ಧಾರವಾಡ

ಸುದ್ದಿ ಸಂಕ್ಷೇಪ

Published On :

ಬಾಲಕನ ಹತ್ಯೆ: 5 ಸೆರೆ
ಧಾರವಾಡ: ಇಲ್ಲಿಯ ಮಹಾಂತನಗರದ ಬಾಲಕನೊಬ್ಬನನ್ನು ಅಪಹರಿಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಐವರನ್ನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಂಭುಲಿಂಗಯ್ಯ ಹಿರೇಮಠ ಎಂಬುವವರ ಎರಡನೇ ಪತ್ನಿಯ ಮಗ ಕೊಲೆಯಾದ ದುರ್ದೈವಿ. ಇವರ ಮೊದಲನೇ ಪತ್ನಿಯ ತಂದೆ ತೀರ್ಥಯ್ಯ ಹಿರೇಮಠ, ಸಹೋದರ ಸುರೇಶ, ಮಕ್ಕಳಾದ ವಿನಾಯಕ, ಅಭಿಷೇಕ ಮತ್ತು ಅಮೃತ ಬಂಧಿತ ಆರೋಪಿಗಳು. ಮಹಾಂತನಗರದ 9 ವರ್ಷದ ಮಂಜುನಾಥ ಹಿರೇಮಠನನ್ನ್ನು ಫೆ. 11ರಂದು ಅಪಹರಿಸಿದ್ದ ಆರೋಪಿಗಳು, ಗೋವಾ ರಸ್ತೆಯ ರಾಮನಗರ ಬಳಿ ಶಿವಳ್ಳಿ ಅರಣ್ಯದಲ್ಲಿ ಹತ್ಯೆಗೈದಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಂಜುನಾಥನನ್ನು ಮೊದಲನೇ ಪತ್ನ್ನಿ ಕಡೆಯವರು ಅಪಹರಿಸಿ ಕೊಲೆಗೈದಿದ್ದಾರೆ. ಮಂಜುನಾಥನನ್ನ್ನು ಅಪಹರಿಸಲಾಗಿದೆ ಎಂದು ಆತನ ತಾಯಿ ಜಯಶ್ರೀ ಹಿರೇಮಠ ದೂರು ನೀಡಿದ್ದರು.
ಪಿಕಾರ್ಡ್ ನಿರ್ದೇಶಕರಾಗಿ ನಾಗರಾಜ ಗಾಣಿಗೇರ
ಧಾರವಾಡ: ಇಲ್ಲಿನ ಧಾರವಾಡ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ನಿರ್ದೇಶಕರಾಗಿ ತಾಲೂಕಿನ ತೇಗೂರ ಗ್ರಾಮದ ನಾಗರಾಜ ಗಾಣಿಗೇರ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ತೇಗೂರ ಕ್ಷೇತ್ರದಿಂದ ನಾಗರಾಜ ಗಾಣಿಗೇರ ಸ್ಪರ್ಧಿಸಿದ್ದರು.
ಕಟಗಿ ತಂಡ ಅಧಿಕಾರಕ್ಕೆ
ಧಾರವಾಡ: ಇಲ್ಲಿಯ  ದಿ. ಗವರ್ನ್ನಮೆಂಟ್ ಎಂಪ್ಲಾಯೀಸ್ ಕೋ.ಆಪ್ ಬ್ಯಾಂಕಿನ ಆಡಳಿತ ಮಂಡಳಿಗೆ ಫೆ. 16ರಂದು ನಡೆದ  ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಸವರಾಜ ಕಟಗಿ ನೇತೃತ್ವದ ತಂಡ ಮತ್ತೆ ಅಧಿಕಾರಕ್ಕೇರಿದೆ. ಅಧ್ಯಕ್ಷರಾಗಿ ಬಸವರಾಜ ಕಟಗಿ, ಉಪಾಧ್ಯಕ್ಷರಾಗಿ ವೈ.ಎಚ್. ಬನಸೋಡೆ ಆಯ್ಕೆಗೊಂಡರು. ನಿರ್ದೇಶಕರಾಗಿ ವಿ.ಆರ್. ಸಂಗಮಿ, ಉದಯ ತಿವಾರಿ, ಎಂ.ಎಸ್. ಪಾಸ್ತೆ, ಆರ್.ಕೆ. ಮಹಾಡಿಕ್, ಎನ್.ಆರ್. ಪಾಟೀಲ, ಸಿದ್ದಪ್ಪ ಕಲಕುಂಡಿ, ಎಸ್.ಎಂ. ಬಿದರಿ, ಟಿ.ಎಫ್. ಗೊರವನಕೊಳ್ಳ, ಆರ್.ಡಿ. ರೋಣದ, ಎಸ್.ಕೆ. ರಾಮದುರ್ಗ ಗುಂಪಿನ ಓಬಳಪ್ಪ ಯರುಗುಂಟಿ, ಉದಯಕುಮಾರ ಬಳ್ಳಾರಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದ 9 ಸ್ಥಾನಗಳಿಗೆ 23 ಅಭ್ಯರ್ಥಿಗಳು ಕಣದಲ್ಲಿದ್ದರೆ, ಹಿಂದುಳಿದ ವರ್ಗದ ಕ್ಷೇತ್ರದ 1 ಸ್ಥಾನಕ್ಕೆ 2, ಪ. ಜಾತಿ-ಪಂಗಡದ 1 ಸ್ಥಾನಕ್ಕೆ 3, ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ 4 ಸೇರಿ ಚುನಾವಣೆಯಲ್ಲಿ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.