ವಿಪತ್ತು ನಿರ್ವಹಣೆ: ತಕ್ಷಣಕ್ಕೆ ಸ್ಪಂದಿಸಿ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 19
ಜಿಲ್ಲೆಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಪ್ರಕೋಪಗಳ ಸಂದರ್ಭದಲ್ಲಿ ತಕ್ಷಣದ ಸ್ಪಂದನೆ ಮುಖ್ಯವಾಗಿದೆ. ಈಗಾಗಲೇ ಜಾರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ತಾಂತ್ರಿಕತೆ ಹಾಗೂ ಸಂಪನ್ಮೂಗಳ ಸಕಾಲ ಬಳಕೆಯಿಂದ ಅದು ಸಾಧ್ಯವಾಗುವಂತೆ ಸಂಬಂಧಿತ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಮೀರ್ ಶುಕ್ಲ ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಸ್ವಯಂಚಾಲಿತ ವಿಕೋಪ ನಿರ್ವಹಣೆ ಯೋಜನೆ ಕುರಿತಾದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸೂಕ್ತ ವ್ಯವಸ್ಥೆ ಕೈಗೊಳ್ಳಿ: ಸದ್ಯ ಇರುವ ವಿಕೋಪ ನಿರ್ವಹಣಾ ವ್ಯವಸ್ಥೆಯ ಸಕಾಲಕ್ಕೆ ಸ್ಪಂದಿಸದಿರುವ ಕುರಿತು ಹಲವು ಪ್ರಶ್ನ್ನೆಗಳು ಏಳುತ್ತಿವೆ. ವೆಬ್ಬೇಸ್ ಇಟ್ಟುಕೊಂಡು ಸಂಪರ್ಕ ಜಾಲದ ಮೂಲಕ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಅನಾಹುತ ಸಂಭವಿಸಿದರೂ ಸೂಕ್ತ ಕ್ರಮ ಜರುಗಿಸಲು ಪರಿಷ್ಕೃತ ವ್ಯವಸ್ಥೆ ಸಹಕಾರಿ ಆಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಡಿಸೆಂಬರ್ ವೇಳೆಗೆ ಜಾರಿ: ಸಂಬಂಧಿತ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಅಕ್ಟೋಬರ್ ಮೊದಲ ವಾರದಲ್ಲಿ ಎಲ್ಲ ಮಾಹಿತಿಯನ್ನು ತಮಗೆ ನೀಡಲಾದ ಯೂಸರ್ ಐಡಿ ಉಪಯೋಗಿಸಿಕೊಂಡು ಸೂಚಿತ ವೆಬ್ಗೆ ಅಪಲೋಡ್ ಮಾಡಬೇಕು. ಆ ಮಾಹಿತಿಯ ವಾಸ್ತವಿಕ ಸಮೀಕ್ಷೆ ನವೆಂಬರ್ದಲ್ಲಿ ನಡೆಯಲಿದ್ದು, ಡಿಸೆಂಬರ್ ವೇಳೆಗೆ ಸ್ವಯಂಚಾಲಿತ ವಿಕೋಪ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಎಲ್ಲರೂ ಜವಾಬ್ದಾರಿಯಿಂದ ವಿಪತ್ತು ಸಂದರ್ಭದಲ್ಲಿ ಬಾಧಿತರಿಗೆ ತಕ್ಷಣ ಪರಿಹಾರ ಕಲ್ಪಿಸುವ ಈ ವಿಷಯವನ್ನು ಅತ್ಯಂತ ಗಂಭೀರತೆ ಹಾಗೂ ಕಾಳಜಿಯಿಂದ ನಿರ್ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಸ್ವಯಂಚಾಲಿತ ವಿಪತ್ತು ನಿರ್ವಹಣೆ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವುದನ್ನು ಯೋಜಿಸಿದ ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜಕುಮಾರ ಮಾತನಾಡಿ, ತಾಂತ್ರಿಕತೆಯನ್ನು ಶಿಸ್ತುಬದ್ಧ ಮಾಹಿತಿ ಸಂಗ್ರಹಣೆಗೆ, ಅದರ ನಿರ್ವಹಣೆ ಹಾಗೂ ವಿಕೋಪ ಸಂದರ್ಭ ಅನಾಹುತಕ್ಕನುಸರಿಸಿ ತಕ್ಷಣದ ಕ್ರಮಗಳನ್ನು ಜಾರಿಗೊಳಿಸಲು ಪ್ರಾಯೋಗಿಕವಾಗಿ ಜಾರಿಯಾಗುತ್ತಿರುವ ನೂತನ ವ್ಯವಸ್ಥೆ ಕುರಿತು ವಿವರಿಸಿದರು.
ಸದ್ಯ ಜಾರಿಯಲ್ಲಿರುವ ವಿಪತ್ತು ನಿರ್ವಹಣಾ ವ್ಯವಸ್ಥೆ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇದ್ದರೂ ಅದು ಪುಸ್ತಕ ಬಳಕೆಗೆ ಸೀಮಿತವಾಗಿದ್ದು, ಅನಾಹುತವಾದಾಗ ಬಹಳಷ್ಟು ಬಾರಿ ಸರಿಯಾದ ಪರಿಹಾರ ಕಾರ್ಯ ನಿಯೋಜಿಸಲು ನಿರುಪಯುಕ್ತವೆನಿಸುತ್ತದೆ. ಇದನ್ನು ಹೆಚ್ಚು ಪ್ರಾಯೋಗಿಕ ವ್ಯವಸ್ಥೆಯಾಗಿಸಲು ರಾಯಚೂರಿನಲ್ಲಿ ಸ್ವಯಂಚಾಲಿತ ವಿಪತ್ತು ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯು ಕೊಡಗು, ಬಾಗಲಕೋಟಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿದೆ. ಹಿಂದಿನ ವ್ಯವಸ್ಥೆಯಲ್ಲಿ ಮಾಹಿತಿ ಕಾಲೋಚಿತಗೊಳಿಸುವುದಕ್ಕೆ ಹಾಗೂ ಯಾವ ಯಾವ ಸಂಪನ್ಮೂಲಗಳನ್ನ್ನು ಹೇಗೆ ಎಲ್ಲಿಂದ ಬಳಸಿಕೊಳ್ಳಬೇಕು ಎನ್ನ್ನುವ ಕುರಿತು ಸ್ಪಷ್ಟತೆ ಇರುತ್ತಿರಲಿಲ್ಲ. ಈಗ ಪರಿಷ್ಕೃತ ವ್ಯವಸ್ಥೆಯಲ್ಲಿ 145 ಸಂಪನ್ಮೂಲಗಳ ಮಾಹಿತಿ ಕ್ರೋಡೀಕರಣವಾಗಲಿದೆ ಎಂದರು.
ಸಾರ್ವಜನಿಕವಾಗಿ ಅನಾಹುತ ಸಂಭವಿಸಿದಾಗ ತಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಅಧಿಕಾರಿಗಳು ಉದಾಸೀನ ತೋರಬಾರದು. ಸರ್ಕಾರದ ಪ್ರತಿನಿಧಿಯಾಗಿ ಗಮನಹರಿಸಿ ಕಾರ್ಯನಿರ್ವಹಿಸುವ ಮಾನವೀಯ ಕಾರ್ಯವಾಗಬೇಕು. ಈ ಪರಿಷ್ಕೃತ ವ್ಯವಸ್ಥೆಯಡಿ ಹೆಲಿಪ್ಯಾಡ್, ನೀರಿನಮಟ್ಟ ಯಾವುದೇ ಒಂದು ಇಲಾಖೆಯು ಅನುಸರಿಸಬೇಕಾದ ವಿಷಯಗಳ ಪಟ್ಟಿ, ಸಂಪನ್ಮೂಲ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳು ಹೊಸದಾಗಿ ಸೇರಿವೆ. ಒಟ್ಟಾರೆ 65 ಮಾಹಿತಿ ಶೇಖರಣಾ ನಮೂನೆಗಳಿವೆ. ಅನಾಹುತ ಸಂದರ್ಭ ಅನಾವಶ್ಯಕ ಜೀವಹಾನಿ, ಆಸ್ತಿ-ಪಾಸ್ತಿ ಹಾನಿ ತಪ್ಪಿಸಲು ಅವಶ್ಯಕ ವ್ಯವಸ್ಥೆ ರೂಪಿಸಿ ಅದನ್ನ್ನು ಕಾಲೋಚಿತವಾಗಿ ಇಟ್ಟುಕೊಳ್ಳಲು ಸೂಕ್ತ ಎಚ್ಚರಿಕೆ ಸಂದೇಶ ಕಳುಹಿಸುವ ವ್ಯವಸ್ಥೆ ಕೂಡಾ ಇದರಲ್ಲಿದೆ. ಶಾಲೆ, ಔಷಧಾಲಯ, ಆಸ್ಪತ್ರೆ, ಹೆಲಿಪ್ಯಾಡ್, ಆಹಾರ ಇನ್ನಿತರ ವಿಷಯಗಳ ಪ್ರತ್ಯೇಕ ಪ್ರದೇಶವಾರು ನಕ್ಷೆಗಳ್ನ್ನು ಒಳಗೊಳ್ಳಲಿದೆ. ದೇಶದ ಶೇ. 60-70ರಷ್ಟು ಪ್ರದೇಶ ಒಂದಿಲ್ಲೊಂದು ವಿಕೋಪಕ್ಕೆ ತುತ್ತಾಗುತ್ತಿರುತ್ತದೆ. ಕೇಂದ್ರ ಸರ್ಕಾರ ಈ ಕುರಿತು ವಿಪತ್ತು ನಿರ್ವಹಣೆಗೆ ಅಂದಾಜು ವಾರ್ಷಿಕ ರು. 25,000 ಕೊಟಿ ವೆಚ್ಚ ಮಾಡುತ್ತಿದೆ. ಧಾರವಾಡ ಜಿಲ್ಲೆಯ ಸ್ವಯಂಚಾಲಿತ ವಿಪತ್ತು ನಿರ್ವಹಣೆ ನೂತನ ವ್ಯವಸ್ಥೆ ಡಿಸೆಂಬರ್ ವೇಳೆಗೆ ಸಾಧ್ಯವಾಗಿರುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಒಮ್ಮತದಿಂದ ಕಾರ್ಯನಿರ್ವಹಿಸಬೇಕು ಎಂದು ಮನೋಜಕುಮಾರ್ ತಿಳಿಸಿದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಿಂದ ಸಂಪಸ್ಮೂಲ ವ್ಯಕ್ತಿಯಾಗಿದ್ದ ಡಾ ಆರ್. ಧರ್ಮರಾಜು ಪ್ರಾಸ್ತಾವಿಕ ಮಾತನಾಡಿದರು. ಡಾ ಜಿ. ವಿಶ್ವನಾಥ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

