ಧಾರವಾಡ

ಸಾವಿರಾರು ನಿವೇಶನರಹಿತರಿಂದ ಬೃಹತ್ ಆಂದೋಲನ

Published On :

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಬಡಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಸೋಮವಾರ ಸಾವಿರಾರು ನಿವೇಶನ ರಹಿತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಅವಳಿ ನಗರದಲ್ಲಿ ಕಂದಾಯ ಇಲಾಖೆಗೆ ಸೇರಿದ ಹತ್ತಾರು ಎಕರೆ ಜಮೀನಿದೆ. ತಡಸಿಕೊಪ್ಪದ ಸರ್ವೇ ನಂ. 110ರಲ್ಲಿಯೂ ಖಾಲಿ ಜಾಗವಿದೆ. ಈ ಕುರಿತು ದಾಖಲೆ ಸಹ ಹುಡುಕಿ ಕೊಡಲಾಗಿದೆ. ಆದರೆ, ಇದೇ ವೇಳೆ ಅರಣ್ಯ ಇಲಾಖೆಯವರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಕಂದಾಯ ಇಲಾಖೆಯವರೂ ಅರಣ್ಯ ಅಧಿಕಾರಿಗಳ ವಾದವನ್ನೆ ಬಂಬಲಿಸುತ್ತಿದ್ದಾರೆ. ಅಲ್ಲದೇ ಸುಳ್ಳು ಹೇಳಿ ದುರ್ಬಲ ವರ್ಗದವವರ ಆಂದೋಲನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮುರಿಯಲು ಯತ್ನಿಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಮೂಲಕ ಸಾಗಿದರು. ಅವಳಿ ನಗರದಲ್ಲಿನ ಕಡುಬಡವರಿಗೆ ನಿವೇಶನ ಒದಗಿಸುವ ದಿಸೆಯಲ್ಲಿ ಸರ್ಕಾರ ಕೂಡಲೇ ಆಸಕ್ತಿ ತೋರಿಸಿ ಕಾರ್ಯಪ್ರವೃತ್ತವಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಯಿತು. ಆಂದೋಲನ ಸಂಚಾಲಕ ನಾಗರಾಜ ಗುರಿಕಾರ, ಆರ್.ವಿ. ಹಿರೇವಡೆಯರ, ಕಿರಣ ರಜಪೂತ, ನಾಗರಾಜ ನಾಡಕರ್ಣಿ, ರಾಮು ನೀರಲಗಿ, ಶಂಕರ ಕಬಾಡೆ, ದೂರಪ್ಪ ಗಾಂಡೋಳ್ಕರ, ನಾಗರಾಜ ಪಮ್ಮಾರ, ಹಮೀದ ನದಾಫ್ ಮತ್ತು ನೂರಾರು ಮಹಿಳೆಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.