ಧಾರವಾಡ

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ: ಲಾಡ್

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 8
ವಿದ್ಯಾ ಕೇಂದ್ರಗಳು ಎನಿಸಿದ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಉತ್ತಮ ಭವಿಷ್ಯ ಹಾಗೂ ಭದ್ರ ಬುನಾದಿ ಹಾಕಲು ತಮ್ಮ ಜವಾಬ್ದಾರಿ ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರಗಳನ್ನು ನೀಡಬೇಕೆಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಭಾರತ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲು ಸಮಯ ನೀಡುವವನೇ ನಿಜವಾಗಿ ದೊಡ್ಡ ವ್ಯಕ್ತಿ. ಅಂತವರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು.
ಸಮಾಜವನ್ನು ಕಟ್ಟಲು ಯಾರು ತಮ್ಮ ಸಮಯ ಮೀಸಲು ಇಡುವವರು ಅವರೇ ಪ್ರಮುಖರು. ಹಣ ನೀಡುವುದು ದೊಡ್ಡದಲ್ಲ. ದೇಶದ ಬುನಾದಿಯೇ ವಿದ್ಯಾ ಕೇಂದ್ರಗಳು. ಈ ಕೇಂದ್ರಗಳಲ್ಲಿ ದೇಶದ ಭವಿಷ್ಯ ನಿರ್ಮಾಣಗೊಳ್ಳುತ್ತದೆ ಎಂದರು. ಕವಿವಿ ವಿದ್ಯಾ ಮಂಡಳ ವಿಭಾಗದ ವಿಶೇಷಾಧಿಕಾರಿ ಡಾ. ಐ.ಎಂ. ಖಾಜಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎ.ಪಿ. ಮುರಾರಿ ಮಾತನಾಡಿದರು. ಮಂಡಳದ ಎಂ.ಎನ್. ಮೋರೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಳದ ಶ್ರೀ ಸಿದ್ಧಾರೂಢಮಠದ ರಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ಬೆಳಗಾವಿ ಲೋಕಾಯುಕ್ತ ಡಿಎಸ್ಪಿ ಜಿ.ಆರ್. ಪಾಟೀಲ, ಪಾಲಿಕೆ ಸದಸ್ಯರಾದ ಸುಭಾಸ ಸಿಂಧೆ, ರಾಜು ಅಂಬೊರೆ, ಮೀನಾಕ್ಷಿ ಸಂತಬಾನವರ, ಶಂಕರ ಶೇಳಕೆ, ಗೃಹ ರಕ್ಷಕ ದಳದ ವಸಂತ ಚವ್ಹಾಣ, ಕ್ರೀಡಾಧಿಕಾರಿ ಡಾ. ರಾಜೇಂದ್ರ ರೋಖಡೆ, ರಾಜು ಮಾಡಿಕ, ಮಂಜುನಾಥ ಚವ್ಹಾಣ, ಲಕ್ಷ್ಮಿ ಜಾಧವ, ಅಂಜಲಿ ಭೋಸಲೆ, ರಶ್ಮೀ ಜಾಧವ, ಎಂ.ಪಿ. ಮೋರೆ, ಹನಮಂತ ಲಾಡ್, ಎಂ.ಎನ್. ಪವಾರ ಅವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಪ್ರಕಾಶ ಘಾಟಗೆ, ಡಿಡಿಪಿಐ ಡಾ.ಬಿ.ಕೆ.ಎಸ್. ವರ್ಧನ, ಪ್ರೊ. ಚಂದ್ರಶೇಖರ ಪವಾರ, ಪ್ರೊ. ಬಿ.ಎಚ್. ಮೋರೆ, ಜೆ.ಎಲ್. ಜಾಧವ, ಪುರುಷೋತ್ತಮ ಜಾಧವ, ಶಿವಾಜಿ ಘಾಟಗೆ, ಮಲ್ಲೇಶಪ್ಪ ಶಿಂಧೆ, ಎಂ.ಎಂ. ವನಳ್ಳಿ, ಪ್ರೊ. ಈಶ್ವರಾವ ಕರಾತ, ಸವಿತಾ ಕೌಜಗೇರಿ, ಕಾಲೇಜು ಪ್ರಾಚಾರ್ಯ ಎಂ.ಎಸ್. ಗಾಣಿಗೇರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.