ಧಾರವಾಡ

ಇನ್ಕಾಮೆಕ್ಸ್: ವೈವಿಧ್ಯ ವಸ್ತುಗಳ ಪ್ರದರ್ಶನ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 15
ಅಮರಗೋಳ ಎಪಿಎಂಸಿ ಆವರಣದಲ್ಲಿ ನಡೆದಿರುವ ಇನ್ಕಾಮೆಕ್ಸ್ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಜನ ಸಾಮಾನ್ಯರಿಗೆ ಬೇಕಾಗುವಂತಹದ್ದು ಎಲ್ಲವೂ ಲಭ್ಯವಿದೆ.
ಒಂದು ಸಣ್ಣ ಕೈಗಾರಿಕೆಗಳಿಗೆ ಅಗತ್ಯವಾದ ಡ್ರಿಲ್ಲಿಂಗ್ ಮಶಿನ್, ಸಿಎನ್ಸಿ, ಲೇಥ್ ಮಶಿನ್ಗಳು, ಬಾಯ್ಲರ್, ಗ್ರಾನೈಟ್ ಫಾಲಿಷಿಂಗ್, ಸಿಮೆಂಟ್ ಮಿಕ್ಸರ್ಗಳಿದ್ದರೆ, ಇನ್ನೊಂದು ಕಡೆ ನಾನಾ ರೀತಿಯ ಉಪ್ಪಿನಕಾಯಿ, ಚಟ್ನಿ, ಚಕ್ಕುಲಿ ಸೇರಿದಂತೆ ವೈವಿಧ್ಯಮ ಆಹಾರ ಪದಾರ್ಥಗಳ ಮಳಿಗೆ, ಇನ್ನೊಂದು ಸಾಲಿನಲ್ಲಿ ಖಾದಿ ಬಟ್ಟೆಗಳು, ಟಿ ಶರ್ಟ್ಗಳ ಮಾರಾಟ ಮಳಿಗೆಗಳಿದ್ದವು.
ಇದರ ಜೊತೆಗೆ ಆಧುನಿಕ ಜೀವನ ಶೈಲಿಗೆ ಬೇಕಾಗುವಂತಹ ವಿದ್ಯುತ್ ಚಾಲಿತ ಮಸಾಜ್ರಗಳು ಅದರೊಟ್ಟಿಗೆ ಕಡಿಮೆ ವೆಚ್ಚದಲ್ಲಿ ಮನೆ ಹಾವೇರಿ ಮೂಲದ ಭವಾನಿ ಬ್ರಿಕ್ಸ್ ಪರಿಸರ ಸ್ನೇಹಿ, ಪ್ಲಾಸ್ಟರ್ ಅಗತ್ಯವಿಲ್ಲದ, ಶೇ. 30ರಷ್ಟು ಸ್ಥಳ ಮತ್ತು ಹಣ ಉಳಿತಾಯ ಮಾಡುವಂತಹ ಇಟ್ಟಿಗೆಗಳನ್ನು ತಯಾರಿಸುತ್ತಿದ್ದು, ಸಿಮೆಂಟ್ ಇಟ್ಟಿಗೆ ತಯಾರಿಕೆ ಪ್ರಾತ್ಯಕ್ಷಿಕೆ ತೋರಿಸಲಾಗುತ್ತಿದೆ. ಮಳಿಗೆ ಮೇಲ್ವಿಚಾರಕರ ಪ್ರಕಾರ ಆರ್ಡರ್ ನೀಡಿದ ಹತ್ತು ದಿನಗಳಲ್ಲಿ 25 ಸಾವಿರಕ್ಕಿಂತ ಹೆಚ್ಚು ಇಟ್ಟಿಗೆ ಪೂರೈಸಲಾಗುವುದು. ಸದ್ಯ ಮೂರು ಯಂತ್ರಗಳಿಂದ ಇಟ್ಟಿಗೆಗಳನ್ನು ತಯಾರಿಸುತ್ತಿದ್ದು, ಒಟ್ಟು 15 ಕಾರ್ಮಿಕರು ಇಟ್ಟಿಗೆ ತಯಾರಿಸುವ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಸಮಕಾಲೀನ ಪ್ರವಾಸೋದ್ಯಮ: ಗ್ರಾಮೀಣ ಜೀವನ, ಸಮಕಾಲೀನ ಜೀವನದ ಸಾದೃಶ್ಯಗಳನ್ನು ಪ್ರಸ್ತುತ ಪಡಿಸುತ್ತಿರುವ ಹಾವೇರಿ ಜಿಲ್ಲೆ ಗೋಟಗೋಡಿಯಲ್ಲಿರುವ ದಾಸನೂರು ಸಮೂಹದ ಉತ್ಸವ ರಾಕ್ ಗಾರ್ಡನ್ ಗ್ರಾಮೀಣ ಜೀವನದ ಪ್ರಮುಖ ಭಾಗವಾಗಿರುವ ಹೈನುಗಾರಿಕೆಯನ್ನು ಪ್ರದರ್ಶಿಸಿದೆ. ಹುಬ್ಬಳ್ಳಿಯ ಯುನಿಟೇಕ್ ಇಂಡಸ್ಟ್ರಿ, ಕಾಂಕ್ರಿಟ್ ಮಿಕ್ಸರ್, ಪಾನ್ ಮಿಕ್ಸರ್, ಪೆವರ್ಸ್ಗಳನ್ನು ಪ್ರದರ್ಶಿಸುತ್ತಿದೆ.
ಮುಕ್ತ ಪ್ರದರ್ಶನ ವಿಭಾಗದಲ್ಲಿ ಜಪಾನ್ ತಂತ್ರಜ್ಞಾನದ ಸೈಕಲ್ಗಳನ್ನು ಕೆ.ಕೆ. ಒಶಿರೊ ಎಂಬ ವಿತರಕ ಸಂಸ್ಥೆ ಪ್ರದರ್ಶನಕ್ಕೆ ಇರಿಸಿದೆ. ರು. 7ರಿಂದ ರು. 15 ಸಾವಿರ ವೆಚ್ಚದ ವಿವಿಧ ಮಾದರಿ ಸೈಕಲ್ಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇದರ ಜೊತೆಗೆ ಹೊಲ, ಫಾರ್ಮ್ಹೌಸ್, ಸಮುದ್ರ ತೀರಗಳಲ್ಲಿ ಬಳಸುವ ಪೆಟ್ರೋಲ್ ಆಧಾರಿತ ಆಲ್ಟೆರೈನ್ ಬೈಕ್ನ್ನು ಕೂಡ ಪ್ರದರ್ಶನಕ್ಕಿಡಲಾಗಿದ್ದು, ವಿವಿಧ ಮಾಡೆಲ್ಗಳಲ್ಲಿರುವ ಈ ಬೈಕ್ನ ಬೆಲೆ ಮೂರು ಲಕ್ಷ ರು. ಗಳಿಂದ ಆರಂಭವಾಗಿ ಐದು ಲಕ್ಷದವರೆಗೆ ಇದೆ.
ವೆಂಡರ್ಸ್ ಡೆವಲಪ್ಮೆಂಟ್ನ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ಪ್ರಾಜೆಕ್ಟ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಣ್ಣ ರೈತರಿಗೆ ಅನುಕೂಲವಾಗುವಂತಹ ಕೈ ಚಾಲಿತ ಯಂತ್ರ ಸಂಶೋಧಿಸಿದ್ದು, ಈ ಯಂತ್ರದಿಂದ ಗೋವಿನ ಜೋಳವನ್ನು ತೆನೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಒಂದು ತೆನೆ ಸುಲಿಯುವುದಕ್ಕೆ 30-40 ಸೆಕೆಂಡ್ ಸಾಕು. 1-2 ಎಕರೆ ಇರುವ ರೈತರಿಗೆ ಇದು ಅನುಕೂಲವಾಗುತ್ತಿದ್ದು, ಇದೇ ಯಂತ್ರವನ್ನು ಸೈಕಲ್ ಮೇಲೆ ಅಳವಡಿಸುವುದಕ್ಕೆ ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮಂಜುನಾಥ.ಟಿ, ನವೀನ್ ಮಠದ, ಮಂಜುನಾಥ ಬಿ, ಮತ್ತು ಸಚಿನ್ ಸಂಕೋಜಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.