27ರಿಂದ ರಾಷ್ಟ್ರಮಟ್ಟದ ಟ್ರೌಮಾಸಿಕಾನ್ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 24
ಟ್ರೌಮಾ (ವಿವಿಧ ರೀತಿಯ ಅವಘಡಗಳು)ದಿಂದ ಉಂಟಾಗುವ ಸಾವು-ನೋವುಗಳ ಕುರಿತು ಎಸ್‌ಡಿಎಂ ವೈದ್ಯಕೀಯ ಕಾಲೇಜಿನಿಂದ ಡಾ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸೆ. 27ರಿಂದ ಮೂರು ದಿನಗಳವರೆಗೆ ರಾಷ್ಟ್ರಮಟ್ಟದ ಟ್ರೌಮಾಸಿಕಾನ್-2013 ಸಮ್ಮೇಳನ ನಡೆಯಲಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸಜ್ಞ ಸತ್ಯಶಂಕರ ಮಾತನಾಡಿ, 28ರ ಮಧ್ಯಾಹ್ನ 1ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಎಸ್‌ಡಿಎಂನ ವೈದ್ಯಕೀಯ ನಿರ್ದೇಶಕ ಡಾ ನಿರಂಜನಕುಮಾರ ನೆರವೇರಿಸುತ್ತಾರೆ. ಇಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷುಬ್ಧದಿಂದ ರಸ್ತೆ ಅಪಘಾತ, ವಿವಿಧ ಅವಘಡಗಳು ನಡೆಯುತ್ತಿದ್ದು, ಇದೊಂದು ಜಗತ್ತಿನ ಪಿಡುಗಾಗಿ ಕಾಡುತ್ತಿದೆ ಎಂದರು.
ಟ್ರೌಮಾ ಮತ್ತು ಅದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಸಾವು-ನೋವು, ವಿವಿಧ ದುರ್ಘಟನೆ, ಅನಾಚಾರ, ವಂಚನೆ ಮೋಸ ಮುಂತಾದವು ನಡೆಯುತ್ತಿದ್ದು, ಇದರಿಂದ ಅಂದಾಜು ಒಂದು ಲಕ್ಷ ಜನರು ಪ್ರತಿ ವರ್ಷಕ್ಕೆ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಎಸ್‌ಡಿಎಂ ವೈದ್ಯಕೀಯ ಆಸ್ಪತ್ರೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಟ್ರೌಮಾಸಿಕಾನ್ ಎಂಬ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ವೈದ್ಯರಿಗೆ ತುರ್ತು ಟ್ರೌಮಾ ಚಿಕಿತ್ಸೆ ಕುರಿತು ಕಾರ್ಯಾಗಾರ, ವಿವಿಧ ವಿಷಯಗಳ ಕುರಿತು ಚರ್ಚೆ ಜರುಗಲಿವೆ. ದೇಶದ ವಿವಿಧ ಭಾಗಗಳಿಂದ ಸುಮಾರು 30ಕ್ಕೂ ಹೆಚ್ಚು ಪರಿಣಿತರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದರು. ಡಾ ಮಲ್ಲಿಕಾರ್ಜುನ ದೇಸಾಯಿ, ಡಾ ರಾಜಶೇಖರ ಮೋಹನ್ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

