ನೆಚ್ಚಿನ ನಟರ ಬರುವಿಕೆಗೆ ಕಾದಿರುವ ಧಾರವಾಡಿಗ
ಧಾರವಾಡ: ಇದುವರೆಗೂ ಟಿವಿ, ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದ ಧಾರವಾಡದ ಜನರೀಗ ಕರ್ನಾಟಕ ಕಾಲೇಜು ಮೈದಾನದಲ್ಲಿ ನೋಡುವ ಭಾಗ್ಯ ಲಭಿಸಿದೆ.
ಭಾನುವಾರ ಸಂಜೆ ನಡೆಯಲಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಯಾಂಡಲ್ವುಡ್ ತಾರೆಗಳ ಮಾತು, ನೃತ್ಯಗಳೊಂದಿಗೆ ಅವರನ್ನು ನೋಡುವ ಅವಿಸ್ಮರಣೀಯ ಕ್ಷಣಕ್ಕೆ ಧಾರವಾಡಿಗರು ಕಾಯುತ್ತಿದ್ದಾರೆ. ವಿದ್ಯಾಕಾಶಿಯಲ್ಲಿ ನೆಚ್ಚಿನ ತಾರೆಗಳನ್ನು ಒಂದೆ ವೇದಿಕೆಯಲ್ಲಿ ನೋಡುವುದಕ್ಕೆ ಕಾಲೇಜು ಹುಡುಗ, ಹುಡುಗಿಯರು ಮತ್ತಷ್ಟು ಉತ್ಸಕತೆ ತೋರುತ್ತಿದ್ದಾರೆ.
ಪರೀಕ್ಷೆಯ ಸಮಯದಲ್ಲೂ ಕಾಲೇಜುಗಳ ಆವರಣದಲ್ಲಿ ಈಗ ಸಿನಿಮಾ ತಾರೆಗಳ ಆಗಮನದ ಸುದ್ದಿ. ನನ್ನ ನೆಚ್ಚಿನ ನಟಿ ರಮ್ಯಾ ಬರ್ತಾಳೆ. ನನ್ನ ನೆಚ್ಚಿನ ನಟ ಪುನೀತ್ ಬರ್ತಾನೆ. ಅಂಬರೀಷ, ಅನಂತನಾಗ್, ಅರ್ಜುನ ಸರ್ಜಾ, ಭಾವನಾ ಬರ್ತಾರೆ ಎಂಬ ಮಾತುಗಳು ಕಾಲೇಜಿನ ಒಳಗೆ-ಹೊರಗೆ ಪಿಸುಗುಟ್ಟುತ್ತಿವೆ. ವಿದ್ಯಾರ್ಥಿಗಳಿಂದ ಹಿಡಿದು ಮಹಿಳೆಯರು, ಮಕ್ಕಳು ಈ ಕಾರ್ಯಕ್ರಮ ಸವಿಯಲು ತುದಿಗಾಲಿನ ಮೇಲಿದ್ದಾರೆ.
ಹಳೆಯ ಹಾಡುಗಳಿಗೆ ಹೊಸ ನಟರ ಕುಣಿತ, ರೀಮಿಕ್ಸ್ ಮಾಡಿದ ಹಾಡುಗಳು, ಕಣ್ಣ ಮುಂದೆಯೇ ನಟ, ನಟಿಯರ ಕುಣಿತ, ಹಾಸ್ಯಭರಿತ ಮಾತು, ಇಡೀ ಸಿನೆಮಾ ರಂಗವೇ ನಮ್ಮ ಕಣ್ಣ ಮುಂದೆ. ಇದೊಂದು ನಮ್ಮ ಪಾಲಿಗೆ ಅದ್ಭುತ ದಿನ ಎನ್ನುತ್ತಾರೆ ಧಾರವಾಡ ಚೇತನಾ ಕಾಲೇಜಿನ ವಿದ್ಯಾರ್ಥಿನಿ ಪ್ರೇಮಚಂದ್ರಿಕಾ ಇಟಗಿ.
ರಾಜಧಾನಿ ಬೆಂಗಳೂರಲ್ಲಿ ಈ ಸಮಾರಂಭ ಜರುಗಿದರೆ ಬೆಂಗಳೂರಿಗರನ್ನು ಬಿಟ್ಟರೆ ಮತ್ಯಾರು ನೋಡಲು ಹೋಗಲ್ಲ. ಈ ರೀತಿ ಆಗಾಗ ರಾಜ್ಯದ ವಿವಿಧೆಡೆ ಸಿನಿಮಾ ಸಮಾರಂಭಗಳನ್ನು ಹಮ್ಮಿಕೊಂಡರೆ ಸಿನಿಮಾ ನಮಗೂ ಹತ್ತಿರವಾಗುತ್ತದೆ. ಈಗ ಕಾರ್ಯಕ್ರಮ ಖುಷಿ ತಂದಿದ್ದೂ ಮನೆ ಮಂದಿಯೆಲ್ಲ ಹೋಗುತ್ತಿದ್ದೇವೆ.
- ಅಶೋಕ ಬಿ., (ಬ್ಯಾಂಕ್ ಉದ್ಯೋಗಿ)
ಮೊದಲ ಬಾರಿಗೆ ಧಾರವಾಡದಲ್ಲಿ ನಡೆಯುತ್ತಿರುವ ಈ ಸಮಾರಂಭ ಸವಿಯಲು ಸಜ್ಜಾಗಿದ್ದೇವೆ. ಖುಷಿ ಎನಿಸುತ್ತಿದೆ. ನೆಚ್ಚಿನ ನಟ ಪುನೀತನನ್ನು ಭೇಟಿಯಾಗಿ ಮಾತನಾಡಿಸಲು ಪ್ರಯತ್ನಿಸುತ್ತೇನೆ.
- ಪ್ರಹ್ಲಾದ ಕುಲಕರ್ಣಿ, (ಖಾಸಗಿ ಉದ್ಯೋಗಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

