ಇಂದು ಕಾರ್ಯಕ್ರಮ
ಧಾರವಾಡ: ಚಂಬಲ್ ಕಣಿವೆಯಲ್ಲಿ ಡಾಕೂ ಆಗಿದ್ದ ಪಂಚಮ್ ಸಿಂಗ್ ಅವರ ಅದ್ಭುತ ಪರಿವರ್ತನೆಯ ಅನುಭವ ಕಾರ್ಯಕ್ರಮ ಫೆ. 13ರಂದು ಬೆಳಿಗ್ಗೆ 11ಕ್ಕೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಹಾಗೂ ಸಂಜೆ 6.30ಕ್ಕೆ ಮದಿಹಾಳದ ಮುಖ್ಯ ರಸ್ತೆಯಲ್ಲಿರುವ ಜೋಶಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿಯ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಬಿ. ಉಷಾ, ಕವಿವಿ ಅಪರಾಧಶಾಸ್ತ್ರ ವಿಭಾಗದ ಡಾ.ಜಿ.ಎಸ್. ವೇಣುಮಾಧವ, ವ್ಯಾಪಾರಸ್ಥರಾದ ಶಿವನಾರಾಯಣ ಮಿಶ್ರಾ, ಗುರುರಾಜ ಹುಣಸೀಮರದ ಭಾಗವಹಿಸುತ್ತಾರೆ ಎಂದು ಬ್ರಹ್ಮಕುಮಾರಿ ಬಿ.ಕೆ. ವಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15ರಂದು ಗುರುವಂದನಾ ಸಮಾರಂಭ
ಧಾರವಾಡ: ಇಲ್ಲಿಯ ಕರ್ನಾಟಕ ವಿವಿಯ ವಾಣಿಜ್ಯ ವಿಭಾಗದ 1978ನೇ ಸಾಲಿನ ವಿದ್ಯಾರ್ಥಿಗಳು (ಸ್ನೇಹಕುಂಜ) ಫೆ. 15ರಂದು ಗುರುವಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ವಿಜಾಪುರ ವಿವಿ ಕುಲಪತಿ ಡಾ. ಮೀನಾ ಚಂದಾವರಕರ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಜಯಂತ್ಯುತ್ಸವ
ಅಣ್ಣಿಗೇರಿ: ಶಿಕ್ಷಣ, ಸಹಕಾರ ರಂಗದಲ್ಲಿ ಅಪ್ರತಿಮ ಸಾಧನೆಗೈದಿದ್ದ ಸಾಸ್ವಿಹಳ್ಳಿಯ ದಿ. ಶಿವನಗೌಡರ ಅವರ 110ನೇ ಜಯಂತ್ಯುತ್ಸವ ದಿ. ಎಸ್.ಎಸ್. ಪಾಟೀಲ ಸ್ಮಾರಕ ಭವನದಲ್ಲಿ ಫೆ. 13ರ ಸಂಜೆ 4.30ಕ್ಕೆ ಹಮ್ಮಿಕೊಳ್ಳಲಾಗಿದೆ. ಶಿವಪುತ್ರ ಸ್ವಾಮೀಜಿಗಳ ಸಾನ್ನಿಧ್ಯವಹಿಸಲಿರುವ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.
ಹಲ್ಲೆ: ದೂರು ದಾಖಲು
ಹುಬ್ಬಳ್ಳಿ: ರಾಮಲಿಂಗೇಶ್ವರನಗರದಲ್ಲಿರುವ ತಮ್ಮ ಮನೆ ಬೀಳಿಸಿದ್ದಕ್ಕೆ ಕಾರಣ ಕೇಳಲು ಹೋದಾಗ ತಮ್ಮ ಮೇಲೆ ಸಂತೋಷ ಹಿರೇಕೆರೂರ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾಗಿ ಮಹ್ಮದ ಛಗನ ಗೋಕುಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಇದೀಗ ತಮ್ಮ ಜಾಗದಲ್ಲಿ ಸಂತೋಷ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದಾರೆಂದು ಛಗನ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

