ಉತ್ತಮ ಸಿನಿಮಾಗಳಿಂದ ಪ್ರೇಕ್ಷಕರಲ್ಲಿ ಸಂವೇದನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 27
ಕಮರ್ಷಿಯಲ್ ಸಿನಿಮಾಗಳ ಹಾವಳಿ ಮಧ್ಯೆ ಉತ್ತಮ ಅಭಿರುಚಿಯ ಸಿನಿಮಾಗಳು ಜನರನ್ನ್ನು ತಲುಪಲು ಕಷ್ಟ ಪಡುತ್ತಿವೆ. ಉತ್ತಮ ಸಿನಿಮಾಗಳು ಪ್ರೇಕ್ಷಕರ ಮನದಾಳಕ್ಕೆ ಮುಟ್ಟಿ ಅವರಲ್ಲಿ ಸಂವೇದನೆಯನ್ನ್ನುಂಟು ಮಾಡುತ್ತವೆ ಎಂದು ಹಿರಿಯ ಸಂಭಾಷಣೆಕಾರ, ಕವಿ ಲಕ್ಷ್ಮೀಪತಿ ಕೋಲಾರ ಅವರು ಅಭಿಪ್ರಾಯಪಟ್ಟರು
11ನೇ ಜನೋತ್ಸವದ ಅಂಗವಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಮಾಗಿಯ ಕಾಲ ಸಿನಿಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದಭಿರುಚಿಯ ಸಿನಿಮಾಗಳು ಸಾವಿರಾರು ಪ್ರೇಕ್ಷಕರನ್ನ್ನು ಮುಟ್ಟಿದರೆ ಮಾತ್ರ ವ್ಯಾಪಾರಿ ಸಿನಿಮಾಗಳು ಸಮಾಜದಲ್ಲಿ ಹಬ್ಬಿಸುತ್ತಿರುವ ವ್ಯಾಧಿಯನ್ನು ತಡೆಗಟ್ಟಲು ಸಾಧ್ಯ. ಉತ್ತಮ ಸಿನಿಮಾಗಳು ಮಾನವೀಯ ಧೋರಣೆಯನ್ನ್ನು ಒಳಗೊಂಡಿವೆ. ಇಂತಹ ಸಿನಿಮಾಗಳನ್ನ್ನು ತೋರಿಸಲು ಸಿನಿಮಾ ಸೊಸೈಟಿಗಳು ಸೃಷ್ಟಿಯಾಗಿ ಹಳ್ಳಿ ಹಳ್ಳಿಗಳನ್ನು ಮುಟ್ಟಬೇಕು ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಅಶೋಕ ಶೆಟ್ಟರ್ ಮಾತನಾಡಿ, ಮಾಗಿಯ ಕಾಲ ಸಿನಿಮಾ ಹೊಸ ಸಾಧ್ಯತೆಗಳನ್ನ್ನು ನಮ್ಮ ಮುಂದಿಟ್ಟಿದೆ. ಸಿನಿಮಾದಲ್ಲಿ ತಂದೆಯ ಪಾತ್ರಧಾರಿಯು ತನನ್ನ್ನ್ನು ಹೊರಹಾಕಿದ ಮಗನ ಬಳಿ ಹೋಗದೇ ದತ್ತು ತೆಗೆದುಕೊಂಡ ಮಗನ ಬಳಿ ಇರಲು ಒಪ್ಪುತ್ತಾನೆ. ಇದೊಂದು ಹೊಸ ಸಂದೇಶವುಳ್ಳ ಸಿನಿಮಾ ಎಂದು ಶ್ಲಾಘಿಸಿದ ಅವರು, ಇರಾನ್ನ ಖ್ಯಾತ ನಿರ್ದೇಶಕ ಮಜೀದ್ ಮಜೀದಿ ಅವರು ಸಿನಿಮಾ ಮಾಧ್ಯಮವನ್ನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ ಎಂದು ನುಡಿದರು. ಎಐಡಿವೈಓ ರಾಜ್ಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ಎಲ್ಲ ಧರ್ಮಗಳು ಒಂದು ಕಾಲದಲ್ಲಿ ಶ್ರೇಷ್ಠ ಕೆಲಸ ಮಾಡಿವೆ. ಆದರೆ ಇಂದು ಎಲ್ಲ ಧರ್ಮಗಳಿಗೂ ಮಿಗಿಲಾದ ಮಾನವತಾವಾದ ನಮ್ಮ ಮುಂದಿದೆ. ಆ ಒಂದು ವಿಚಾರದಡಿಯಲ್ಲಿ ಸಮಾಜದ ಎಲ್ಲ ಧರ್ಮೀಯರು ಉದಾತ್ತವಾಗಿ ಜೀವನ ಮಾಡುವ ಸಾಧ್ಯತೆ ನಮ್ಮ ಮುಂದಿದೆ.
ಆ ಸಾಧ್ಯತೆ ಅಡಿಯಲ್ಲಿ ನಾವೆಲ್ಲ ಒಂದಾಗಬೇಕಿದೆ. ಉತ್ತಮ ನೈತಿಕತ್ನೆ ಬೆಳೆಸಿಕೊಂಡು, ಹೊಸ ಮೌಲ್ಯಪ್ರಜ್ಞೆಯೊಂದಿಗೆ ನವ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಜನರನ್ನು ಮುಟ್ಟುವಂತಹ, ಒಂದುಗೂಡಿಸುವಂತಹ ಸಿನಿಮಾಗಳು ಬರಬೇಕು. ಆವಿಷ್ಕಾರ ಫಿಲ್ಮ್ ಸೊಸೈಟಿ ಎರಡು ವರ್ಷಕ್ಕೂ ಅಧಿಕ ಕಾಲದಿಂದ ಉತ್ತಮ ಸಿನಿಮಾಗಳ ಪ್ರದರ್ಶನದಲ್ಲಿ ತೊಡಗಿದೆ. ಈ ಪ್ರಯತ್ನಕ್ಕೆ ಹುಬ್ಬಳ್ಳಿಯ ಪ್ರೇಕ್ಷಕರೂ ಸಹಕರಿಸಬೇಕು ಎಂದು ಕೋರಿದರು. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ಈ ಸಿನಿಮಾದ ನಾಯಕ ಜವಾಬ್ದಾರಿ ಇರುವ ವ್ಯಕ್ತಿಯಾಗಿ ಕೆಲಸ ಮಾಡಿದ್ದಾನೆ. ವಾಣಿಜ್ಯ ಸಿನಿಮಾಗಳಲ್ಲಿನ ಹೀರೊಗಳು ಯಾವುದೇ ಜವಾಬ್ದಾರಿ ಹೊರಲು ಒಪ್ಪದೇ ಸಂತೋಷದಿಂದ ಓಡಾಡುತ್ತಾರೆ. ಮಾಗಿಯ ಕಾಲದಂತಹ ಸಿನಿಮಾಗಳಿಂದ ನಮ್ಮ ಯುವಕರಲ್ಲಿ ಜವಾಬ್ದಾರಿ ಪ್ರಜ್ಞೆ ಹೆಚ್ಚುತ್ತದೆ ಎಂದರು.
ನೇತ್ರತಜ್ಞರಾದ ಡಾ.ಎನ್. ವಸುಧೇಂದ್ರ ಅತಿಥಿಗಳಿಗೆ ಸ್ಮರಣಿಕೆಗಳನ್ನ್ನು ನೀಡಿದರು. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಸಂಚಾಲಕ ಎಚ್.ಜಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

