ಧಾರವಾಡ

ಆದರ್ಶ ಶಿಕ್ಷಕ, ಸಾತ್ವಿಕ ಸಾಹಿತಿ ಡಾ೤ ವರದರಾಜ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 14
ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ತಮ್ಮ ಇಡಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಸಜ್ಜನ ಸಾಹಿತಿ ಡಾ. ವರದರಾಜ ಹುಯಿಲಗೋಳ ಎಂದು ಹರ್ಷ ಡಂಬಳ ಹೇಳಿದರು.
ಇಲ್ಲಿನ ಸಾಹಿತ್ಯಿಕ ಅನ್ವೇಷನಕೂಟ ಏರ್ಪಡಿದ್ದ ಡಾ. ವರದರಾಜ ಹುಯಿಲಗೋಳ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಇವರು ಒಂದು ಕಾಲಕ್ಕೆ ಧಾರವಾಡದ ಸಾಹಿತ್ಯಿಕ ವಲಯದ ಅಂಗವಾಗಿದ್ದರು. ಗಿರೀಶ ಕಾರ್ನಾಡ, ಸುರೇಶ ಹೆಬ್ಳೀಕರ ಮೊದಲಾದ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತಂದ ಡಾ. ವರದರಾಜ ಕೊನೆತನಕ ತಮ್ಮ ಸುಖ-ದುಃಖದ ಯಾವ ಸುಳಿವನ್ನೂ ನೀಡದೆ ಹಸನ್ಮುಖಿ ವ್ಯಕ್ತಿಯಾಗಿ ಆದರ್ಶ ಶಿಕ್ಷಕರಾಗಿ ಅರ್ಥಪೂರ್ಣ ತುಂಬುಜೀವನ ನಡೆಸಿದ ಅಪರೂಪದ ಸಾತ್ವಿಕ ಚೇತನ ಎಂದರು.
ಕಥೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನ ಪ್ರಬಂಧಗಳು, ಮಕ್ಕಳ ಸಾಹಿತ್ಯ ಮುಂತಾದ ಅನೇಕ ಪ್ರಕಾರಗಳಲ್ಲಿ ಉತ್ತಮ ಕೃತಿಗಳನ್ನು ರಚಿಸಿದ ಡಾ. ವರದರಾಜರ ಇಂಡಿಯಾ ಗೆಝೆಟಿಯರ್‌ನ ಕನ್ನಡ ಅನುವಾದ ಗ್ರಂಥಗಳು ಅವರ ಅಪಾರ ಪರಿಶ್ರಮದ ಸಾರ್ಥಕ ಫಲವಾಗಿ ನಿಂತಿವೆ. ದುರ್ಗಸಿಂಹನ ಪಂಚತಂತ್ರದ ಸಮೀಕ್ಷೆ ಎಂಬ ಅವರ ಪಿಎಚ್‌ಡಿ ಪ್ರಬಂಧ ಒಂದು ಅಭ್ಯಾಸಪೂರ್ಣ ಪ್ರೌಢ ಪ್ರಬಂಧವು ಆ ಕಾಲದ ದಿಗ್ಗಜ ಸಾಹಿತಿಗಳ ಮೆಚ್ಚುಗೆ ಗಳಿಸಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ ಡಾ. ಶ್ರೀನಿವಾಸ ರಿತ್ತಿ, ವರದರಾಜರೊಂದಿಗಿನ ತಮ್ಮ ನಿಕಟ ಬಾಂಧವ್ಯ ಹಾಗೂ ಆಗ ತಾವಿಬ್ಬರೂ ಜೊತೆಯಾಗಿ ನಡೆಸಿದ ಅಪರೂಪದ ಮೌಲ್ಯಯುತ ಸಾಹಿತ್ಯಿಕ ಚಟುವಟಿಕೆ ನೆನಪಿಸಿಕೊಂಡರು. ನಂತರ ನಡೆದ ಭಕ್ತಿ ಸಂಗೀತದಲ್ಲಿ ವಸುಧಾ ಹೆಗಡೆ ಮುದಿಗೌಡರ ಸಂಗೀತ ಪ್ರಸ್ತುತಪಡಿಸಿದರು. ಹಾರ್ಮೋನಿಯಂದಲ್ಲಿ ಗುರುಪ್ರಸಾದ ಹೆಗಡೆ ಮತ್ತು ತಬಲಾದಲ್ಲಿ ಗಜಾನನ ಹೆಗಡೆ ಸಾಥ್ ನೀಡಿದರು.
ಪ್ರೊ. ದುಷ್ಯಂತ ನಾಡಗೌಡ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಪ್ರೊ. ಸಿ.ವಿ. ವೇಣುಗೋಪಾಲ, ಪ್ರೊ. ಸಿ.ಆರ್. ಜೋಶಿ, ಪ್ರೊ. ಜೆ.ಎಚ್. ಕುಲಕರ್ಣಿ, ಎ.ಸಿ. ಮುಂಡರಗಿ, ರಾಮಚಂದ್ರ ಧೋಂಗಡೆ, ಆರ್.ಕೆ. ಅಂಬೇಕರ, ಸದಾನಂದ ಭಟ್ಕಳ, ಅನಂತ ಥಿಟೆ, ಎಂ.ಕೆ. ಹೆಗಡೆ, ಪ್ರೊ. ದೀಪಕ ಆಲೂರ, ಎಸ್.ಎಸ್. ಪೊಲೀಸಗೌಡರ, ರಾಜೀವ್ ಪಾಟೀಲ ಕುಲಕರ್ಣಿ, ಎಸ್.ಎಂ. ದೇಶಪಾಂಡೆ, ಡಾ. ಜಯಶ್ರೀ ಮುದಿಗೌಡರ, ನಾಗರತ್ನಾ ದೇಸಾಯಿ ಇದ್ದರು. ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಸ್ವಾಗತಿಸಿದರು. ವೆಂಕಟೇಶ ದೇಸಾಯಿ ನಿರೂಪಿಸಿದರು. ಹ.ವೆಂ. ಕಾಖಂಡಕಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.