ಧಾರವಾಡ

ನಾಟಕದಿಂದ ಸಾಮಾಜಿಕ ಪಿಡುಗು ನಿರ್ಮೂಲನೆ

Published On :

ಧಾರವಾಡ: ಸಂಚಾರಿ ರಂಗಭೂಮಿ ಅಥವಾ ಬೀದಿ ನಾಟಕ ರಂಗ ಪ್ರಕಾರವು ಸ್ವಾತಂತ್ರೋತ್ತರ ಭಾರತದಲ್ಲಿ ಸ್ವಾತಂತ್ರ ಚಳವಳಿಯನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಬೆಳೆದು ಬಂದಿತು ಎಂದು ಜಾನಪದ ಕಲಾವಿದ ಶಂಕರ ಸಂಕಣ್ಣನವರ ಹೇಳಿದರು.
ಮುರುಘರಾಜೇಂದ್ರ ಉಚಿತ ಪ್ರಸಾದ ನಿಲಯದ ಆಶ್ರಯದಲ್ಲಿ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್, ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ಜಾನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಗ್ರಾಮರಂಗ ಇಂಗಳಗಿ ಪ್ರಸ್ತುತಪಡಿಸಿದ ಮೂಡಲಪಾಯ ದೊಡ್ಡಾಟ ರಂಗ ತರಬೇತಿ ಶಿಬಿರದ ಮೂರನೇ ದಿನದ ಸಂಚಾರಿ (ಬೀದಿ) ರಂಗಭೂಮಿ ಬಗ್ಗೆ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬೀದಿ ನಾಟಕಗಳು ಸಾಮಾಜಿಕ ಪಿಡುಗಳ ನಿರ್ಮೂಲನೆಯ ಅಸ್ತ್ರಗಳು. ಆದ್ದರಿಂದ ಇತ್ತೀಚೆಗೆ ಬೀದಿ ನಾಟಕಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು. ರಂಗಭೂಮಿ ಎಲ್ಲ ಪ್ರಕಾರಗಳು ಆಧುನಿಕತೆಗೆ ತೆರೆದುಕೊಳ್ಳುತ್ತಿರುವುದು ಹೊಸ ಬೆಳವಣಿಗೆ. ಅಲ್ಲದೇ, ಪ್ರೇಕ್ಷಕರ ಸಂಖ್ಯೆಯೂ ಸಹ ಜಾಸ್ತಿಯಾಗುತ್ತಿದ್ದು, ರಂಗಾಸಕ್ತಿ ಎಲ್ಲರಲ್ಲೂ ಮೂಡುತ್ತಿದೆ ಎಂದು ಸಂಕಣ್ಣವರ ಹೇಳಿದರು. ವೇಕೆಯಲ್ಲಿ ಅಧ್ಯಕ್ಷ ಎಂ.ಎಸ್. ಮಾಳವಾಡ, ಅಡವಯ್ಯಸ್ವಾಮಿ ಹೀರೆಮಠ ಇದ್ದರು. ರಕ್ಷಿತಾ ಬಡಿಗೇರ ಪ್ರಾರ್ಥಿಸಿದರು.  ಶಿಲ್ಪಾ ಬಡಿಗೇರ ನಿರೂಪಿಸಿದರು. ಅಶೋಕ ಸಿದ್ದಣ್ಣನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.