ಜೂಜಾಟ: 18 ಜನರ ಬಂಧನ
ಧಾರವಾಡ: ತುಮರಿಕೊಪ್ಪ ಗ್ರಾಮದ ಬೆಣಚಿಕೇರಿಯ ಹತ್ತಿರ ಜೂಜಾಟವಾಡುತ್ತಿದ್ದ 18 ಜನರನ್ನು ಬಂಧಿಸಿ ರು. 80 ಸಾವಿರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಧಾರವಾಡ ನಗರದ ಶೌಖತ್ ಅಲಿ ಬೇಪಾರಿ, ಆನಂದ ಎಲಿಗಾರ, ವಾಸೀಂ ಗಣಿ, ಅಷ್ಪಾಕ್ ಬೇಪಾರಿ ಸೇರಿದಂತೆ ಒಟ್ಟು 18 ಜನರನ್ನು ಪೋಲಿಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರಿಂದ ರು. 80,150 ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ: 18 ಬಂಧನ
ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದ ಬಳಿಯ ಬೆಣಚಕೇರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ 18 ಜನರನ್ನ್ನು ಬಂಧಿಸಿರುವ ಪೊಲೀಸರು ಅವರಿಂದ ರು. 80 ಸಾವಿರ ಜಪ್ತಿ ಮಾಡಿದ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸ್ಥಳೀಯ11 ಜನರು ತಲೆಮರೆಸಿಕೊಂಡಿದ್ದು, ಧಾರವಾಡದ ಶೌಕತ್ ಅಲಿ ಬೇಪಾರಿ, ಆನಂದ ಎಲಿಗಾರ, ವಾಸೀಮ್ ಗಣಿ, ಅಷ್ಪಾಕ್ ಬೇಪಾರಿ, ಮುಸ್ತಾಕ್ ಅಹ್ಮದ್ ಬಾಗೇವಾಡಿ, ಮಹ್ಮದ ಅಲಿ ಬಿಜಾಪುರ, ಜೈಲಾನಿ ಮಿಶ್ರಿಕೋಟಿ, ಜಾವೇದ ಬೇಪಾರಿ, ಮಂಜುನಾಥ ದೊಡ್ಡವಾಡ, ಸದ್ದಾಂ ಬೇಪಾರಿ, ಖ್ವಾಜಾ ಬೇಪಾರಿ, ಜಾಫರ್ ಹುಬ್ಬಳ್ಳಿ, ಇಮ್ತಿಯಾಜ್ ಬೇಪಾರಿ ಮ್ತತಿತರರನ್ನ್ನು ಬಂಧಿಸಿದ್ದಾರೆ.
ಅಕ್ರಮ ಕಟ್ಟಿಗೆ ಸಂಗ್ರಹ: ಬಂಧನ
ಕಲಘಟಗಿ: ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಟ್ಟಿಗೆಯನ್ನು ಸಂಚಾರಿ ಅರಣ್ಯ ಜಾಗ್ರತ ದಳ ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಿದೆ. ರುದ್ರಪ್ಪ ಗಟಗಿ ಎಂಬುವನೇ ಬಂಧಿತ. ಆರೋಪಿ ತಾಲೂಕಿನ ಬೋಗೆನಾಗರಕೊಪ್ಪ ಗ್ರಾಮದ ಮನೆಯಲ್ಲಿ ಪರವಾನಗಿ ಇಲ್ಲದೆ ಕಟ್ಟಿಗೆ ಸಂಗ್ರಹಿಸಿಟ್ಟದ್ದ ಎಂದು ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಜಾಗೃತ ದಳದ ಪಿಎಸ್ಐ ಶ್ರೀಶೈಲ ಗಾಭಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ವೇಶ್ಯಾವಾಟಿಕೆ: ನಾಲ್ವರ ದಾಳಿ
ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಬ್ರಾಡವೇದಲ್ಲಿರುವ ಲಾಡ್ಜ್ ಮೇಲೆ ದಾಳಿ ಮಾಡಿದ ಶಹರ ಪೊಲೀಸ್ ಠಾಣೆ ಸಿಬ್ಬಂದಿ ವೇಶ್ಯಾವಾಟಿಕೆಗೆ ನೆರವು ನೀಡಿದ ನಾಲ್ವರು ಹುಬ್ಬಳ್ಳಿ ನಿವಾಸಿಗಳನ್ನು ಬಂಧಿಸಿದ್ದಾರೆ. ಬ್ರಾಡವೇದಲ್ಲಿರುವ ಲಕ್ಷ್ಮಿ ಲಾಡ್ಜ್ ನಲ್ಲಿ ಚಂದ್ರಶೇಖರ ಮಂಜುನಾಥ ನಾಯ್ಕ, ಮಾರುತಿ ಜತ್ತಾ ನಾಯ್ಕ, ಸಯ್ಯದ್ ಅಣ್ಣಾ ಜಾಹೀದ್, ಶಬ್ಬಿರ್ ಅಬ್ದುಲ್ಖಾದರ ಬೇಪಾರಿ ಅವರನ್ನು ಬಂಧಿಸಲಾಗಿದೆ. ಈ ನಾಲ್ವರು ಆರೋಪಿಗಳು ಬೇರೆ ಬೇರೆ ಊರಿನಿಂದ ಮಹಿಳೆಯರನ್ನು ತಂದು ಲಾಡ್ಜ್ನಲ್ಲಿರಿಸಿ ತಮ್ಮ ಲಾಭಕ್ಕೊಸ್ಕರ ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಶಂಕ್ರಪ್ಪ ಪಮ್ಮಣ್ಣವರ ನಿಧನ
ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಪ್ರಗತಿಪರ ರೈತ ಶಂಕ್ರಪ್ಪ ಬಸಪ್ಪ ಪಮ್ಮಣ್ಣವರ (69) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಸಹೋದರರು, ಸಹೋದರಿಯರು, ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

