ಧಾರವಾಡ

ಕಲಾವಿದೆ ಕಾಳಮ್ಮರ 4ನೇ ಪುಣ್ಯಸ್ಮರಣೆ ಇಂದು

Published On :

ಧಾರವಾಡ: ಜಾನಪದ ಹಾಡಿನ ಕಣಜ ಎಂದೇ ಹೆಸರು ಪಡೆದಿದ್ದ ತಾಲೂಕಿನ ದೇವರ ಹುಬ್ಬಳ್ಳಿಯ ಕಾಳಮ್ಮ ರುದ್ರಪ್ಪ ಹೊಂಗಲ ಅವರ 4ನೇ ಪುಣ್ಯಸ್ಮರಣೆಯನ್ನು ಅವ್ವ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಧೆ ಸೆ. 27ರಂದು ಸಂಜೆ 5.30ಕ್ಕೆ ಹಮ್ಮಿಕೊಂಡಿದೆ.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕಾಳಮ್ಮ ಅವರ ಪುಣ್ಯಸ್ಮರಣೆ ಸಮಾರಂಭದ ನಿಮಿತ್ತ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಜಾನಪದ ಕಲಾವಿದೆಯರಾದ ಗುರುಬಸವ್ವ ಟೋಂಗಳಿ, ಈರವ್ವ ಹುರಳಿ, ನಾಗವ್ವ ಅಸೂಂಡಿ, ಲಕ್ಷ್ಮೀಬಾಯಿ ಹರಿಜನ ಮತ್ತು ಯಲ್ಲವ್ವ ಪಾಟೀಲ ಅವರಿಗೆ ಅವ್ವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ರಂಗಾಯಣ ಆಡಳಿತಾಧಿಕಾರಿ ಕೆ.ಎಚ್. ಚನ್ನೂರ, ಹಿರಿಯ ಪತ್ರಕರ್ತ ಲಕ್ಷ್ಮೀಕಾಂತ ಬೀಳಗಿ, ಕನ್ನಡ ಉಪನ್ಯಾಸಕಿ ಸುಕನ್ಯಾ ಪಿ, ಪತ್ರಕರ್ತ ಹರ್ಷವರ್ಧನ ಶೀಲವಂತ ಹಾಗೂ ಉಪನ್ಯಾಸಕ ಕೆ.ಎಸ್. ಸಬರದ ಭಾಗವಹಿಸುತ್ತಾರೆ. ಅವ್ವ ಸಂಸ್ಥೆಯ ಗೌರವಾಧ್ಯಕ್ಷ ಕೆ. ಜಗಚಂದ್ರ ಅಧ್ಯಕ್ಷತೆ ವಹಿಸುತ್ತಾರೆ.
ಜೋಗುಳ, ಬೀಸೊ ಕಲ್ಲಿನ ಪದ, ಭತ್ತ, ರಾಗಿ ಕುಟ್ಟುವ ಪದ, ಮಂಗಳಾರತಿ ಪದ ಮುಂತಾದವುಗಳಲ್ಲಿ ಕಾಳಮ್ಮ ತಮ್ಮದೇ ಛಾಪು ಮೂಡಿಸಿದ್ದರು. 1943ರ ಜೂ. 1ರಂದು ಜನಿಸಿದ ಕಾಳಮ್ಮ ಅವರು ಜೋಗುಳ ಹಾಡುವ ಪದಗಳಿಂದ ಜಾನಪದ ಗಾಯನ ಕರಗತ ಮಾಡಿಕೊಂಡವರು. ಇವರಲ್ಲಿ ಅಡಗಿದ್ದ ಕಲಾ ಪ್ರತಿಭೆ ಗುರುತಿಸಿದ ಧಾರವಾಡ ಆಕಾಶವಾಣಿ ಕೇಂದ್ರ ಹಾಡಲು ಅವಕಾಶ ನೀಡಿತು.ತಾವು ಕಾಲವಾದ ನಂತರವು ಕಲೆ ಮುಂದುವರಿಯಬೇಕು ಎಂದು ಬಯಸಿದ ಕಾಳಮ್ಮ ಅವರು ಚಿಕ್ಕ ಪುತ್ರ ಮಲ್ಲಪ್ಪ ಅವರನ್ನು ರಂಗಭೂಮಿಗೆ ಅಣಿ ಮಾಡಿದ್ದಾರೆ. ಅವರು ಈಗಾಗಲೇ ಉತ್ತಮ ಹಾಸ್ಯ ಕಲಾವಿದ ಎಂದೆನಿಸಿಕೊಂಡಿದ್ದಾರೆ ಎಂದು ಅವ್ವ ಟ್ರಸ್ಟ್ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.