ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ಸರಳೀಕರಣ
ಧಾರವಾಡ: ಧಾರವಾಡ ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ಫೆ. 9ರಂದು ಸಂಜೆ ಜರುಗಲಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸುವ ಸಾರ್ವಜನಿಕರ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆಗಾಗಿ ಸ್ಥಳಗಳು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳಿಗೆ: ಡಯಟ್ ಕಾಲೇಜು ಮೈದಾನದಲ್ಲಿ, ಮಿನಿ ವಿಧಾನಸೌಧ ಆವರಣ, ಪಿಡಬ್ಲ್ಯೂಡಿ ಆಫೀಸ್ ಗೇಟ್ನಿಂದ ಹಳಿಯಾಳ ನಾಕಾ ವರೆಗೆ, ಉದಯ ಹಾಸ್ಟೆಲ್ನಿಂದ ಬಾರಾಕೊಟ್ರಿ ರಸ್ತೆ (ರಸ್ತೆ ಒಂದು ಬದಿಗೆ).
ನಾಲ್ಕು ಚಕ್ರ ವಾಹನಗಳಿಗೆ: ಡಯಟ್ ಕಾಲೇಜು ಮೈದಾನದಲ್ಲಿ, ಬಿ.ಇಡಿ. ಕಾಲೇಜು ಆವರಣ, ಮಿನಿ ವಿಧಾನಸೌಧ ಆವರಣ, ಹಳಿಯಾಳ ನಾಕಾದಿಂದ ಐಸ್ ಫ್ಯಾಕ್ಟರಿ ಗೇಟ್ ವರೆಗೆ, ಹಳಿಯಾಳ ನಾಕಾದಿಂದ ದಾಸನಕೊಪ್ಪ ಸರ್ಕಲ್ ವರೆಗೆ, ದಾಸನಕೊಪ್ಪ ಸರ್ಕಲ್ದಿಂದ ಜೀಪ್ ಎಂಜಿನಿಯರ್ ಬಂಗ್ಲೋ ಗೇಟ್ ವರೆಗೆ, ಶ್ರೀ ಸತ್ಯಸಾಯಿಬಾಬಾ ಕಲ್ಯಾಣ ಮಂಟಪ ಹಾಗೂ ಮಹಿಳಾ ಕಾಲೇಜು ಮೈದಾನದಲ್ಲಿ, ಎಸ್ಡಿಎಂ ಎಸ್ಟೇಟ್ ಮೈದಾನದಲ್ಲಿ, ಉದಯ ಹಾಸ್ಟೆಲ್ದಿಂದ ಬಾರಾಕೊಟ್ರಿ ರಸ್ತೆ (ರಸ್ತೆ ಒಂದು ಬದಿಗೆ).
ನಿರ್ಬಂಧಿತ ರಸ್ತೆಗಳ ವಿವರ: ಡಾ: ದಿಲೀಪ್ ದೇಶಪಾಂಡೆ ಆಸ್ಪತ್ರೆ ಕ್ರಾಸ್ನಿಂದ ಕೆಸಿಡಿ ಸರ್ಕಲ್ ವರೆಗೆ, ದಾಸನಕೊಪ್ಪ ಸರ್ಕಲ್ದಿಂದ ಕೆಸಿಡಿ ಸರ್ಕಲ್ ವರೆಗೆ, ಡೆಪ್ಯೂಟಿ ಚನ್ನಬಸಪ್ಪ ಸರ್ಕಲ್ದಿಂದ ಕೆಸಿಡಿ ಸರ್ಕಲ್ ವರೆಗೆ, ಎನ್ಸಿಸಿ ಆಫೀಸ್ದಿಂದ ಉದಯ ಹಾಸ್ಟೆಲ್ ಕ್ರಾಸ್ ವರೆಗೆ, ಹಿಂದಿ ಪ್ರಚಾರ ಸಭಾದಿಂದ ಡಿಸಿ ಆಫೀಸ್ ಸರ್ಕಲ್ ವರೆಗೆ.
ವಾಹನ ನಿಲುಗಡೆ ನಿಷೇಧಿತ ಸ್ಥಳಗಳು: ಕೆಸಿಡಿ ಮೇನ್ ಗೇಟ್ದಿಂದ ಸಿಂಡಿಕೇಟ್ ಬ್ಯಾಂಕ್ ವರೆಗೆ, ಸರ್ಕಲ್ದಿಂದ ಡಯಟ್ ವರೆಗೆ, ಕೆಸಿಡಿ ಸರ್ಕಲ್ದಿಂದ ಸಪ್ತಾಪುರ ಬಾವಿ ವರೆಗೆ, ಎನ್ಸಿಸಿ ಆಫೀಸ್ದಿಂದ ಉದಯ ಹಾಸ್ಟೆಲ್ ಕ್ರಾಸ್ ವರೆಗೆ, ಉದಯ ಹಾಸ್ಟೆಲ್ ಕ್ರಾಸ್ದಿಂದ ಸೃಜನಾ ರಂಗಮಂದಿರ ವರೆಗೆ ಹಾಗೂ ಹಿಂದಿ ಪ್ರಚಾರ ಸಭಾದಿಂದ ಉದಯ ಹಾಸ್ಟೆಲ್ ಕ್ರಾಸ್ ವರೆಗೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

