ಪವಿತ್ರ ಸಂಬಂಧಗಳಲ್ಲಿ ಬಿರುಕು: ನೀಲಕಂಠ ಶ್ರೀ
ಧಾರವಾಡ: ಪವಿತ್ರ ಭಾವನೆಯ ಸಂಬಂಧಗಳ ಸೂಚಕವಾಗಿರುವ ಭಾರತದಲ್ಲಿ ಇಂದು ಕಾರ್ಮೋಡ ಕವಿದಿದೆ ಎಂದು ಮುರುಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ರಾಮಕೃಷ್ಣ ಮಂದಿರದ 9ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಜರುಗಿದ ಭಕ್ತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಕಾಮ, ಭೋಗದ ಬಲೆಗೆ ಬಿದ್ದು ಜನತೆ ತಮ್ಮನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ನನ್ನ ಯೋಗಕ್ಷೇವು ಎಂಬ ವಿಚಾರ ತೊರೆದು, ಸಮಾಜದ ಯೋಗಕ್ಷೇವು ಎಂಬ ವಿಚಾರ ಬೆಳೆಸಿಕೊಂಡು ಬಸವಣ್ಣನವರ ತತ್ವ ಪಾಲಿಸಿದರೆ ದೇಶ ಸಚ್ಚ್ಯಾರಿತ್ರ ಉಳಿಯುತ್ತದೆ ಎಂದರು.
ರಾಮಕೃಷ್ಣ ವಿವೇಕಾಂದ ಆಶ್ರಮದ ವಿಜಯಾನಂದ ಸರಸ್ವತಿ, ಕೋಟೆ ಕಟ್ಟಿ ರಾಜ್ಯವಾಳಿದರೆ ಅರಸನಲ್ಲ. ಮಾನವೀಯತೆಯ ಪರೋಪಕಾರಿಯಾಗಿ ನಂಬಿದವರ ಬದುಕನ್ನು ಬೆಳೆಗಿದರೆ ಆತ ಅರಸ. ಇಂದು ಅರಸ, ಪ್ರಜೆಗಳ ನಡುವಿನ ಬದುಕು ಸ್ವಾರ್ಥದ ತಳಹದಿ ಮೇಲೆ ನಿಂತಿದೆ. ಔದಾರ್ಯ, ಪಾವಿತ್ರ್ಯ, ಶಾಂತಿ ಧ್ಯಾನ, ಅಂತರ್ಮುಖಿಯಲ್ಲಿ ಪರಾಕಾಷ್ಠೆ ತಲುಪಿದ ನಮ್ಮ ನಾಡು ಇಂದು ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವುದು ದುರಂತ ಎಂದರು.
165 ಮಹಿಳೆಯರಿಗೆ ಉಡಿ ತುಂಬಿ ಅವರಿಗೆ ಶ್ರೀಗಳು ಪೂಜೆ ಸಲ್ಲಿಸಿದರು. ಹುಬ್ಬಳ್ಳಿ ಶ್ರೀ ಮಾತಾ ಆಶ್ರಮದ ಮಾತಾ ತೇಜೋಮಯಿ, ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಅವರಿಂದ ಉಪನ್ಯಾಸ ಜರುಗಿತು. ಸೌಭಾಗ್ಯ ಕುಲಕರ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

