ಧಾರವಾಡ

ಆಟೋ ಚಾಲಕರಿಗೆ ಆಮ್‌ಆದ್ಮಿ ಬಿಮಾ ಯೋಜನೆ

Published On :

ಧಾರವಾಡ: ಆಟೋ ರಿಕ್ಷಾ ಚಾಲಕರಿಗಾಗಿ ಭಾರತ ಸರ್ಕಾರ ಎಲ್‌ಐಸಿಯೊಂದಿಗೆ ಕೈಜೋಡಿಸಿ ಆಮ್ ಆದ್ಮಿ ಬಿಮಾ ಯೋಜನೆ ಅನುಷ್ಠಾನಗೊಳಿಸಿದ್ದು, ಚಾಲಕರು ಸದುಪಯೋಗ ಪಡೆಯಬೇಕೆಂದು ಧಾರವಾಡ ಶಹರ ಆಟೋ ರಿಕ್ಷಾ ಚಾಲಕರ ಸಂಘ ತಿಳಿಸಿದೆ. ಯೋಜನೆಗೆ ಪಾತ್ರರಾಗಬೇಕಾದ ಅಭ್ಯರ್ಥಿ 18ರಿಂದ 59ರ ವಯೋವುತಿ ಇರಬೇಕು. ಚಾಲಕರು ಮಾಡಿಸಿದ ಪಾಲಿಸಿ ಹಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತದೆ. ಯೋಜನೆಯಡಿಯಲ್ಲಿ ನೈಸರ್ಗಿಕ ಸಾವಿಗೆ ತುತ್ತಾದ ಪಾಲಿಸಿದಾರನಿಗೆ ರು. 30 ಸಾವಿರ, ಆಕಸ್ಮಿಕ ಸಾವಿಗೆ ರು. 75 ಸಾವಿರ, ಶಾಶ್ವತ ಅಂಗವಿಕಲತೆಗೆ ರು. 75 ಸಾವಿರ ಹಾಗೂ ಭಾಗಶಃ ಅಂಗವಿಕಲತೆಗೆ ರು. 37 ಸಾವಿರ ನೀಡಲಾಗುತ್ತದೆ. ಅಲ್ಲದೇ, ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆದ್ದರಿಂದ ಆಟೋ ಚಾಲಕರು ಆಮ್ ಆದ್ಮಿ ಬಿಮಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಪ್ರತಿನಿಧಿ ಎಂ.ಎಂ. ಬೇಪಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮೋಟಾರ್ ರಿವೈಂಡಿಂಗ್ ತರಬೇತಿ
ಧಾರವಾಡ: ಇಲ್ಲಿನ ರುಡ್‌ಸೆಟ್ ಸಂಸ್ಥೆಯಲ್ಲಿ ಮೋಟಾರ್ ರಿವೈಂಡಿಂಗ್ ತರಬೇತಿಯಲ್ಲಿ ಜರುಗಿತು. ರುಡ್‌ಸೆಟ್ ಸಂಸ್ಥೆಯ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ ಮೂರ್ತಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಎಂ.ಡಿ. ವೀರಾಪುರ ಸ್ವಾಗತಿಸಿದರು. ಉಪನ್ಯಾಸಕ ಪ್ರದೀಪ ಮೇಲ್ಗಡೆ ನಿರೂಪಿಸಿದರು. ಉಪನ್ಯಾಸಕ ಜಗದೀಶ ಪೂಜಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.