೃತಿಯನ್ನು ರವಿ ಕುಲಕರ್ಣಿ ಬಿಡುಗಡೆ ಮಾಡಿ ಮಾತನಾಡಲಿದ್ದಾರೆ ಎಂದು ಪ್ರಕಾಶಕ ಡಾ. ಜಿನದತ್ತ ಅ. ಹಡಗಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ವಧುವರರ ಸಮಾವೇಶ
ಹುಬ್ಬಳ್ಳಿ: ಜಂಗಮ ಮತ್ತು ಲಿಂಗಾಯತ ಪದವೀಧರರ ರಾಜ್ಯಮಟ್ಟದ ವಧುವರರ ಸಮಾವೇಶ ಅ. 13ರಂದು ನಗರದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಗೋಕುಲ ರಸ್ತೆಯ ಅಕ್ಷಯ ಹೋಟೆಲ್ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಬೆಂಗಳೂರು, ಹೈದ್ರಾಬಾದ್, ಚೆನ್ನೈಸ ಪುಣೆಯಲ್ಲಿ ಕೆಲಸ ಮಾಡುವ ವಧು-ವರರು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಕರ್ನಾಟಕ ವೀರಶೈವ ವಧು-ವರರ ಅನ್ವೇಷಣಾ ಕೇಂದ್ರದ ಅಧ್ಯಕ್ಷ ಶಿವಕುಮಾರ ಹಿರೇಮಠ (ಮೊಸಂ-94481 13057) ಅಥವಾ ರಾಜು ಭೂಮಿಕಾ (77603 16576) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೇಣು ಬಿಗಿದು ಆತ್ಮಹತ್ಯೆ
ಹುಬ್ಬಳ್ಳಿ: ಶಿಕ್ಷಣದಲ್ಲಿ ಹಿನ್ನಡೆ ಸಾಧಿಸಿದ್ದ ಬಿಜಾಪುರ ಜಿಲ್ಲೆಯ ಯುವಕನೊಬ್ಬ ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ವಸತಿಗೃಹವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಬ್ಬಳ್ಳಿಯ ದೀಪಾಲಿ ವಸತಿಗೃಹದಲ್ಲಿ ರೂಂ ಪಡೆದಿದ್ದ ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ವೀರೇಶ ಸಂಗಪ್ಪ ದೇಶಮುಖ (17) ಎಂಬ ಯುವಕ ಕಲಿಯುವಿಕೆಯಲ್ಲಿ ಇರುವ ಹಿನ್ನಡೆಯಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಉಳವನಗೌಡ ಬಸನಗೌಡ ಪಾಟೀಲ ಅವರು ದೂರು ನೀಡಿದ್ದು, ಉಪನಗರ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

