ಧಾರವಾಡ

ಶಿಕ್ಷಕರ ಪರ ನಿಲುವು ಸ್ವಾಗತಾರ್ಹ: ಹೊರಟ್ಟಿ

Published On :

ಹುಬ್ಬಳ್ಳಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಕೆಲಸಕ್ಕೆ ಸೇರಿದ ದಿನದಿಂದ ವೇತನ ನೀಡುವಂತೆ ಕೇಳುತ್ತಿರುವುದನ್ನ್ನು ನಿರಾಕರಿಸುವ ಸಲುವಾಗಿ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯನ್ನ್ನು ರಾಜ್ಯಪಾಲರು ವಾಪಸ್ ಕಳುಹಿಸುವ ಮೂಲಕ ಸಾವಿರಾರು ಶಿಕ್ಷಕರಿಗೆ ಸಂತಸ ಮೂಡಿಸಿದ್ದಾರೆ. ರಾಜ್ಯಪಾಲರ ನಿಲುವು ಅತ್ಯಂತ ಸ್ವಾಗತಾರ್ಹ ಎಂದು ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಕ್ಕೊಂದು ಭಾಗ್ಯದ ಹೆಸರಿನಲ್ಲಿ ಯೋಜನೆ ಘೋಷಿಸುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಒಂದೆಡೆಯಾದರೆ, ಉಚ್ಛನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯ ಶಿಕ್ಷಕರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿ ಶಿಕ್ಷಕರ ಪರ ಆದೇಶ ಹೊರಡಿಸಿ ಸಾವಿರಾರು ಶಿಕ್ಷಕರಿಗೆ ಸೌಭಾಗ್ಯ ಕಲ್ಪಿಸಿದೆ. ನ್ಯಾಯಾಲಯ ಕಲ್ಪಿಸಿದ ಸೌಭಾಗ್ಯವನ್ನು ಕಾಂಗ್ರೆಸ್ ಸರ್ಕಾರ ಸುಗ್ರೀವಾಜ್ಞೆ ಎಂಬ ಭೂತ ಹೊರಡಿಸುವ ಪ್ರಯತ್ನ ್ನಮಾಡಿ ಸಾವಿರಾರು ಶಿಕ್ಷಕರಿಗೆ ದೌರ್ಭಾಗ್ಯ ತಂದಿಟ್ಟಿದೆ. ಸಮಾಜ ಕಟ್ಟುವ ಶಿಕ್ಷಕರ ಬೇಡಿಕೆಗೆ ಸ್ಪಂದಿಸದೇ ಶಿಕ್ಷಕರಪರ ನಿಲುವು  ತಾಳದ ಕಾಂಗ್ರೆಸ್ ಸರ್ಕಾರ ಯಾವ ಭಾಗ್ಯಕ್ಕಾಗಿ ಆಡಳಿತ ನಡೆಸುತ್ತಿದೆ ಎಂಬುದು ಅರ್ಥವಾಗದಾಗಿದೆ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಪರ ಈ ಹಿಂದೆ ಆಡಳಿತ ಮಾಡಿದ ಹಲವಾರು ಸರ್ಕಾರಗಳು ಉತ್ತಮ ನಿಲುವನ್ನ್ನು ತೆಗೆದುಕೊಳ್ಳುವ ಮೂಲಕ ಶಿಕ್ಷಕರಿಗೆ ಬೋಧನೆ ಮಾಡಲು ಉತ್ತಮ ಅವಕಾಶ ಕಲ್ಪಿಸಿದೆ. ಅನುದಾನಿತ ಶಿಕ್ಷಕರು ಅನುದಾನ ರಹಿತ ಅವಧಿಯ ಸೇವೆಯ ಸೌಲಭ್ಯ ಪಡೆಯಲು ಹಲವಾರು ದಿನಗಳಿಂದ ಹೋರಾಟ ಮಾಡುತ್ತಾ ಬಂದಿವೆ.
ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಮತ್ತು ಪದವಿಕಾಲೇಜುಗಳ ಬೋಧಕ ಬೋಧಕೇತರ ಸಿಬ್ಬಂದಿ ಸೇವೆಗೆ ಸೇರಿದ ದಿನದಿಂದಲೇ ವೇತನ ಹಾಗೂ ನಿವೃತ್ತಿ ವೇತನ ನೀಡಬೇಕೆಂದು ಕಳೆದ ದಶಕದಿಂದ ಹೋರಾಟ ಮಾಡಿದ ಫಲದಿಂದ ಸರ್ವೋಚ್ಚ ನ್ಯಾಯಾಲಯ ಶಿಕ್ಷಕರ ಪರ ನಿಲುವು ಆದೇಶ ಹೊರಡಿಸಿದೆ.  
ಈಗಾಗಲೇ ನ್ಯಾಯಾಲಯದ ಆದೇಶದಂತೆ ಎಸ್. ಮಧುಚಂದ್ರ ಅವರಿಗೆ ಸರಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದು, ಅದೇ ರೀತಿ ನ್ಯಾಯಾಲಯದ ಆದೇಶ ಪಡೆದ ಸಿಬ್ಬಂದಿ ನ್ಯಾಯಾಂಗ ನಿಂದನಾ ಪ್ರಕರಣಗಳನ್ನ್ನು ದಾಖಲಿಸಿದ 30ಕ್ಕೂ ಹೆಚ್ಚು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ವೇತನ, ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನ್ನು ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದೆ. ಇನ್ನ್ನೂ 500ಕ್ಕೂ ಹೆಚ್ಚು ಜನರು ನ್ಯಾಯಾಲಯದಿಂದ ಆದೇಶ ಪಡೆದಿದ್ದು, ಅವರೂ ಕೂಡಾ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಿದಲ್ಲಿ ಅವರಿಗೂ ಕೂಡಾ ಕೆಲಸಕ್ಕೆ ಹಾಜರಾದ ದಿನದಿಂದ ವೇತನ, ಪಿಂಚಣಿ ಹಾಗೂ ಇತರೆ  ಸೌಲಭ್ಯಗಳನ್ನು ಕೊಡುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ.
ವಸ್ತುಸ್ಥಿತಿ ಹೀಗಿದ್ದರೂ ಕೂಡಾ ನ್ಯಾಯಾಲಯಕ್ಕೆ ಹೋಗಿ ನ್ಯಾಯಾಂಗ ನಿಂದನಾ ಪ್ರಕರಣಗಳನ್ನ್ನು ದಾಖಲಿಸಿದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಮಾತ್ರ ಎಲ್ಲ ಸೌಲಭ್ಯ್ನ ನೀಡಿ ಉಳಿದ ಸಿಬ್ಬಂದಿಗೆ ಕೊಡದಿರುವುದು ಸಹಜ ನ್ಯಾಯಕ್ಕೆ ವಿರುದ್ಧವಾದದ್ದಲ್ಲದೇ, ಶಿಕ್ಷಕರ ವಿರೋಧಿ ನಿಲುವನ್ನ್ನು ಸರ್ಕಾರ ಹೊಂದಿದೆ ಎಂಬ ಸಂದೇಶ ರವಾನೆಯಾಗುತ್ತದೆ. ಇಂತಹ ಸರ್ಕಾರದ ನಿಲುವಿನ ವಿರುದ್ಧ ಪ್ರಗತಿಪರ ಚಿಂತನೆಯುಳ್ಳ ರಾಜ್ಯಪಾಲರು ಸುಗ್ರೀವಾಜ್ಞೆಯನ್ನ್ನು ವಾಪಸ್ ಕಳುಹಿಸುವ ಮೂಲಕ ಸಾವಿರಾರು ಶಿಕ್ಷಕರ ಮುಖದಲ್ಲಿ ಸಂತಸ ತಂದಿದ್ದಾರೆ. ಸರ್ಕಾರ ಮುಂದಾದರೂ ಶಿಕ್ಷಕರ ವಿರೋಧಿ ನೀತ್ನಿ ತೆಗೆದುಕೊಳ್ಳುವುದನ್ನ್ನು ಬಿಡಬೇಕು. ಸರ್ಕಾರದ ಇಂತಹ ನಿರ್ಣಯಗಳು ಅತ್ಯಂತ ಖಂಡನಾರ್ಹ ಎಂದು ಹೊರಟ್ಟಿ ಸರ್ಕಾರದ ನೀತಿಯನ್ನು ಪ್ರಬಲವಾಗಿ ವಿರೋಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.