ಗ್ರಾಮಾಭಿವೃದ್ಧಿಗೆ ಎನ್ನೆಸ್ಸೆಸ್ ಅವಶ್ಯ
ಅಣ್ಣಿಗೇರಿ: ಗ್ರಾಮಾಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಆ ದಿಸೆಯಲ್ಲಿ ಎನ್ಎಸ್ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಜಿ.ಕೆ. ಪಾಟೀಲ ಹೇಳಿದರು. ಸ್ಥಳೀಯ ಎನ್.ಎಸ್. ಹೂಗಾರ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಾ, ವಾಚಾ, ಮನಸ್ಸಿನಿಂದ ಮಾನವ ಅಭಿವೃದ್ಧಿ ಹೊಂದುತ್ತಾನೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಕುರಿತು ಉಪನ್ಯಾಸಕ ಬಿ.ಡಿ. ನಲವಡಿ ಮಾತನಾಡಿದರು. ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಹನುಮಂತಗೌಡ ಹಿರೇಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಮರಿಯಪ್ಪ ಬನ್ನಿಗಿಡದ, ಮಹಾದೇವಪ್ಪ ನರಗುಂದ, ಫಕ್ಕೀರಯ್ಯ ಬೆನಕನಹಳ್ಳಿ, ಪ್ರಭಪ್ಪ ಗಾಣಿಗೇರ, ವೀರಭದ್ರಯ್ಯ ಹಿರೇಮಠ ಉಪಸ್ಥಿತರಿದ್ದರು. ಶ್ರುತಿ ಕಾಳಿ ಸಂಗಡಿಗರು ಪ್ರಾರ್ಥಿಸಿದರು. ಮಂಜು ಮಡಿವಾಳರ ಸ್ವಾಗತಿಸಿದರು. ಪ್ರದೀಪ ನಿರೂಪಿಸಿದರು. ಪ್ರಶಾಂತ ಭೋಸಲೆ ವಂದಿಸಿದರು.
ಸಾವಿತ್ರಿ ನಾಗೇಶ ಪಾಲೇಕರ ನಿಧನ
ಹುಬ್ಬಳ್ಳಿ: ಧಾರವಾಡ ನಗರದ ಗಾಂಧಿ ನಗರ ನಿವಾಸಿ ಸಾವಿತ್ರಿ ನಾಗೇಶ ಪಾಲೇಕರ (90) ಅವರು ಈಚೆಗೆ ನಿಧನರಾದರು. ದಿವಂಗತರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

