ಧಾರವಾಡ

ಮಂತ್ರಿಗಳ ಕೈಯಲ್ಲಿ ಸಕ್ಕರೆ ಕಾರ್ಖಾನೆ: ಬಡವಾದ ರೈತ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 6
ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಮಂತ್ರಿಗಳು ಹಾಗೂ ರಾಜಕಾರಣಿಗಳ ಮಾಲೀಕತ್ವದಲ್ಲಿರುವುದರಿಂದ ರೈತರಿಂದ ಖರೀದಿಸುವ ಕಬ್ಬಿಗೆ ಸರ್ಕಾರದಿಂದ ಸಮರ್ಪಕ ಬೆಂಬಲ ಬೆಲೆ ನಿಗದಿಪಡಿಸಲು ಅಡಚಣೆಯುಂಟಾಗಿದೆ  ಎಂದು ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ಆರ್. ಅನಂತನ್ ಕಳವಳ ವ್ಯಕ್ತಪಡಿಸಿದರು.
ಐಇಎಂಎಸ್, ಚೆನ್ನೈನ ದಿ ಸೌಥ್ ಇಂಡಿಯನ್ ಶುಗರ್ ಕೇನ್ ಆ್ಯಂಡ್ ಶುಗರ್ ಟೆಕ್ನಾಲಾಜಿಸ್ಟ್ ಅಸೋಸಿಯೇಶನ್, ಎಸ್. ನಿಜಲಿಂಗಪ್ಪಾ ಶುಗರ್ ಇನ್‌ಸ್ಟಿಟ್ಯೂಟ್, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಎಸ್‌ಐಎಫ್ ಕನ್ಸ್‌ಲ್ಟಂಟ್ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ 'ಸಕ್ಕರೆ ಉದ್ಯಮ' ಕುರಿತ ಒಂದು ದಿನದ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಸಮಾಧಾನಕರ ಬೆಲೆ ನೀಡಲು ಸಕ್ಕರೆ ಉದ್ಯಮಗಳ ಮಾಲೀಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ದರ ನಿಗದಿ ಸಂದರ್ಭದಲ್ಲಿ ಕಾರ್ಖಾನೆಗಳ ಮಾಲೀಕರು ಒಂದು ದರ ನಿಗದಿಪಡಿಸಿದರೆ, ರೈತರು ಮತ್ತೊಂದು ದರಕ್ಕೆ ಒತ್ತಾಯಿಸುತ್ತಾರೆ. ಈ ಮಧ್ಯೆ ಸರ್ಕಾರ ಒಂದು ದರ ನಿಗದಿಪಡಿಸುತ್ತದೆ. ಸಕ್ಕರೆ ಉದ್ಯಮಗಳ ಮಾಲೀಕರು ಸಹ ಒಂದು ವೇದಿಕೆಯಲ್ಲಿ ಸರ್ಕಾರ ನಿಗದಿಪಡಿಸಿರುವ ದರ ಒಪ್ಪಿಕೊಂಡರೆ ಮತ್ತೊಂದೆಡೆ ತಿರಸ್ಕರಿಸುತ್ತಾರೆ ಎಂದರು.
ಅತಿಥಿಯಾಗಿದ್ದ ಪ್ರಭುಲಿಂಗೇಶ್ವರ ಶುಗರ್ಸ್ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಗದೀಶ ಗುಡಗುಂಟಿ ಮಾತನಾಡಿದರು. ಐಇಎಂಎಸ್ ಮತ್ತು ಕೆಇಎಸ್‌ನ ಚೇರಮನ್ ಡಾ. ಎನ್.ಎ. ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದ್ವಾ, ಆರ್.ವಿ. ವಾಟ್ನಾಳ, ಸಿ.ಎಚ್. ಅಂಗಡಿ, ಆರ್.ಬಿ. ಖಂಡಗಾವ್ ಮತ್ತಿತರರು ಉಪಸ್ಥಿತರಿದ್ದರು. ಡಾ. ಶ್ರೀನಿವಾಸ ಪಾಟೀಲ ಸ್ವಾಗತಿಸಿದರು. ಸಿದ್ದನಗೌಡ ಪೊಲೀಸ್‌ಪಾಟೀಲ ನಿರೂಪಿಸಿದರು. ರೋಹಿದಾಸ ನಾಯಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.