ಧಾರವಾಡ

ರಾಜ್ಯ ರಚನೆಯಾಗಿ 60 ವರ್ಷಆದರೂ ಕನ್ನಡಕ್ಕಾಗಿ ಭಿಕ್ಷೆ: ಪಾಪು

Published On :

ಧಾರವಾಡ: ಕರ್ನಾಟಕ ರಾಜ್ಯ ರಚನೆಯಾಗಿ 60 ವರ್ಷಗಳು ಸಮೀಪಿಸಿದರೂ ಕನ್ನಡದ ಅನುಷ್ಠಾನಕ್ಕಾಗಿ ಇನ್ನೂ ಭಿಕ್ಷೆ ಬೇಡುವ ಸ್ಥಿತಿ ಇದೆ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ವಿಷಾದಿಸಿದ್ದಾರೆ.
ರಾಜ್ಯೋತ್ಸವ ಅಂಗವಾಗಿ ನವೆಂಬರ್ ತಿಂಗಳಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುಮಾರು ಅರ್ಧ ಗಂಟೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಪಾಪು ಕಿಡಿಕಾರಿದರು.
ಕನ್ನಡ ಅನುಷ್ಠಾನಕ್ಕಾಗಿ ಸರ್ಕಾರದಿಂದ ಈಗಾಗಲೇ 300ಕ್ಕೂ ಹೆಚ್ಚು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ನಮ್ಮ ಮಂತ್ರಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆ ಸುತ್ತೋಲೆಗಳು ಜಾರಿಗೆ ಬರುತ್ತಿಲ್ಲ. ಕನ್ನಡಕ್ಕೆ ಸಿಗಬೇಕಾದ ಪ್ರಾಧಾನ್ಯತೆ ದೊರೆಯುತ್ತಿಲ್ಲ ಎಂದರು. 20 ಪ್ರಾಚೀನ ಭಾಷೆಗಳಲ್ಲಿ ಕನ್ನಡ ಹಾಗೂ ತಮಿಳು ಮೊದಲ ಸ್ಥಾನ ಪಡೆಯುತ್ತವೆ. ತಮಿಳು ತನಗೆ ಬೇಕಾದ ಸ್ಥಾನಮಾನ ಪಡೆದರೆ, ಕನ್ನಡಕ್ಕೆ ಮಾತ್ರ ಅದು ಸಾಧ್ಯವಾಗುತ್ತಿಲ್ಲ. ಕನ್ನಡಿಗರು ಮಾತ್ರ ಕನ್ನಡ ಉಳಿಸಿ ಎಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತಿದ್ದಾರೆ.
ಕನ್ನಡ ಕಾವಲು ಸಮಿತಿ ಅಥವಾ ಪ್ರಾಧಿಕಾರ ಕರ್ನಾಟಕದಲ್ಲಿ ಮಾತ್ರ ಇದೆಯೇ ಹೊರತು ತಮಿಳುನಾಡು, ಆಂಧ್ರ ಹಾಗೂ ಮಹಾರಾಷ್ಟ್ರದಲ್ಲಿಲ್ಲ. ನಮ್ಮ ಶಿಕ್ಷಣ ಮಾಧ್ಯಮ ಪೂರ್ತಿ ಇಂಗ್ಲಿಷ್ಮಯವಾಗುತ್ತಿದೆ.
 ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ನಾಯಿಕೊಡೆಗಳಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಹುಟ್ಟಿಕೊಳ್ಳುತ್ತಿರುವುದು ಕನ್ನಡಕ್ಕೆ ಬಂದ ಧಕ್ಕೆ ಅಲ್ಲವೇ? 5ನೇ ತರಗತಿವರೆಗೆ ಕನ್ನಡದಲ್ಲಿಯೇ ಬೋಧಿಸಿ ನಂತರ ಇಂಗ್ಲಿಷ್ನ್ನು ಒಂದು ಭಾಷೆಯಾಗಿ ಕಲಿಸಲು ನಮ್ಮದು ತಕರಾರಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.