ಇಂದು ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ
ಧಾರವಾಡ: ಸುಂದರ ಪುಸ್ತಕ ಪ್ರಕಾಶನ ವತಿಯಿಂದ ಅ. 26ರಂದು ಸಂಜೆ 5ಕ್ಕೆ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಐದು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ. ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ.ವಿ. ವೇಣುಗೋಪಾಲ ಅವರ ಅಧ್ಯಕ್ಷತೆಯಲ್ಲಿ ರಾಮಚಂದ್ರ ದೇವ ಅವರ ಅರಣ್ಯಕರ ಸುತ್ತಮುತ್ತ ಮತ್ತು ಇತರ ಲೇಖನಗಳು, ಡಾ.ಎನ್.ಎಚ್. ಪೂಜಾರ ಅವರ ಕನ್ನಡ ವೃತ್ತಿರಂಗಭೂಮಿಗೆ ಪಿ.ಬಿ. ಧುತ್ತರಗಿ ಕೊಡುಗೆ, ಡಾ. ಸರಜೂ ಕಾಟ್ಕರ್ ಅವರ ದೇಹಭಾನ, ಶೋಭಾ ನಾಯಕ ಅವರ ಅಕ್ಟಾವಿಯೋ ಪಾಜ್ (ಸ್ಪ್ಯಾನಿಶ್) ಕವಿತೆಗಳು ಹಾಗೂ ಡಾ. ಬಸೂ ಬೇವಿನಗಿಡದ ಅವರ ಬೆಳಕಿನ ಹಕ್ಕಿ-ಬೇಂದ್ರ ನಿಸರ್ಗ ಕಾವ್ಯ ಬಿಡುಗಡೆಗೊಳ್ಳಲಿವೆ ಎಂದು ಪ್ರಕಾಶಕ ಡಾ. ಶಿವಾನಂದ ಗಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾವಿಗೆ ಬಿದ್ದ ಬೆಕ್ಕು ರಕ್ಷಣೆ
ಕಲಘಟಗಿ: ಪಟ್ಟಣದ ಹಾಳು ಬಾವಿಗೆ ಬಿದ್ದು ಮೂರು ದಿನಗಳಿಂದ ಒದ್ದಾಡುತ್ತಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ದಳದವರು ಮಾಲೀಕರಿಗೆ ಒಪ್ಪಿಸಿದ್ದಾರೆ. ಪಟ್ಟಣದ ಬೆಂಡಿಗೇರಿ ಓಣಿಯ ಬಳಿಯಲ್ಲಿ ಶಿಕ್ಷಕ ವಿ.ವಿ. ಆಲೂರು ಸಾಕಿದ್ದ ಬೆಕ್ಕು ಅಲ್ಲಿನ ಹಾಳು ಬಾವಿಗೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಕಂಡು ಅಲ್ಲಿನ ಜನ ಎರಡು ದಿನಗಳ ವರೆಗೆ 80 ಅಡಿ ಆಳದಲ್ಲಿದ್ದ ಬೆಕ್ಕನ್ನು ತೆಗೆಯಲು ಹರ ಸಾಹಸ ಮಾಡಿ ವಿಫಲರಾಗಿದ್ದಾರೆ. ನಂತರ ಸ್ಥಳೀಯ ಅಗ್ನಿ ಶಾಮಕ ದಳದವರಿಗೆ ದೂರು ನೀಡಿದ ನಂತರ ಅಗ್ನಿ ಶಾಮಕ ದಳದವರು ಮೇಲಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯರ ಸಹಕಾರದೊಂದಿಗೆ ಬಾವಿಗೆ ಇಳಿದು ಬೆಕ್ಕನ್ನು ಹೊರ ತೆಗೆದಿದ್ದಾರೆ. ನಂತರ ಬೆಕ್ಕನ್ನು ಸಾಕಿದ ಮಾಲೀಕ ವಿ.ವಿ. ಆಲೂರು ಹಾಗೂ ಸ್ಥಳೀಯರು ಅಗ್ನಿ ಶಾಮಕದಳದವರಿಗೆ ಅಭಿನಂದಿಸಿದರು.
ಹಲ್ಲೆ: ಮಹಿಳೆ ಸಾವು
ಹುಬ್ಬಳ್ಳಿ: ಪತಿಯಿಂದ ದೈಹಿಕವಾಗಿ ಹಿಂಸೆಗೊಳಗಾದ ಮಹಿಳೆಯೊಬ್ಬಳು ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಎಂಟಿಎಸ್ ಕಾಲೋನಿಯ ಮಂಜುನಾಥ ಅಲಿಯಾಸ್ ಸೈಂಟಿಸ್ಟ್ ಮಂಜ್ಯಾ ಭಂಡಾರಿ ಎಂಬ ವ್ಯಕ್ತಿ ಇನ್ನೊಬ್ಬ ಮಹಿಳೆಯ ಮಾತುಕೇಳಿ ತನ್ನ ಪತ್ನಿ ರೇಣುಕಾ ಭಂಡಾರಿ ಅವರಿಗೆ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ದೂರು ನೀಡಲಾಗಿದ್ದು, ನಾಲ್ಕು ದಿನಗಳ ಹಿಂದೆ ನಡೆದ ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ರೇಣುಕಾ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾಳೆ.
ಆಟೋ ಪಲ್ಟಿ: ಸಾವು
ಹುಬ್ಬಳ್ಳಿ: ವೇಗವಾಗಿ ಬರುತ್ತಿದ್ದ ಆಟೋವೊಂದು ಇಲ್ಲಿನ ಹುಬ್ಬಳ್ಳಿ ಪಿ.ಬಿ. ರಸ್ತೆಯ ಸುಣ್ಣದ ಭಟ್ಟಿ ಬಳಿ ಪಲ್ಟಿಯಾದ ಪರಿಣಾಮ ಆಟೋ ಚಾಲಕ ಮೃತಪಟ್ಟಿದ್ದಾನೆ. ಗಬ್ಬೂರ ಕಡೆಯಿಂದ ಬಿಡ್ನಾಳ ಕ್ರಾಸ್ನತ್ತ ವೇಗವಾಗಿ ಬರುತ್ತಿದ್ದ ಟೋಪಣ್ಣ ಸೋಮಶೇಖರ ಹೂಗಾರ ಸುಣ್ಣದ ಭಟ್ಟಿ ಬಳಿ ಚಲಾಯಿಸುತ್ತಿದ್ದ ಅಟೋ ನಿಯಂತ್ರಿಸಲಾಗದೇ ಪಲ್ಟಿ ಮಾಡಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ದಾಖಲಾಗಿದ್ದನು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

