ಮೂರ್ತಿ, ಕಾರ್ನಾಡ್ ಅಜ್ಞಾನಪೀಠಕ್ಕೆ ಸೂಕ್ತ
ಹುಬ್ಬಳ್ಳಿ: ಇವರು ಬುದ್ಧಿಜೀವಿಗಳಲ್ಲ, ಬುದ್ಧಿಗೇಡಿಗಳು. ಇವರಿಗೆ ಜ್ಞಾನಪೀಠವಲ್ಲ, ಅಜ್ಞಾನಪೀಠ ಪ್ರಶಸ್ತಿ ನೀಡಬೇಕಿತ್ತು.
- ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಸಾಹಿತಿ ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ್ ಮುಂತಾದವರನ್ನು ಜರಿದವರು ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿಗಳು ತಮ್ಮ ಘನತೆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ರಾಜಕಾರಣ ಮಾಡಬಾರದು ಎಂದಲ್ಲ. ಆದರೆ ಪಕ್ಷದ ಏಜೆಂಟರಂತೆ ವರ್ತಿಸುವುದು, ಬುದ್ಧಿಗೇಡಿಗಳಂತೆ ಮಾತನಾಡುವುದು ಸರಿಯಲ್ಲ. ಅನಂತಮೂರ್ತಿಯಂಥ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಹೇಗೆ ಬಂತು ಎಂಬುದು ಯಕ್ಷಪ್ರಶ್ನೆ. ಇವರಿನ್ನೂ ಪರಿಪಕ್ವ ಸಾಹಿತಿಗಳಲ್ಲ, ಇವರಿಗೆ ಅಜ್ಞಾನಪೀಠ ಪ್ರಶಸ್ತಿಯೇ ಸೂಕ್ತ ಎಂದರು. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಅನಂತಮೂರ್ತಿ ಹೇಳಿದ್ದರು. ಈಗ ಮೋದಿ ಪ್ರಧಾನಿಯಾಗುವ ಖಚಿತವಾದಾಗ ಮಾತು ಬದಲಿಸಿದ್ದಾರೆ. ಈಗಲೂ ಸಮಯ ಮೀರಿಲ್ಲ. ತಮ್ಮ ಬ್ಯಾಗ್ ರೆಡಿ ಮಾಡಿಕೊಳ್ಳಲಿ ಎಂದು ಕುಟುಕಿದರು. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರ ಭಾವಚಿತ್ರ ಹಾಕಲಾಗಿದೆ. ಅನಂತಮೂರ್ತಿ, ಗಿರೀಶ ಕಾರ್ನಾಡ್ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದರಿಂದ ಅವರ ಭಾವಚಿತ್ರವನ್ನು ತೆಗೆಸಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಠಾಧೀಶರು ಬೆಂಬಲಿಸಲಿ: ದೇಶ, ಧರ್ಮದ ರಕ್ಷಣೆ ಪ್ರಶ್ನೆ ಎದುರಾಗಿದೆ. ಮಠಾಧೀಶರು ನರೇಂದ್ರ ಮೋದಿಯವರನ್ನು ಬೆಂಬಲಿಸಲಿ. ಜಾಮೀಯಾ ಮಸೀದಿ ಮುಖ್ಯಸ್ಥ ಕಾಂಗ್ರೆಸ್ ಪರ ಮತ ಯಾಚಿಸುತ್ತಿದ್ದಾರೆ. ವಂದೇ ಮಾತರಂ ಕಡ್ಡಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಲೂ ಮಠಾಧೀಶರು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಬಿಜೆಪಿಗೆ ದೇಶಭಕ್ತ ಅಲ್ಪಸಂಖ್ಯಾತರ ಮತ ಮಾತ್ರ ಸಾಕು ಮಿಕ್ಕವರ ಮತ ಬೇಡ ಎಂದರು. ಧಾರವಾಡ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಲಿಂಗಾಯತ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ಲಿಂಗಾಯತರು ಸುಶಿಕ್ಷಿತರು. ಕರ್ನಾಟಕಕ್ಕೆ ಮಾದರಿ ಸಂಸದರಾಗಿರುವ ಪ್ರಹ್ಲಾದ ಜೋಶಿಗೆ ಮತ ನೀಡುತ್ತಾರೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

