ಧಾರವಾಡ

ದೇಶದ ಚಿತ್ರಣ ಬಿತ್ತರಿಸಿದ ವಿದ್ಯಾರ್ಥಿಗಳು

Published On :

ಧಾರವಾಡ: ಭಾರತ ಪ್ರಮುಖವಾಗಿ ಎದುರಿಸುತ್ತಿರುವ ಬಡತನ, ಭಯೋತ್ಪಾದನೆ, ನಿರುದ್ಯೋಗ, ಕೀಳರಿಮೆ, ಜೀತ ಪದ್ಧತಿ ಹಾಗೂ ಜಾಗತೀಕರಣದ ಪ್ರಭಾವದಿಂದ ದೇಶದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ವಿಭಿನ್ನವಾಗಿ ಇಲ್ಲಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ಜಾಗೃತಿಗೊಳಿಸಿದರು.
ಇದು ನಡೆದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ವಲಯ ಮಟ್ಟದ ಯುವಜನೋತ್ಸವದಲ್ಲಿ. ಇಲ್ಲಿನ ಕರ್ನಾಟಕ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯುವ ಯುವಜನೋತ್ಸವದಲ್ಲಿ 25ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯುತ್ತಿವೆ. ಅಲ್ಲದೇ, ವಲಯ ನಂ. 1ರ ವ್ಯಾಪ್ತಿಯ 26 ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಭಾಗಹಿಸಿದ್ದಾರೆ. ಸೋಮವಾರ ಕರ್ನಾಟಕ ಕಾಲೇಜಿನ ಬಿಸಿಎ ಸಭಾಂಗಣ, ಪ್ರಾಚಾರ್ಯರ ಸೈರಲ್ ಸಭಾಭವನ, ವಿ.ಕೃ. ಗೋಕಾಕ ಗ್ರಂಥಾಲಯ, ಸಿಬ್ಬಂದಿ ಸಭಾಭವನ, ಕಾಲೇಜಿನ ಸಂಗೀತ ವಿಭಾಗ ಪೂರ್ತಿ ವಿದ್ಯಾರ್ಥಿಗಳೇ ತುಂಬಿದ್ದರು. ಅವರ ಪ್ರತಿಭೆಗಳು ಒಂದೊಂದಾಗಿ ಇಲ್ಲಿ ಅನಾವರಣಗೊಂಡವು.
ಹಿಡಿದಿಟ್ಟ ದೇವರ ಹೆಣ: ಬಿಸಿಎ ಸಭಾಂಗಣದಲ್ಲಿ ನಡೆದ 30 ನಿಮಿಷಗಳ ಏಕಾಂಕ ನಾಟಕಗಳು ಹೆಚ್ಚು ಯುವ ಸಮೂಹ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಜೆಎಸ್ಸೆಸ್ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳು ಪ್ರಸ್ತುತ ಪಡೆಸಿದ 'ದೇವರ ಹೆಣ' ನಾಟಕ ಜಾಗೃತಗೊಳಿಸಿತು. ಈ ನಾಟಕದಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಜತೆಗೆ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವ ಬಡವನ ರೋದನ ಅಭಿವ್ಯಕ್ತಗೊಳಿಸಿದ ಸಂದರ್ಭ ಕೆಲಕಾಲ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು.
ಸಮೂಹ ಗಾಯನ ಸ್ಪರ್ಧೆಯೂ ನಡೆಯಿತು. ಸಂಗೀತ ವಿಭಾಗದಲ್ಲಿ ನಡೆದ ಪಾಶ್ಚಿಮಾತ್ಯ ಶೈಲಿ ಸಂಗೀತ ಸ್ಪರ್ಧೆಯಲ್ಲಿ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಒಬ್ಬರಿಗಿಂತ ಒಬ್ಬರು ಉತ್ತಮ ಹಾಡುಗಳನ್ನು ಹಾಡುವ ಮೂಲಕ ಸಂಗೀತಾಸ್ತರ ತಲೆ ಅಲ್ಲಾಡಿಸುವಂತೆ ಮಾಡಿದರು. ಅಲ್ಲದೇ, ಕೆಲ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರು. ಹಾಗೆಯೇ, ವಿ.ಕೃ. ಗೋಕಾಕ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಚಿತ್ರಕಲೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಥಳದಲ್ಲಿಯೇ ಬಿಡಿಸುವ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕ್ಷಣ ಮಾತ್ರದಲ್ಲಿಯೇ ವಿಭಿನ್ನ ಬಗೆಯ ಚಿತ್ರಗಳನ್ನು ಬಿಡಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಕ್ಲಾಸಿಕ್, ಫೋಕ್, ಕ್ಲಾಸಿಕ್ ಇನ್‌ಸ್ಟ್ರೂಮೆಂಟಲ್ ಸೇರಿದಂತೆ ವಿವಿಧ ಪ್ರಕಾರಗಳ ಸಂಗೀತವನ್ನು ಪ್ರಸ್ತುತಪಡಿಸಿದರು.
ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ...
ಸೆಮಿಸ್ಟರ್ ಪದ್ದತಿ ಒತ್ತಡದಿಂದ ಹೊರ ಬರುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಯುವಜನೋತ್ಸವ ಸಹಕಾರಿ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಸೂಪ್ತ ಪ್ರತಿಭೆ ಹೊರತರಲು ಇದು ವೇದಿಕೆ. ಯುವಜನೋತ್ಸವದಲ್ಲಿ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ಸ್ಪರ್ಧೆಯಲ್ಲಿ ಭಾಗಹಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ದೊರೆತಂತಾಗಿದೆ.
ಡಾ೤ ರಾಜೇಶ್ವರಿ ಕೆಂಚಪ್ಪನ್ನವರ, ಯುವಜನೋತ್ಸವ ಸಂಯೋಜಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.