ಧಾರವಾಡ

ನಾಳೆ ಬಿಎಸ್ಸೆನ್ನೆಲ್ ಸಂಘಕ್ಕೆ ಸುವರ್ಣ ಸಂಭ್ರಮ

Published On :

ಹುಬ್ಬಳ್ಳಿ: ಬಿಎಸ್‌ಎನ್‌ಎಲ್ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಸೆ. 22ರಂದು ಬೆಳಗ್ಗೆ 10.30ಕ್ಕೆ ನಗರದ ಮಹಾನಗರ ಪಾಲಿಕೆ ನೌಕರರ ಸಹಕಾರಿ ಪತ್ತಿನ ಸಂಘದ ಸಭಾಭವನದಲ್ಲಿ ನಡೆಯಲಿದೆ.
ರಾಜ್ಯ ಸಹಕಾರಿ ಸಂಘಗಳ ನಿಬಂಧಕ ಡಾ೤ ಎನ್.ಎಸ್. ಚನ್ನಪ್ಪಗೌಡ ಹಾಗೂ ಬಿಎಸ್ಸೆನ್ನೆಲ್ ಮುಖ್ಯ ಟೆಲಿಕಾಂನ ಪ್ರಧಾನ ವ್ಯವಸ್ಥಾಪಕ ಕಚೇರಿ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕಿ ಎಲ್‌ಆರ್‌ವಿಎಂ ರಾವ್ ಹಾಗೂ ಬಿಎಸ್ಸೆನ್ನೆಲ್ ಟೆಲಿಕಾಂ ಹುಬ್ಬಳ್ಳಿಯ ಪ್ರಧಾನ ವ್ಯವಸ್ಥಾಪಕ ಬಿ. ಕೃಷ್ಣಶರ್ಮ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಸಂಘದ ಅಧ್ಯಕ್ಷರೂ ಆಗಿರುವ ಹುಬ್ಬಳ್ಳಿ ಬಿಎಸ್ಸೆನ್ನೆಲ್‌ನ ಮುಖ್ಯ ಲೆಕ್ಕಾಧಿಕಾರಿ ಪದಕಿ ಶ್ರೀನಿವಾಸ ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿ ಸಾಧನೆ ಮಾಡಿರುವ ಕೆಲವೇ ಸಹಕಾರಿ ಪತ್ತಿನ ಸಹಕಾರಿ ಸಂಘಗಳಲ್ಲಿ ಭಾರತ ಸಂಚಾರ ನಿಗಮದ ನೌಕರರ ಸಹಕಾರಿ ಪತ್ತಿನ ಸಂಘ ಒಂದಾಗಿದ್ದು, ಇದೀಗ ಸುವರ್ಣ ವರ್ಷಾಚರಣೆ ಸಂಭ್ರಮದಲ್ಲಿದೆ. ಕರ್ನಾಟಕದ ಮೊದಲನೇ ದೂರ ಸಂಪರ್ಕ ವಿಭಾಗವು 1960ರ ಏಪ್ರಿಲ್ 1ರಂದು ಬೆಂಗಳೂರಿನಲ್ಲಿ ಆರಂಭವಾಯಿತು. ಎರಡನೇ ವಿಭಾಗ ಹುಬ್ಬಳ್ಳಿಯಲ್ಲಿ 1961ರ ಮೇ ತಿಂಗಳಿನಲ್ಲಿ ಆರಂಭವಾಯಿತು. ಹುಬ್ಬಳ್ಳಿಯಲ್ಲಿ ಹೊಸ ವಿಭಾಗ ಆರಂಭವಾದಾಗ ಪುಣೆ, ಹೈದರಾಬಾದ್ ಹಾಗೂ ಬೆಂಗಳೂರಿನಿಂದ ವರ್ಗವಾಗಿ ಬಂದಿದ್ದ ಸಿಬ್ಬಂದಿಯಿಂದ ಸಮ್ಮಿಳಿತವಾಗಿತ್ತು. ಈ ಸಿಬ್ಬಂದಿ ಆರ್ಥಿಕ ಅಗತ್ಯ್ನ ಪೂರೈಸಲು ಒಂದು ಸಹಕಾರ ಸಂಘದ ಅಗತ್ಯವನ್ನು ಆಗಿನ ನೌಕರರಾದ ದಿ. ಜಿ.ಬಿ. ಮುತಾಲಿಕ್, ವಿ.ವಿ. ನಂಜನಗೂಡು, ಎಸ್.ಕೆ. ಕುಲಕರ್ಣಿ, ಎನ್.ಜಿ. ಕುಲಕರ್ಣಿ, ಡಿ.ಎ. ಕುಂದಗೋಳ ಅವರು ನೌಕರರ ಸಹಕಾರಿ ಪತ್ತಿನ ಸಹಕಾರಿ ಸಂಘದ ಸ್ಥಾಪನೆಗೆ ಅಡಿಪಾಯ ಹಾಕಿದರು.
ಸಂಘಕ್ಕೆ 1963ರ ಆ. 21ರಂದು ಪತ್ತಿನ ಸಹಕಾರಿ ಸಂಘದ ಸ್ಥಾಪನೆಗೆ ಚಾಲನೆ ದೊರೆಯಿತು. ಬಿಸ್ಸೆನ್ನೆಲ್ ನೌಕರರ ಪತ್ತಿನ ಸಹಕಾರಿ ಸಂಘ 1988ರಲ್ಲಿ ರಜತ ವರ್ಷಾಚರಣೆ ಆಚರಿಸಿತು. 2007ನೇ ಸಾಲಿನಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹದ ಸಂದರ್ಭ ಮೊದಲ ರಾಜ್ಯ ಪ್ರಶಸ್ತಿ ಪ್ರಾಪ್ತವಾದರೆ 2010ರಲ್ಲಿ 57ನೇ ಸಹಕಾರಿ ಸಪ್ತಾಹದ ಸಂದರ್ಭ ಉತ್ತಮ ಆಡಳಿತ ಹಾಗೂ ಸಹಕಾರಿ ನಾಯಕತ್ವಕ್ಕಾಗಿ ರಾಜ್ಯಮಟ್ಟದ ಪ್ರಶಸ್ತಿ ಪಡೆಯಿತು. 2012ರಲ್ಲಿ ನಡೆದ 59ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭದಲ್ಲಿ ಈ ಸಂಘ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವಕ್ಕೆ ಪಾತ್ರವಾಯಿತು.
1971-72ರಲ್ಲಿ ಸಂಘದ ಶೇರು ಬಂಡವಾಳ ರು. 2 ಲಕ್ಷಕ್ಕೆ ಏರಿದರೆ, 1976-77ರಲ್ಲಿ ಇದು ದ್ವಿಗುಣವಾಗಿ ರು. 4 ಲಕ್ಷವಾಯಿತು. 2009ರಲ್ಲಿ ಶೇರು ಬಂಡವಾಳ ರು. 10 ಕೋಟಿಯಷ್ಟು ಹೆಚ್ಚಿತು. 2013ರಲ್ಲಿ ಈ ಬಂಡವಾಳ ರು. 15 ಕೋಟಿಗೆ ಏರುವ ಗುರ್ನಿ ಹೊಂದಲಾಗಿದೆ.
ಸಂಘದ ಸದಸ್ಯರಿಗೆ ರು. 50 ಸಾವಿರವರೆಗೆ ದೀರ್ಘಾವಧಿ ಸಾಲ್ನ ನೀಡುವ ಶಕ್ತಿ ಬಂದಿದೆ. ಈಗ ಸಂಘದ ನಿಯಮದ ಪ್ರಕಾರ ಸದಸ್ಯರಿಗೆ ತಲಾ ರು. 2.40 ಲಕ್ಷವರೆಗೆ ಅಲ್ಪಾವಧಿ ಸಾಲ್ನ ಮತ್ತು ರು. 3.60 ಲಕ್ಷದವರೆಗೆ ದೀರ್ಘಾವಧಿ ಸಾಲ್ನ ನೀಡಬಹುದಾಗಿದೆ. ಸಂಘದ ಹಣಕಾಸಿನ ಸಾಮರ್ಥ್ಯ್ನ ಅನುಸರಿಸಿ ರು. 5 ಲಕ್ಷದವರೆಗೂ ದೀರ್ಘಾವಧಿ ಸಾಲ ನೀಡುವ ಅವಕಾಶವಿದೆ. 2012- 13ನೇ ಸಾಲಿನಲ್ಲಿ ಸಂಘದ ಲಾಭದ ಮೊತ್ತ ರು. 72,62,163 ಆಗಿದೆ. ಸಂಘದ ಸದಸ್ಯರ ಸಂಖ್ಯೆ ಇದೀಗ 4,411 ಇದ್ದು ಶೇ. 11ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ದೀರ್ಘಾವಧಿ ಸಾಲದ ಇಂದಿನ ಬಡ್ಡಿದರ ಶೇ. 10.20ರಷ್ಟು ಇದ್ದರೆ ಅಲ್ಪಾವಧಿ ಸಾಲದ ಬಡ್ಡಿ ದರ ಶೇ. 12 ಇದೆ.
ಕಾಯಂ ಠೇವಣಿಯ ಒಟ್ಟು ಮೊತ್ತ ರು. 8,20,32,600 ಇದ್ದರೆ ರಿಕರಂಟ್ ಖಾತೆಯಲ್ಲಿ ಪ್ರಸ್ತುತ ಸಾಲಿನಲ್ಲಿ ರು. 1,26,33,084 ಇದೆ. ಉಳಿತಾಯ ಖಾತೆಯಲ್ಲಿ ಪ್ರಸ್ತುತ ಸಾಲಿನಲ್ಲಿ ರು. 52,49,070 ಇದೆ. ವರ್ಕಿಂಗ್ ಬಂಡವಾಳ ರು. 25,49,55,570 ಇದೆ. ಸಾಲ ವಸೂಲಾತಿಯ ಪ್ರಮಾಣ ಶೇ. 99ರಷ್ಟಿದೆ ಎಂದು ಶ್ರೀನಿವಾಸ ಪದಕಿ ವಿವರಿಸಿದರು.
ಸಂಘದ ಉಪಾಧ್ಯಕ್ಷ ಎಂ.ಎನ್. ಇಡಗುರಿ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.