ಅಧಿಕಾರಿಗಳ ಗೈರು: ಗುಡೇನಟ್ಟಿ ಗ್ರಾಮಸಭೆ ರದ್ದು
ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಶುಕ್ರವಾರ ನಡೆದ ಗ್ರಾಮಸಭೆಗೆ ಅಧಿಕಾರಿಗಳು ಗೈರು ಹಾಜರಾದ ಕಾರಣ ಗ್ರಾಮಸ್ಥರು ಸಭೆ ಬಹಿಷ್ಕರಿಸಿದ ಘಟನೆ ನಡೆಯಿತು.
ಪ್ರಸಕ್ತ ಸಾಲಿನ 1ನೇ ತ್ರೈಮಾಸಿಕ ಗ್ರಾಮಸಭೆಗೆ ಮಧ್ಯಾಹ್ನ 3 ಗಂಟೆಯಾದರೂ 16 ಇಲಾಖೆಗಳ ಪೈಕಿ ಬರೀ 5 ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಮುಖ್ಯ ಇಲಾಖಾ ಅಧಿಕಾರಿಗಳ ಗೈರು ಹಾಜರಿಯಿಂದ ಗ್ರಾಮದ ಜನತೆ ಆಕ್ರೋಶಗೊಂಡು ಕಾಟಾಚಾರಕ್ಕಾಗಿ ಈ ಸಭೆ ಮಾಡಬೇಡಿ ಎಂದು ಸಭೆ ಬಹಿಷ್ಕರಿಸಿದರು. ನಂತರ ನೋಡಲ್ ಅಧಿಕಾರಿ ವಿ.ಎಂ. ತಿರುಕನಗೌಡ್ರ ಸಭೆ ರದ್ದುಗೊಳಿಸಿದರು.
ಗ್ರಾಮಸಭೆಗೆ ಕೇವಲ ಜಿಪಂ, ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅವರನ್ನು ಹೊರತುಪಡಿಸಿದರೆ ಇನ್ನುಳಿದ 11 ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಅಲ್ಲದೇ, ರೈತರಿಗಾಗಿ ಉಪಯುಕ್ತವಾದ ಕೃಷಿ ಇಲಾಖೆ ಅಧಿಕಾರಿಗಳನ್ನು ರೈತರು ಕಾಯುತ್ತಿದ್ದರು. ಆದರೆ, ಈ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಬರಲಿಲ್ಲ. ಇದು ರೈತರ ಸಿಟ್ಟಿಗೆ ಕಾರಣವಾಯ್ತು.
ಜಲನಿರ್ಮಲ ಯೋಜನೆ ಇಲಾಖೆಯಿಂದ ಗ್ರಾಮದಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿದ್ದು, ಈ ಕುರಿತು ಇಲಾಖೆ ಅಧಿಕಾರಿಗಳು ಪ್ರಶ್ನಿಸಲು ಯುವಕರ ದಂಡೆ ಸಭೆಯಲ್ಲಿ ಹಾಜರಾಗಿತ್ತು. ಇದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೂ ಇರಲಿಲ್ಲ. ಈ ಕಾಮಗಾರಿಯಲ್ಲಿ ಸಾಕಷ್ಟು ಹಣ ಗುಳುಂ ಮಾಡಿರುವ ಕಾರಣ ಅಧಿಕಾರಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಅದರಂತೆ ತೋಟಗಾರಿಕಾ ಇಲಾಖಾ ಅಧಿಕಾರಿಗಳು ತಮ್ಮಿಂದ ರೈತರಿಗೆ ದೊರಕುವ ಸೌಲಭ್ಯ ನೀಡಲು ಆಗಮಿಸಬೇಕಾಗಿದ್ದು, ಅವರೂ ಬಂದಿಲ್ಲ. ಹೀಗಾಗಿ ಸಭೆ ನಡೆಯೋದು ಬೇಡ ಎಂದು ಪಟ್ಟು ಹಿಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

