ಕೂಡಲಸಂಗಮದಲ್ಲಿ 11ರಿಂದ ಶರಣ ಮೇಳ
ಧಾರವಾಡ: ಶರಣ ಮೇಳ ಉತ್ಸವ ಸಮಿತಿ ವತಿಯಿಂದ ಕೂಡಲಸಂಗಮದಲ್ಲಿ ಜ. 11ರಿಂದ 15ರ ವರೆಗೆ 27ನೇ ಶರಣ ಮೇಳ ನಡೆಯಲಿದೆ ಎಂದು ಸಮಿತಿ ಕಾರ್ಯಾಧ್ಯಕ್ಷರಾದ ಮಾತೆ ಮಹಾದೇವಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಅಲ್ಲದೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಮತ್ತಿತರೆ ರಾಜ್ಯಗಳ 3 ಲಕ್ಷ ಭಕ್ತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಬಸವಣ್ಣವರ ಕಾಲದಲ್ಲಿ ಸಮಾನತೆ, ಸಹೋದರತೆ ಸಾಧಿಸಲು ನಡೆಸಿದ ಗಣಪರ್ವ ಸಮಾವೇಶ ಮಾದರಿಯಲ್ಲಿ ಶರಣ ಮೇಳ ನಡೆಯಲಿದೆ ಎಂದರು.
11ರಂದು ಮಹಿಳಾ ಗೋಷ್ಠಿ ಹಾಗೂ ವಚನ ದುಂದುಭಿ ಧಾರ್ಮಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದ್ದು, 12ರಂದು ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ಬಸವ ದಳದ 27ನೇ ಮಹಾಧಿವೇಶನ ನಡೆಯಲಿದೆ. ಕರ್ನಾಟಕ ಕಾನೂನು ವಿವಿ ಮಾಜಿ ಕುಲಪತಿ ಡಾ. ಜೆ.ಎಸ್. ಪಾಟೀಲ ಉದ್ಘಾಟಿಸುವರು. ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡರ, ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ಮಾಜಿ ಸಚಿವ ಗೋವಿಂದ ಕಾರಜೋಳ, ದೊಡ್ಡನಗೌಡ ಪಾಟೀಲ, ಡಾ. ಎಂ.ಪಿ. ನಾಡಗೌಡ ಮತ್ತಿತರರು ಭಾಗವಹಿಸುತ್ತಾರೆ. ಸಂಜೆ 6ಕ್ಕೆ ಧರ್ಮಚಿಂತನ ಗೋಷ್ಠಿ ನಡೆಯಲಿದ್ದು, ಶಾಸಕ ರಾಜಶೇಖರ ಪಾಟೀಲ ಉದ್ಘಾಟಿಸುವರು. ಡಾ. ಸುರೇಶ ಹಿರೇಮಠ ಅವರು ಫ.ಗು. ಹಳಕಟ್ಟಿ ಅವರ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಲಿದ್ದಾರೆ.
13ರಂದು ಬೆಳಗ್ಗೆ 10.30ಕ್ಕೆ 27ನೇ ಶರಣ ಮೇಳವನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. 2014ನೇ ವರ್ಷದ ಕ್ಯಾಲೆಂಡರ್ನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ ಬಿಡುಗಡೆ ಮಾಡುವರು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಜೇಬಿನ ಆವೃತ್ತಿ ಲೋಕಾರ್ಪಣೆ ಮಾಡುವರು. ಅತಿಥಿಗಳಾಗಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ಬಿಜಾಪುರ ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ, ಶಾಸಕರಾದ ಹುಲ್ಲಪ್ಪ ಮೇಟಿ, ವಿಜಯಾನಂದ ಕಾಶಪ್ಪನವರ ಭಾಗವಹಿಸುವರು. ಅಲ್ಲದೆ, ಇದೇ ಸಂದರ್ಭದಲ್ಲಿ ಶರಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. 14ರಂದು ಗಣಲಿಂಗ ದರ್ಶನ ಮತ್ತು ಸಮುದಾಯ ಪ್ರಾರ್ಥನೆ ನಡೆಯಲಿದೆ. 15ರಂದು ಸಿದ್ಧರಾಮೇಶ್ವರ ಜಯಂತಿ, ಶರಣ ಮೇಳದ ಸಮಾರೋಪ ನಡೆಯಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

