ಧಾರವಾಡ

ದಾಂಡೇಲಿ: ಅಪಾಯಕ್ಕೆ ಸಿಲುಕಿದ್ದ 6 ಪ್ರವಾಸಿಗರ ರಕ್ಷಣೆ

Published On :

ಕಾರವಾರ: ದಾಂಡೇಲಿ ಸಮೀಪದ ಮೌಳಂಗಿ ಗ್ರಾಮದಲ್ಲಿ ನದಿಗೆ ಈಜಲು ತೆರಳಿ, ಅಪಾಯಕ್ಕೆ ಸಿಲುಕಿದ್ದ ಆರು ಪ್ರವಾಸಿಗರನ್ನು ಗುರುವಾರ ದಾಂಡೇಲಿ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ರಕ್ಷಿಸಿದ್ದಾರೆ. ಧಾರವಾಡದ ಮಾಂತೇಶ ಮೂಗಪ್ಪ ಹೆಬ್ಬಳ್ಳಿ (22), ಸಂಜು ವಿಠ್ಠಲ್ ಗಾಯಕವಾಡ (20),  ವಿಜಯ ಯಲ್ಲಪ್ಪ ಪೂಜಾರಿ (21), ಜಗದೀಶ ಬಾಬುರಾವ್ ಕೋಡಗಣ್ಣವರ (21), ಸಚಿನ್ ಬಸವರಾಜ ನಂಜಪ್ಪನವರ (21), ಪರಶುರಾಮ ಗೋವಿಂದ ಜಕ್ತಾಬ (20), ಪರಶುರಾಮ ಗೋವಿಂದ ಜಕ್ತಾಬ್ ಪೊಲೀಸರಿಂದ ರಕ್ಷಿಸಲ್ಪಟ್ಟ ಯುವಕರು. ಬುಧವಾರ ಸಂಜೆ 4ಕ್ಕೆ ಮೌಳಂಗಿಗೆ ಪ್ರವಾಸಕ್ಕೆ ಅವರೆಲ್ಲ ಆಟೋ ರಿಕ್ಷಾದಲ್ಲಿ ಬಂದಿದ್ದರು. ನದಿಯಲ್ಲಿ ಈಜಾಡಲು ಇಳಿದಾಗ ನೀರಿನ ಹರಿವು ಹೆಚ್ಚಾಗಿ ದಡಕ್ಕೆ ಬರಲಾಗದೆ ನದಿಯ ಮಧ್ಯದಲ್ಲಿ ಕಲ್ಲು ಹಿಡಿದುಕೊಂಡು ಸಹಾಯಕ್ಕಾಗಿ ಯಾಚಿಸುತ್ತಿದ್ದರು. ಆಗ ದಾಂಡೇಲಿ ಗ್ರಾಮಾಂತರ ಠಾಣೆಯ ಎಎಸ್‌ಐ ಎಸ್.ಎ. ಹುಕ್ಕೇರಿ ಹಾಗೂ ಸ್ಟ್ಯಾನ್ಲಿ ರೇಸಾರ್ಟ್ ಮಾಲೀಕ ಮತ್ತು ಕಿಮ್ ನೇಪಾಲಿ, ವಿನೋದ, ರವಿ, ಬಾಲಾಜಿ, ಶಂಕರ, ಸಾಗರ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನೀರಿನಲ್ಲಿದ್ದ ಆರು ಜನರನ್ನು ನದಿಯಿಂದ ರಕ್ಷಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.