ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿಗೆ ಸನ್ಮಾನ
ಧಾರವಾಡ: ಖ್ಯಾತ ಹಾಸ್ಯ ಕಲಾವಿದ ಮಹದೇವ ಸತ್ತಿಗೇರಿ ಅವರು ಕೀನ್ಯಾ ದೇಶದ ನೈರೋಬಿಯಾದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಲಿರುವ 10ನೇ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ನಿಮಿತ್ತ ಈಚೆಗೆ ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳಿಂದ ಅವರನ್ನು ಸನ್ಮಾನಿಸಲಾಯಿತು.
ವಿಕೆಇ ಗ್ರೂಪ್ ಹಾಗೂ ಕೆಸಿಇ ಫೌಂಡೇಶನ್ ಜಂಟಿಯಾಗಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಶಾಸಕ ವಿನಯ ಕುಲಕರ್ಣಿ ಉದ್ಘಾಟಿಸಿ, ಪ್ರತಿ ಶಿಕ್ಷಕ ಪ್ರತಿ ಮಗುವಿನ ಶೈಕ್ಷಣಿಕ ಹಂತವನ್ನು ವೃದ್ಧಿಸುವುದರೊಂದಿಗೆ ನೈತಿಕತೆಯ ಬಹುಮುಖ ವ್ಯಕ್ತಿತ್ವ ರೂಪಿಸಬೇಕು. ಶಿಕ್ಷಕನ ಜವಾಬ್ದಾರಿ ಸಮಾಜದಲ್ಲಿನ ಮೌಲ್ಯಗಳನ್ನು ಮಗುವಿಗೆ ನೀಡಿ ಆ ನಿಟ್ಟಿನಲ್ಲಿ ದೇಶವನ್ನು ಸುಂದರ ಕ್ರಾಂತಿಯತ್ತ ಸನ್ನದ್ಧಗೊಳಿಸುವುದು ಎಂದರು.
ಕೆಪಿಸಿಸಿ ಸದಸ್ಯ ಹನುಮತ ಕೊಟಬಾಗಿ ಮಾತನಾಡಿದರು. ಇದೇ ಸಂದರ್ಭ ಮಹಾದೇವ ಸತ್ತಿಗೇರಿ ಹಾಗೂ ಅವರ ಪತ್ನಿ ಸುಮಾ ಸತ್ತಿಗೇರಿ, ಪಿಎಚ್ಡಿ ಪಡೆದ ಡಾ. ಅರುಣಬಾಬು ಅಂಗಡಿ, ಡಾ. ಸುಯಮೇಂದ್ರ ಕುಲಕರ್ಣಿ, ಡಾ. ವಿಜಯಕುಮಾರ ನಾಗಲಾಪುರ ಅವರನ್ನು ಸನ್ಮಾನಿಸಲಾಯಿತು. ಡಾ. ಬಾಬುರಾವ್ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮೋಹನ ನಾಗಮ್ಮನವರ ಮತ್ತಿತರರಿದ್ದರು. ತದನಂತರ ಮಹದೇವ ಸತ್ತಿಗೇರಿ ಹಾಗೂ ಸುಧಾ ಬರಗೂರ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

