ಧಾರವಾಡ

ಧಾರವಾಡದಲ್ಲಿ ಕೌಟಿಲ್ಯ ರಸಪ್ರಶ್ನೆ ಸ್ಪರ್ಧೆ

Published On :

ಧಾರವಾಡ: ಧಾರವಾಡದಲ್ಲಿ ಇತ್ತೀಚೆಗೆ ದೇಶಪಾಂಡೆ ಕೌಟಿಲ್ಯ ಫೆಲೊಶಿಪ್ ಪ್ರೋಗ್ರಾಮನಡಿ ಕೌಟಿಲ್ಯ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಅತಿಥಿಯಾಗಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಸಂತ ಲದ್ವಾ ಮಾತನಾಡಿ, ವಾಣಿಜ್ಯ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದು, ಪದವೀದರರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಣಪ್ಪುರಂ ಫೈನಾನ್ಸ್‌ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಶಶಿಧರ ಪಾಟೀಲ, ವಿದ್ಯಾರ್ಥಿಗಳು ಸರಿಯಾದ ಗುರಿ ಹೊಂದಿರಬೇಕು ಮತ್ತು ಗುರ್ನಿ ತಲುಪುವದರೆಡೆಗೆ ನಿಷ್ಠೆಯಿಂದ ಕಾರ್ಯಪ್ರವತ್ತರಾಗಬೇಕು ಎಂದು ಸಲಹೆ ನೀಡಿದರು. ಶೇಷಗಿರಿ ಕುಲಕರ್ಣಿ ಹಾಗೂ ನೀಲಂ ಮಹೇಶ್ವರಿ ಅತಿಥಿಗಳಾಗಿದ್ದರು. ದೇಶಪಾಂಡೆ ಫೌಂಡೆಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ ಝಾ ಅಧ್ಯಕ್ಷತೆ ವಹಿಸಿದ್ದರು.
ವಿಜೇತರು: ಹುಬ್ಬಳ್ಳಿಯ ಜೆಜಿ ಕಾಮರ್ಸ್ ಕಾಲೇಜು ಮತ್ತು ಧಾರವಾಡದ ಜೆಎಸ್‌ಎಸ್ ಕಾಲೇಜು (ಪ್ರಥಮ), ಗೋಕಾಕನ ಜಿಎಫ್‌ಜಿಸಿ ಕಾಲೇಜು ಮತ್ತು ಬೆಳಗಾವಿಯ ಸಮಿತಿ ಕಾಲೇಜು (ದ್ವಿತೀಯ), ಚಿಕ್ಕೋಡಿಯ ಜಿಎಫ್‌ಜಿಸಿ ಕಾಲೇಜು ಮತ್ತು ಹುಬ್ಬಳ್ಳಿಯ ಜೆಜಿ ಕಾಮರ್ಸ್ ಕಾಲೇಜು (ತೃತೀಯ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.