ಹರಭಟ್, ಕೆಇ ಬೋರ್ಡ್ಸ್ ವಿದ್ಯಾರ್ಥಿಗಳ ಮೇಲುಗೈ
ಧಾರವಾಡ: ಆತಿಥೇಯ ಕುಂದಗೋಳದ ಹರಭಟ್ಟ ಪಿಯು ಕಾಲೇಜಿನ ಬಾಲಕರು ಹಾಗೂ ಇಲ್ಲಿನ ಮಾಳಮಡ್ಡಿ ಕೆ.ಇ. ಬೋರ್ಡ್ಸ್ ಪಿಯು ಕಾಲೇಜಿನ ಬಾಲಕಿಯರು ಶನಿವಾರ ಕುಂದಗೋಳದಲ್ಲಿ ನಡೆದ ಧಾರವಾಡ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಯೋಗ ಸ್ಪರ್ಧೆಯಲ್ಲಿ ಹಿರಿಮೆ ಮೆರೆದರು.
ಹರಭಟ್ಟ ಕಾಲೇಜಿನ ಸುರೇಶ ಕೇರಿ ಬಾಲಕರ ವಿಭಾಗದಲ್ಲಿ ಅಗ್ರಸ್ಥಾನ ಪಡೆದರೆ, ಕೆ.ಇ. ಬೋರ್ಡ್ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜ್ಯೋತಿ ಅಸುಂಡಿ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಆದರು. ಇದೇ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಿಯಾಂಕಾ ಪ್ರಮೋದ ಜೋಶಿ ರಿಧಮಿಕ್ ಯೋಗದಲ್ಲಿ ಅಗ್ರಸ್ಥಾನ ಸಂಪಾದಿಸಿದರು.
ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಸ್ಪರ್ಧೆಯಲ್ಲಿ ಹೆಚ್ಚಿನ ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾದ ಬಾಲಕರು- ಸುರೇಶ ಕೇರಿ(ಹರಭಟ್ಟ ಕಾಲೇಜ, ಕುಂದಗೋಳ), ವಿಜಯಕುಮಾರ (ಪಿ.ಸಿ. ಜಾಬಿನ್ ಕಾಲೇಜು, ಹುಬ್ಬಳ್ಳಿ), ಈರಣ್ಣ ಹಿರೇಮಠ, ಮಾಲತೇಶ ಬಡಿಗೇರ, ಬಸವರಾಜ ಹರವಿ, ನಿಂಗರೆಡ್ಡಿ ಎಂ. ಇಟಗಿ, ಶ್ರೀಕಾಂತ ಎಸ್. ಸಾಳುಂಕೆ(ಹರಭಟ್ಟ ಕಾಲೇಜು, ಕುಂದಗೋಳ).
ಬಾಲಕಿಯರು- ಜ್ಯೋತಿ ಅಸುಂಡಿ(ಕೆಇ ಬೋರ್ಡ್ಸ್, ಧಾರವಾಡ), ಲಕ್ಷ್ಮೀದೇವಿ ಹೊಸಮನಿ (ಹರಭಟ್ಟ ಕಾಲೇಜು, ಕುಂದಗೋಳ)-, ರುಕ್ಸಾನಾ ಎಂ. ಹೊರಕೇರಿ, ಪೂಜಾ ಜಗದೇವನವರ(ಹರಭಟ್ಟ ಕಾಲೇಜು, ಕುಂದಗೋಳ), ಸಂಗೀತಾ ಹಿರೇಮಠ, ವಿದ್ಯಾ ಕಾಲವಾಡ ಹಾಗೂ ಪ್ರಿಯಾಂಕಾ ಜೋಶಿ(ರಿಧಮಿಕ್ ಯೋಗ ಎಲ್ಲರೂ ಕೆ.ಇ. ಬೋರ್ಡ್ಸ್ ಕಾಲೇಜು, ಧಾರವಾಡ). ಆಯ್ಕೆಯಾದರು. ಎಂ.ಎಸ್. ಅರೇರ, ಪಿ.ಜೆ. ಕವಲೂರ, ಸಿದ್ದಾರೂಢ ಹೂಗಾರ, ಎಸ್.ಪಿ. ಹೊಂಬಳ, ಲಕ್ಷ್ಮಣ ಜಿಗದಿನ್ನಿ ಹಾಗೂ ವೀರಯ್ಯ ಪ್ರಸಾದಿಮಠ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಮನಗುಂಡಿ ಮಠದ ಬಸವಾನಂದ ಶ್ರೀಗಳು ಸ್ಪರ್ಧೆಗಳನ್ನು ಉದ್ಘಾಟಿಸಿದರು. ಶಿಕ್ಷಣ ಸಮಿತಿ ಅಧ್ಯಕ್ಷ ಎಸ್. ಟಿ. ಗೌಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯಜ್ಜ ಶ್ರೀಗಳು, ಶಿಕ್ಷಣ ಇಲಾಖೆ ಗಣೇಶ ಪೂಜಾರಿ, ಶೈಲಜಾ ಗಾಂವಕರ, ಎಸ್.ಟಿ. ಶಿವಳ್ಳಿ, ಜಿ.ಎ. ಪೂಜಾರ. ಪ್ರಾಚಾರ್ಯ ಬಿ.ಎ. ಮುಂದಿನಮನಿ, ವಸಂತ ಮುರ್ಡೇಶ್ವರ, ಬಿ.ಡಿ. ಕುರಕುರಿ, ಕಾರ್ಯದರ್ಶಿ ಎಂ.ಎಸ್. ಅಕ್ಕಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

