ಜ್ಯೋತಿರ್ವಿಜ್ಞಾನ ಸಂಸ್ಥೆ ಮೇ 4ರಂದು ಉದ್ಘಾಟನೆ
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ವ್ಯಾಪ್ತಿಯ ಸುಂದರ ನಗರದಲ್ಲಿರುವ ಸಿದ್ದೇಶ್ವರ ಮಠದ ಹಿಂದೆ ನಿರ್ಮಿಸಲಾಗಿರುವ ಜ್ಯೋತಿರ್ವಿಜ್ಞಾನ ಸಮುದಾಯ ಭವನದ ಉದ್ಘಾಟನೆ ಸಮಾರಂಭ ಮೇ 4ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ವಿದ್ವಾನ್ ಗಣೇಶ ಹೆಗಡೆ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ಹಾಗೂ ವಿದ್ವಾನ್ ಗಣೇಶ ಹೆಗಡೆ ಜ್ಯೋತಿರ್ವಿಜ್ಞಾನ ಮಹಾವಿದ್ಯಾಲಯದ ಸ್ವಂತ ಕಟ್ಟಡದ ಕನಸು ಇದೀಗ ನನಸಾಗಿದೆ ಎಂದರು. ಜ್ಯೋತಿಷ್ಯ ಆಸಕ್ತರಿಗೆ ಅಧ್ಯಯನ, ಸಂಶೋಧನೆಗೆ ಉಪಯುಕ್ತವಾಗಿರುವ ಈ ಸಂಸ್ಥೆ ಜ್ಯೋತಿಷ್ಯಕ್ಕಾಗಿ ಮೀಸಲಾದ ದೇಶದ ಏಕೈಕ ಶೈಕ್ಷಣಿಕ ಸಂಸ್ಥೆಯಾಗಿದೆ. ದೇಶದಲ್ಲೇ ಪ್ರಥಮ ಜ್ಯೋತಿರ್ವಿಜ್ಞಾನ ಭವನ ಇದಾಗಿದೆ ಎಂದು ಹೆಗಡೆ ಹೇಳಿದರು.
ಸಂಸ್ಕೃತ ವಿಶ್ವವಿದ್ಯಾಲಯದಿಂದ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ಮಾನ್ಯತೆ ಪಡೆದಿದ್ದು, ಈ ವರ್ಷದಿಂದ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುವುದು. ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿಸಿಕೊಂಡು ರಾಜ್ಯದಲ್ಲಿ ಸಂಸ್ಥೆ 10 ಶಾಖೆಗಳನ್ನ್ನು ಸ್ಥಾಪಿಸಲಾಗಿದೆ ಎಂದರು. ಏಕರೂಪ ಪಂಚಾಂಗ ಹೊರ ತರಬೇಕೆನ್ನ್ನುವುದು ಸಂಸ್ಥೆ ಆಶಯವಾಗಿದ್ದು ಈ ನಿಟ್ಟಿನಲ್ಲಿ ಪಂಚಾಂಗ ಕರ್ತೃಗಳನ್ನು ಒಂದೆಡೆ ಸೇರಿಸಿ ಸಮಾವೇಶ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಆಶಯ ಕೈಗೂಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನ್ನಿಧ್ಯ ವಹಿಸುವರು. ವಿದ್ವಾನ್ ನಾಗೇಂದ್ರ ಭಟ್ಟ ಅಧ್ಯಕ್ಷತೆ ವಹಿಸುವರು. ಮಾಜಿ ಸಿಎಂ ಜಗದೀಶ ಶೆಟ್ಟರ ಭವನ ಉದ್ಘಾಟಿಸುವರು. ಮಾಜಿ ಸಂಸದರಾದ ವಿಜಯ ಸಂಕೇಶ್ವರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದರು.
ಉಚಿತ ನೃತ್ಯ ತರಬೇತಿ
ಹುಬ್ಬಳ್ಳಿ: ನಗರದ ಭೈರಿದೇವರಕೊಪ್ಪದ ರಾಧಾಕೃಷ್ಣ ನೃತ್ಯ ಅಕಾಡೆಮಿ ಮತ್ತು ಕಿಡ್ಸ್ ವರ್ಲ್ಡ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ 1 ವರ್ಷ ಅವಧಿಯವರೆಗೆ ಉಚಿತ ನೃತ್ಯ ತರಬೇತಿ ಶಿಬಿರ ಆಯೋಜಿಸಲಾಗಿದೆ. ಜಾನಪದ, ಕೋಲಾಟ, ಚಲನಚಿತ್ರ ನೃತ್ಯ, ಪಾಶ್ಚಿಮಾತ್ಯ ನೃತ್ಯ ಶೈಲಿಯನ್ನು ಹೇಳಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ 7259990404, 7795556883ನ್ನು ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

