ಪ್ರಶಸ್ತಿ ಪ್ರದಾನ ಸಮಾರಂಭ ತಂದ ಕಸದ ಉಡುಗೊರೆ
ಧಾರವಾಡ: ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮೈದಾನದ ಸೌಂದರ್ಯ ಹದಗೆಡಿಸಿದ್ದು, ಇಲ್ಲಿನ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್, ಇನ್ನಿತರೆ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿವೆ. ಸಮಾರಂಭವು ಅತಿ ವಿಜೃಂಭಣೆಯಿಂದ ನಡೆದಿದ್ದು ಸತ್ಯ. ಆದರೆ, ಆ ಸಮಾರಂಭದ ನಂತರದ ಪರಿಣಾಮಗಳು ನಿಜಕ್ಕೂ ನೋವು ತರಿಸುತ್ತಿವೆ. ಸದ್ಯ ಮೈದಾನದಲ್ಲಿ ಕಸದ ರಾಶಿ ರಾಶಿ ಗುಂಪು. ಎಲ್ಲೆಡೆ ಕಾಲಿಗೆ ಚುಚ್ಚುವ ಮೊಳೆಗಳು, ಕುಡಿದು ಎಸೆದ ಸಾರಾಯಿ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಪೆಂಡಾಲಿನವರು ಬಿಟ್ಟು ಹೋದ ತ್ಯಾಜ್ಯಗಳು, ಕಬ್ಬಿಣದ ಕಾಂಪೌಂಡ್ ಒಡೆದು ಮಾಡಿದ ದಾರಿಗಳು, ವೇದಿಕೆಗಾಗಿ ಮರ ಕಡಿದದ್ದು, ಬ್ಯಾನರ್‌ಗಳ ಭರಾಟೆ, ಕುಳಿತುಕೊಳ್ಳುವ ಕಟ್ಟೆಗಳನ್ನು ಒಡೆದಿದ್ದು, ಮೈದಾನದಲ್ಲಿ ತೋಡಿರುವ ಗುಂಡಿಗಳು ಹೀಗೆ ಅನಾಹುತಗಳು ಸಮಾರಂಭದಿಂದ ಆಗಿವೆ. ಈ ಪಾರಂಪರಿಕ ಮೈದಾನದ ಪರಿಸರನ್ನು ಹಾಳು ಮಾಡುತ್ತಿರುವುದಕ್ಕೆ ರೊಚ್ಚಿಗೆದ್ದು ನಾವೆಲ್ಲರೂ ಪ್ರತಿಭಟನೆಗೆ ಮುಂದಾಗಿದ್ದೇವೆ. ಈ ಕುರಿತು ಕಾಲೇಜು ಹಾಗೂ ಸಂಬಂಧಿತ ವಿವಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಕಾರ್ಯಕ್ರಮಕ್ಕಾಗಿ ಯಾವುದೇ ಪೂರ್ವ ಪರವಾನಗಿಯನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಪಡೆದಿಲ್ಲ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿ ಇನ್ಮುಂದೆ ಮೈದಾನದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಮಾರಂಭ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಶನ್ನಿನ ಸದಸ್ಯರಾದ ಪ್ರಕಾಶ ಶೆಟ್ಟಿ, ವಿಜಯ ಹೆಸರೂರ, ಎಂ.ವೈ. ರಾಯ್ಕರ, ಜಗದೀಶ ಶೆಟ್ಟಿ, ರಾಜೇಶ ಮನಗುಂಡಿ, ಪ್ರಕಾಶ ಗೌಡರ, ಕುಮಾರ ಚಿಣವಾಲ, ಸಂಜಯ ಕವರಿ, ಗಂಗಾಧರ ಸಂಕನಗೌಡರ, ಅಶೋಕ ರಂಗನಗೌಡರ, ಆದರ್ಶ ಕಳಾಲದ, ಚಂದ್ರು ಶೆಟ್ಟಿ, ಸದಾನಂದ ರಾಮನ್ನವರ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

