ಧಾರವಾಡ

ಮತದಾನ ಮತದಾರನ ಸಾಮಾಜಿಕ ಬದ್ಧತೆ

Published On :

ಹುಬ್ಬಳ್ಳಿ: ಸಾರ್ವತ್ರಿಕ ಚುನಾವಣೆಗಳ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಮತದಾರನ ಸಾಮಾಜಿಕ ಬದ್ಧತೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಟಿ.ವಿ. ಮಂಜುನಾಥ ತಿಳಿಸಿದ್ದಾರೆ.
ನಗರದ ಜಿ.ಕೆ. ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿ.ಕೆ. ಕಾನೂನು ಕಾಲೇಜು, ಜೆಎಸ್ಎಸ್ ಸಕ್ರಿ ಕಾನೂನು ಕಾಲೇಜ್, ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ (ಸ್ವೀಪ್) ಕುರಿತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ರಾಜಕೀಯ ವ್ಯವಸ್ಥೆಯ ಭವಿಷ್ಯವನ್ನ್ನು ನಿರ್ಧರಿಸುವ ಮತದಾನದ ದಿನವನ್ನು ಕೇವಲ ರಜಾದಿನವನ್ನ್ನಾಗಿ ಕಳೆಯುವ ಸುಶಿಕ್ಷಿತರ ಧೋರಣೆ ಸೂಕ್ತವಾದುದಲ್ಲ. ಮತದಾನ ಕೇವಲ ಕರ್ತವ್ಯ ಮಾತ್ರವಲ್ಲ, ಅದು ನಮ್ಮ ಬದ್ಧತೆಯಾಗಿದೆ. ಅದನ್ನು ಮತದಾರರಾದ ನಾವು ಪ್ರಜ್ಞಾವಂತಿಕೆಯಿಂದ ಬಳಸಬೇಕಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ ಪ್ರಾತಿನಿಧ್ಯಕ್ಕೆ ಅರ್ಥಬರುವಂತೆ ಮಾಡಬೇಕು ಎಂದರು. ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಸಿ.ಎಸ್. ಪಾಟೀಲ ಮಾತನಾಡಿ, ಭಾರತ ಹೊರತುಪಡಿಸಿ ನಮ್ಮ ನೆರೆಹೊರೆಯ ಬೇರಾವ ದೇಶಗಳಲ್ಲೂ ಪ್ರಜಾಪ್ರಭುತ್ವಕ್ಕೆ ಗಟ್ಟಿಯಾದ ಅಸ್ತಿತ್ವ ಕಾಣುತ್ತಿಲ್ಲ. ಬಹುಸಂಸ್ಕೃತಿಯ ದೇಶವಾದ ಭಾರತದಲ್ಲಿ ಈ ವ್ಯವಸ್ಥೆಯ ಬಗ್ಗೆ ನಂಬಿಕೆ ಇನ್ನ್ನೂ ಗಟ್ಟಿಯಾಗಿದೆ ಎಂದರು. ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ರೂಪಾ ಇಂಗಳಳ್ಳಿ, ಸುಶಿಕ್ಷಿತರಲ್ಲಿ ಮತದಾನದ ಕಾಳಜಿ ಕಡಿಮೆಯಾಗಿದೆ. ಸ್ವಯಂಪ್ರೇರಣೆಯಿಂದ ಮತದಾನ ಮಾಡಲು ನಮ್ಮ ಯುವಜನರು ಮುಂದಾಗಬೇಕು ಎಂದರು.
ಜಿಲ್ಲಾ ಸ್ವೀಪ ಸಮಿತಿಯ ನೋಡಲ್ ಅಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿ, ಚುನಾವಣಾ ಪ್ರಕ್ರಿಯೆ, ಮತದಾರರ ಪಟ್ಟಿ ಹಾಗೂ ಪಟ್ಟಿ ಪರಿಷ್ಕರಣೆ ಹಂತದಲ್ಲಿ ಮತದಾರರ ಪಾತ್ರವನ್ನ್ನೂ ನಿರೂಪಿಸಿ ಮತದಾನದ ದಿನ ಪ್ರತಿಯೊಬ್ಬರೂ ತಪ್ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಕಾನೂನು ಕಾಲೇಜಿನ ಪ್ರಾಚಾರ್ಯೆ ಶಾರದಾ ಪಾಟೀಲ, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವವರನ್ನ್ನು ಮತದಾರರು ಆಯ್ಕೆ ಮಾಡಬೇಕು ಎಂದರು. ಎಸ್.ಎಂ.ಹುಲ್ಲೂರು ಸ್ವಾಗತಿಸಿದರು.  ಪ್ರೀತಿ ಕಸ್ತೂರಿ ನಿರ್ವಹಿಸಿದರು. ವಿಕಾಸ ಶೀಲವಂತರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.