ಇಂದು ಉಚಿತ ಕಾರ್ಯಾಗಾರ
ಧಾರವಾಡ: ಕರ್ನಾಟಕ ಕ್ಲಾಸಿಕ್ ಎಜ್ಯುಕೇಶನ್ ಲಿಮಿಟೆಡ್ನ ದಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ನಲ್ಲಿ ಅ.25 ರಂದು ಬೆಳಗ್ಗೆ 10.30ಕ್ಕೆ ರೇಲ್ವೆ ಗ್ರೂಪ್-ಡಿ ಹುದ್ದೆಗಳ ನೇಮಕಾತಿ (ಆರ್.ಆರ್.ಬಿ) ಅಭ್ಯರ್ಥಿಗಳಿಗೆ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರೇಲ್ವೆ ಇಲಾಖೆ ಗ್ರೂಪ್ ಡಿ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಸ್ಸೆಸ್ಸೆಲ್ಸಿ ಮತ್ತು ಐಟಿಐ ಪಾಸಾದ ವಿದ್ಯಾರ್ಥಿಗಳು ಈ ಪರೀಕ್ಷೆ ಹೇಗೆ ತಯಾರಿ ಮಾಡಿಕೊಳ್ಳಬೇಕೆಂದು ಪರಿಣಿತ ಉಪನ್ಯಾಸಕರಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ಪರೀಕ್ಷಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ (ಮೊ. 99805 52080 ) ತಿಳಿಸಿದ್ದಾರೆ.
ನಾಳೆ ದಸರಾ ಕ್ರಿಕೆಟ್ ಕಪ್
ಧಾರವಾಡ: ಇಲ್ಲಿನ ಫ್ರೆಂಡ್ಸ್ ಕ್ಲಬ್ ವತಿಯಿಂದ ಅ. 26, 27ರಂದು ದಸರಾ ಕಪ್ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಕೃಷಿ ವಿಶ್ವವಿದ್ಯಾಲಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಒಟ್ಟು 14 ತಂಡಗಳು ಭಾಗವಹಿಸುತ್ತಿವೆ. ಪ್ರಥಮ ಬಹುಮಾನ ರು. 15 ಸಾವಿರ, ದ್ವಿತೀಯ ಬಹುಮಾನ ರು. 10 ಸಾವಿರ ಹಾಗೂ ಟ್ರೋಫಿ ವಿತರಿಸಲಾಗುವುದು. ಕೃಷಿ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಎಚ್.ಎಸ್. ವಿಜಯಕುಮಾರ ಉದ್ಘಾಟಿಸುವರು. ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತವನಪ್ಪ ಅಷ್ಟಗಿ, ಸುಧೀರ ಕ್ಷತ್ರಿ, ಉದಯ ಶೆಟ್ಟಿ, ಕ್ಲಬ್ ಉಪಾಧ್ಯಕ್ಷ ವೀರೇಶ ಗೋಡಿಕಟ್ಟಿ, ಕಾರ್ಯದರ್ಶಿ ಮಂಜುನಾಥ ಹುಲಮನಿ ಭಾಗವಹಿಸುವರು ಎಂದು ಕಾರ್ಯದರ್ಶಿ ಸಲೀಂ ಮಿಶ್ರಿಕೋಟಿ ತಿಳಿಸಿದ್ದಾರೆ.
ವಾಹನ ಹಾಯ್ದು ಓರ್ವ ಕುರಿಗಾಹಿ, 8 ಕುರಿ ಸಾವು
ಗದಗ: ವೇಗವಾಗಿ ಚಲಿಸುತ್ತಿದ್ದ ವಾಹನವು ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಕುರಿಗಳ ಮೇಲೆ ಹಾಯ್ದ ಪರಿಣಾಮ ಓರ್ವ ಕುರಿಗಾಹಿ ಸೇರಿದಂತೆ 8 ಕುರಿಗಳು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೋಟುಮಚಗಿ-ಅಬ್ಬಿಗೇರಿ ರಸ್ತೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ನರ್ತಿ ಗ್ರಾಮದ ಬೀರಪ್ಪ (20) ಎಂದು ಗುರುತಿಸಲಾಗಿದೆ. ಈರುಳ್ಳಿ ಚೀಲಗಳನ್ನು ಹೊತ್ತಿದ್ದ ಲಾರಿಯು ರೋಣದಿಂದ ಬೆಂಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ವೇಗವಾಗಿ ಬಂದ ಲಾರಿಯು ರಸ್ತೆಯ ಪಕ್ಕದಲ್ಲಿದ್ದ ಕುರಿಗಳ ಮೇಲೆ ಹಾಯ್ದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಬಿದ್ದಿದ್ದು, ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಅವನನ್ನು ಚಿಕಿತ್ಸೆಗಾಗಿ ಗದಗನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ, ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಲ್ಹಾಜ್ ಸಿಕಂದರ್ ಲಾಲ್ಮಿಯಾ ನಿಧನ
ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಬಹಾರ್ ಬಡಾ ನಿವಾಸಿ, ಶಾ ಬಜಾರ್ ವ್ಯಾಪಾರಿ ಅಲ್ಹಾಜ್ ಸಿಕಂದರ್ ಲಾಲ್ಮಿಯಾ (51) ನಿಧನರಾದರು. ದಿವಂಗತರಿಗೆ ಪತ್ನಿ, ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

