ಮಾನವ ಜನ್ಮದಲ್ಲಿ ದೇವರನ್ನು ಸ್ತುತಿಸಿ
ಹುಬ್ಬಳ್ಳಿ: ಭಗವಂತನನ್ನ್ನು ಸೇರುವ ಕೊನೆಯ ಮಾರ್ಗವಾಗಿರುವ ಮಾನವ ಜನ್ಮದಲ್ಲಿ ಭಗವಂತ ಚಿಂತನೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವದಲ್ಲಿ ಬುಧವಾರ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಆಶೀರ್ವಚನ ನೀಡಿದರು.
84 ಲಕ್ಷ ಜೀವರಾಶಿಗಳಲ್ಲಿ ಕೊನೆಯದಾಗಿ ಬರುವುದೇ ಮಾನವ ಜನ್ಮ. ಈ ಜನ್ಮ ಭಗವಂತನ್ನನ್ನ್ನು ಸೇರುವುದಕ್ಕೆ ಸಮೀಪದಲ್ಲಿರುತ್ತದೆ. ಆತ್ಮ ಸದಾ ಅಮರ, ಹೀಗಾಗಿ ಅದನ್ನ್ನು ಪರಮಾತ್ಮ ಎನ್ನ್ನುತ್ತಾರೆ. ದೇಹ ನಾಶವಾದ ಬಳಿಕ ಅದು ಬ್ರಹ್ಮಾಂಡ ಸೇರುತ್ತದೆ. ಹೀಗಾಗಿ ತನ್ನ್ನ ಜನ್ಮ ಸಾರ್ಥಕಗೊಳಿಸಲು ಮನುಷ್ಯ ಸಮಾಜ ಹಾಗೂ ಜನಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಬೊಮ್ಮನಹಳ್ಳಿ ವಿರಕ್ತಮಠದ ವೀರೇಶ್ವರ ಸ್ವಾಮೀಜಿ, ಕೆ.ಆರ್. ಪೇಟೆ ತಂಡೆಕೇರೆ ಮಠದ ಗಂಗಾಧರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಟ್ರಸ್ಟ್ ಅಧ್ಯಕ್ಷ ಆನಂದ ಸಂಕೇಶ್ವರ, ಆನಂದ ಗುರುಸ್ವಾಮಿ, ಜಿ.ಎಸ್. ಅಯ್ಯರ ಇತರರು ಇದ್ದರು.
ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಬೆಳಗ್ಗೆ ಅಶ್ವತ್ಥ ಉಪನಯನ-ವಿವಾಹ ಸಂಸ್ಕಾರಗಳು ಹಾಗೂ ಸಂಜೆ ಬ್ರಹ್ಮ ಕೂರ್ಚ ಹೋಮ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ ವಿಧಾನಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

