ಸದಸ್ಯತ್ವ ಅಭಿಯಾನ
ಹುಬ್ಬಳ್ಳಿ: ಅರವಿಂದ್ ಕೆಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವತಿಯಿಂದ ನವನಗರದ ಜಿಲ್ಲಾ ಕಾರ್ಯಾಲಯದಲ್ಲಿ ಅ. 22ರಂದು ಬೆಳಗ್ಗೆ 10.30ಕ್ಕೆ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ಯ ಅಭಿಯಾನ ಚಾಲನಾ ಕಾರ್ಯಕ್ರಮ ನಡೆಯಲಿದೆ. ಸಭೆಯಲ್ಲಿ ಶೈಲೇಂದ್ರಕುಮಾರ ಪಾಟೀಲ್, ಅನಂತಕೃಷ್ಣಾ, ಉಮಾ ರೇವಡಿ, ರವಿ ಬೇವಿನಕಟ್ಟಿ, ಗುರುಪುತ್ರ ಗೊಜನೂರ, ಶ್ಯಾಮಸನ್, ನೂರಅಲಿ ಮತ್ತಿತರರು ಪಾಲ್ಗೊಳ್ಳುವುದಾಗಿ ಪ್ರಕಟಣೆ ತಿಳಿಸಿದೆ.
ಆಭರಣ ಕಳ್ಳತನ: ಬಂಧನ
ಹುಬ್ಬಳ್ಳಿ: ಚಿನ್ನಾಭರಣ ಅಂಗಡಿಯಲ್ಲಿ ಗ್ರಾಹಕರಂತೆ ನಟಿಸಿ 50 ಗ್ರಾಂ ಚಿನ್ನದ ಉಂಗುರುಗಳನ್ನು ಕಳ್ಳತನ ಮಾಡಿದ್ದ ಓರ್ವ ಮಹಿಳೆ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇನಲ್ಲಿ ಸಂಭವಿಸಿದ್ದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಾಪುರ ನಗರದ ಸದ್ಯ ಲಕ್ಷ್ಮಿ ನಗರದ ವಾಸಿ ಲಕ್ಷ್ಮಿಬಾಯಿ ಕೊಂ ಕುಮಾರ ಕಟ್ಟಿಮನೆ ಎಂಬ ಮಹಿಳೆ ಗ್ರಾಹಕರಂತೆ ನಟಿಸಿ 50 ಗ್ರಾಂ. ತೂಕದ ರು. 1.25 ಲಕ್ಷದ ಚಿನ್ನದ ಉಂಗುರುಗಳನ್ನು ಕಳ್ಳತನ ಮಾಡಿದ್ದಳು. ಅಂಗಡಿಯಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದ ಸೊಲ್ಲಾಪುರ ನಗರದ ಸಿದ್ದರಾಮ ಗುರುಸಿದ್ದಪ್ಪ ವಾಂಗೆಕರ್ಗೆ ತನ್ನ ಪತಿ ಕುಮಾರ ಬಸಪ್ಪ ಕಟ್ಟಿಮನಿಯೊಂದಿಗೆ ಸೇರಿ ಮಾರಿದ್ದರು. ಮಹಿಳೆ ಲಕ್ಷ್ಮಿ ಜತೆಮಾರಾಟಕ್ಕೆ ಸಹಕರಿಸಿದ ಕುಮಾರ ಕಟ್ಟಿಮನಿ, ಕಳುವಿನ ಮಾಲು ಖರೀದಿಸಿದ ಸಿದ್ದರಾಮ ವಾಂಗೆಕರ್ನನ್ನೂ ಕೂಡ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕೀಲಿ ಮುರಿದು ಕಳ್ಳತನ
ಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಕೀಲಿ ಮುರಿದು ರು. 82 ಸಾವಿರದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ನವಲೂರಲ್ಲಿ ಭಾನುವಾರ ನಡೆದಿದೆ. ಮಾಣಿಕನಗರದ ಸೋಮಯ್ಯ ಗುರುಸ್ವಾಮಯ್ಯ ಹಿರೇಮಠ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಳಗ್ಗೆ ಮನೆಯವರು ದೇವಸ್ಥಾನಕ್ಕೆ ಹೋದಾಗ ಕೀಲಿ ಮುರಿದು ಕಪಾಟಿನಲ್ಲಿದ್ದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ವಿದ್ಯಾಗಿರಿ ಠಾಣಾ ಸಿಪಿಐ ಚನ್ನಕೇಶವ ಬಿ.ಟಿ., ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ನಾಗಮ್ಮ ಫಕೀರಗೌಡ್ರ
ಧಾರವಾಡ: ಮೂಲತಃ ಹಾವೇರಿ ತಾಲೂಕು ಬೈಲ ಮಾದಾಪುರದ ಹಾಲಿ ಲಕ್ಷ್ಮೀನಗರ ನಿವಾಸಿ ನಾಗಮ್ಮ ಸಣ್ಣಬಸನಗೌಡ ಫಕೀರಗೌಡ್ರ ಸೋಮವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಗಣಪತಿ ದುಮ್ಮಾಳೆ
ಧಾರವಾಡ: ಇಲ್ಲಿನ ಶುಕ್ರವಾರ ಪೇಟ ಜೋಶಿ ಗಲ್ಲಿ ನಿವಾಸಿ ಗಣಪತಿ ಸಟವಾಜಿ ದುಮ್ಮಾಳೆ(80) ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

