ಧಾರವಾಡ

ಚುಟುಕು ಸಾಹಿತ್ಯ ಮೌಲ್ಯ ಹೇಳುವ ವಚನವಾಗಲಿ

Published On :

ಧಾರವಾಡ: ನಿತ್ಯದ ಬದುಕೇ ಸಾಹಿತ್ಯಕ್ಕೆ ಪ್ರೇರಣೆ. ಬದುಕು ಕಲಿಸುವುದನ್ನು ಯಾವ ವಿಶ್ವವಿದ್ಯಾಲಯ ನೀಡಲ್ಲ. ಬದುಕು ಕಲಿಯಲು ದಾರಿ ತೋರುತ್ತದೆ. ಬದುಕಿನಿಂದ ಕಲಿಯಬೇಕಾದ ಅಂಶ ಬಳಷ್ಟಿದೆ ಎಂದು ಮಕ್ಕಳ ಸಾಹಿತಿ, ಅವಿಭಜಿತ ಧಾರವಾಡ ಜಿಲ್ಲೆ ಚುಟುಕು ಸಮ್ಮೇಳನದಸರ್ವಾಧ್ಯಕ್ಷ ನಿಂಗಣ್ಣ ಕುಂಟಿ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಂಟಿಯಾಗಿ ಇತ್ತೀಚೆಗೆ ಏರ್ಪಡಿಸಿದ್ದ ಚುಟುಕು ಸಮ್ಮೇಳನದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯವೇ ಚುಟುಕು ಸಾಹಿತ್ಯದ ಅಡಿಪಾಯ. ಚುಟುಕು ಬರಿ ಚುಟುಕು ಆಗಬಾರದು. ಅದು ಜೀವನದ ಮೌಲ್ಯಗಳನ್ನು ಸಾರಿ ಹೇಳುವ ವಚನಗಳಾಗಬೇಕು ಎಂದರು.
ಕಾನೂನು ಸುವ್ಯವಸ್ಥೆ ಪೊಲೀಸ್ ಉಪ ಆಯುಕ್ತ ಸುಭಾಸ ಗುತಿಮನಿ, ಚುಟುಕು ಸಾಹಿತ್ಯ ಜನಮನದಲ್ಲಿ ಬಹುಕಾಲ ಉಳಿಯಬಲ್ಲದು. ಏಕೆಂದರೆ ಅದು ನೇರ ಹಾಗೂ ಆಡು ಮಾತಿನ ಕೊಡುಗೆ. ನಿತ್ಯ ಜೀವನದಲ್ಲಿ ಕಂಡು ಬರುವ ಅನೇಕ ಪ್ರಸಂಗಗಳು ಚುಟುಕು ಸಾಹಿತ್ಯದ ಪ್ರೇರಣೆ ನೀಡಬಲ್ಲವು ಎಂದರು.
ಸಾನ್ನಿಧ್ಯ ವಹಿಸಿದ್ದ ಚುಸಾಪ ಗೌರವಾಧ್ಯಕ್ಷ ಹಾಗೂ ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಗಳು, ಅನುಭವ ಮಂಟಪದ ವಚನ ಸಾಹಿತ್ಯದಂತೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮಾರ್ಗದರ್ಶನದಲ್ಲಿ ಚುಟುಕು ರಚನೆಯಾಗಲಿ. ಜನವರಿ 14ಕ್ಕೆ ಅಥಣಿ ಶ್ರೀಮಠದ ಆಶ್ರಯದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ್ವಿತೀಯ ಸಮ್ಮೇಳನ ಏರ್ಪಡಿಸುವುದಾಗಿ ಹೇಳಿದರು.
ನಿಗದಿ ಸರ್ಕಾರಿ ಕಾಲೇಜು ಉಪನ್ಯಾಸಕ ಚಂದ್ರಕಾಂತ ವಜ್ರಮಟ್ಟಿ, ಹುಬ್ಬಳ್ಳಿ ತಾಲೂಕು ಘಟಕದ ಪದ್ಮಜಾ ಜೆ. ಉಮರ್ಜಿ, ಶಂಕರ ಹಲಗತ್ತಿ, ಕೃಷ್ಣಮೂರ್ತಿ ಕುಲಕರ್ಣಿ, ಮಂಜುಳಾ ನಾಮದೇವ ಇತರು ಇದ್ದರು.

ಸಮ್ಮೇಳನದ ನಿರ್ಣಯಗಳು
ಧರ್ಮ ಕಾರ್ಯಗಳನ್ನು ಅವಹೇಳನ ಮಾಡುವ ಕೃತಿಗಳಿಗೆ ಪ್ರೋತ್ಸಾಹ ನೀಡುವ ವ್ಯವಸ್ಥೆ ಆರೋಗ್ಯಕರ ಬರವಣಿಗೆ ಅಲ್ಲ ಎಂದು ಚುಸಾಪ ಅಭಿಪ್ರಾಯ ಪಡುತ್ತದೆ.
 ಇನ್ನು ಧಾರವಾಡದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ವಾಸ್ತವ್ಯದ ಸಭಾಂಗಣವನ್ನು ಸಾಮಾನ್ಯ ಸಭೆ ಸಮಾರಂಭಗಳಿಗೂ ನೀಡುವಲ್ಲಿ ಮುಂದಾಗಬೇಕು. ಸಭೆ-ಸಮಾರಂಭ ಸಡೆಸಲು ಅನೇಕ ಸಂಘಟನೆಗಳು ಪರದಾಡುವಂತಾಗಿದೆ. ಇದನ್ನು ಸರ್ಕಾರ ತಪ್ಪಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.