ಧಾರವಾಡ

ಆತ್ಮರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳಿ: ಐಜಿಪಿ

Published On :

ಮುನಿರಾಬಾದ್: ಸಾರ್ವಜನಿಕರು ಡಕಾಯಿತರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಂದೂಕು ಇಟ್ಟುಕೊಳ್ಳುವುದು ಸೂಕ್ತವೆಂದು ಈಶಾನ್ಯ ವಲಯದ ಐಜಿಪಿ ವಜೀರ್ ಅಹ್ಮದ್ ಸಲಹೆ ನೀಡಿದ್ದಾರೆ.
ಶನಿವಾರ ಮುನಿರಾಬಾದಿನಲ್ಲಿ ಡಕಾಯಿತರಿಂದ ಹಲ್ಲೆಗೊಳಗಾದವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕನ್ನಡಪ್ರಭಕ್ಕೆ ಈ ವಿಷಯವನ್ನು ತಿಳಿಸಿದರು. ಸಾರ್ವಜನಿಕರ ಬಳಿ ಹತ್ತಿರ ಎಲ್ಲ ಐಷಾರಾಮಿ ವಸ್ತುಗಳಿವೆ. ಆದರೆ, ಅವರ ಭದ್ರತೆಗಾಗಿ ಏನೂ ಇಲ್ಲ. ಡಕಾಯಿತರು ಇದರ ಲಾಭ ಪಡೆದು ದರೋಡೆ ಮಾಡುತ್ತಿದ್ದಾರೆ. ಒಂದು ವೇಳೆ ಸಾರ್ವಜನಿಕರ ಹತ್ತಿರ ಬಂದೂಕು ಇದ್ದರೆ ಅವರು ಡಕಾಯಿತರಿಂದ ರಕ್ಷಣೆ ಪಡೆಯಬಹುದು ಎಂದರು. ಮುನಿರಾಬಾದಿನ ಚಿತ್ತರಂಜನ್ ಏಕಾಂಗಿಯಾಗಿ ಡಕಾಯಿತರೊಂದಿಗೆ ಹೋರಾಡಿದ್ದನ್ನು ಶ್ಲಾಘಿಸಿದ ಐಜಿಪಿ ವಜೀರ್ ಅಹಮದ್, ಒಂದು ವೇಳೆ ಚಿತ್ತರಂಜನ್ ಬಳಿ ಬಂದೂಕು ಇದ್ದರೆ ಖಂಡಿತವಾಗಿ ಡಕಾಯಿತರನ್ನು ಹಿಡಿಯಬಹುದಾಗಿತ್ತು ಎಂದು ಹೇಳಿದರು.
ಗಸ್ತಿಗೆ ಮುಂದೆ ಬನ್ನಿ: ರಾತ್ರಿ ಗಸ್ತು ತಿರುಗಲು ಗ್ರಾಮದ ಯುವಕರು ಮುಂದೆ ಬರಬೇಕೆಂದು ಅವರು ಮನವಿ ಮಾಡಿದರು. ಈ ನಿಟ್ಟಿನಲಿ 100 ಜನರ ಯುವಕರ ಪಟ್ಟಿಯನ್ನು ಮಾಡಿ ಪೊಲೀಸ್ ಇಲಾಖೆಗೆ ನೀಡುವಂತೆ ಗ್ರಾಮದ ಹಿರಿಯರಿಗೆ ತಿಳಿಸಿದರು. ಡಕಾಯಿತಿ ಪ್ರಕರಣದಿಂದ ಭಯಭೀತರಾಗಿರುವ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 3 ದಿನದಲ್ಲಿ ಜನಸಂಪರ್ಕ ಸಭೆ ಕರೆಯಲಾಗುವುದು. ಡಕಾಯಿತರ ಬಂಧನಕ್ಕಾಗಿ ವ್ಯಾಪಕ ಜಾಲ ಬೀಸಲಾಗಿದೆ ಎಂದು ಐಜಿಪಿ ವಜೀರ ಅಹ್ಮದ್ ತಿಳಿಸಿದರು. ಕೊಪ್ಪಳ ಎಸ್ಪಿ ಮಂಜುನಾಥ ಅಣ್ಣಿಗೇರಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.