ಧಾರವಾಡ

ನಕಲಿ ದಾಖಲೆ ಸೃಷ್ಟಿಸಿ ಒಕ್ಕಲೆಬ್ಬಿಸುವ ಯತ್ನ: ಆರೋಪ

Published On :


ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 11
ಸ್ಥಳೀಯ ಭವಾನಿನಗರ ಧೋಬಿ ಘಾಟ ಪ್ರದೇಶಕ್ಕೆ ಸಂಬಂಧಿಸಿದಂತೆ ನಿಜಾಮುದ್ದೀನ ಸೈಯ್ಯದ ಎಂಬ ವ್ಯಕ್ತಿ ನಕಲಿ ದಾಖಲೆ ಸೃಷ್ಟಿಸಿ ಬಡ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆ ಭಾಗದ ನಿವಾಸಿಗಳು ಆರೋಪಿಸಿದ್ದಾರೆ.
ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಾರ್ವತೆವ್ವ ಅನವಾಲ, ರುಕ್ಷ್ಮಿಣಿಬಾಯಿ ಬೆಂಗೇರಿ ಹಾಗೂ ಸುಧಾ ಉಳ್ಳಾಗಡ್ಡಿ, 60 ವರ್ಷಗಳಿಂದ ತಾವು ಧೋಬಿ ಘಾಟ ಪ್ರದೇಶದಲ್ಲಿ ವಾಸವಾಗಿದ್ದೇವೆ. ಇದೀಗ ನಿಜಾಮುದ್ದೀನ್ ಸೈಯ್ಯದ್ ಎಂಬವರು ಈ ಪ್ರದೇಶದಲ್ಲಿ ಅತಿಕ್ರಮಣ ಪ್ರವೇಶ ಮಾಡಿದ್ದಾರೆ ಎಂದು ದೂರಿದರು.
ಅಲ್ಲದೇ, ಅಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಕಡಿದು ಹಾಕಿ ತಂತಿಬೇಲಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಆ ಪ್ರದೇಶದಲ್ಲಿ ವಾಸವಾಗಿರುವ ತಮ್ಮೆಲ್ಲರನ್ನೂ ಬೆದರಿಕೆವೊಡುತ್ತಿದ್ದಾರೆ. ಆದ್ದರಿಂದ ತಮಗೆ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.
ಭವಾನಿನಗರದ ಸಿಸಿ ನಂ. 2809ದಿಂದ 2817ವರೆಗಿನ ಆಸ್ತಿ ಮೂಲತಃ ಪ್ರಥಮ ಶೆಟ್ಟಿ ಎಂಬುವರಿಗೆ ಸೇರಿದ್ದು, ಇದನ್ನು 99 ವರ್ಷಗಳ ಕಾಲ ಭೋಗ್ಯದ ಕರಾರಿನ ಮೇಲೆ ವಾಮನರಾವ್ ದೇಸಾಯಿ ಎಂಬವರು ಪಡೆದುಕೊಂಡಿದ್ದಾರೆ ಎಂದರು.
6-10-91 ಹಾಗೂ 4-1-2014 ರಂದು ಆಸ್ತಿಗೆ ಸಂಬಂಧಿಸಿದಂತೆ ಪಡೆದ ದಾಖಲಾತಿಗಳಲ್ಲಿ ಎಲ್ಲಿಯೂ ನಿಜಾಮುದ್ದೀನ್ ಸೈಯ್ಯದ್ ಹೆಸರಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಎದುರು ದಾಖಲೆಗಳನ್ನು ಪ್ರದರ್ಶಿಸಿದರು. ಜಾಗದಲ್ಲಿ ಅತಿಕ್ರಮಣ ಪ್ರವೇಶ ಮಾಡಿದ್ದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ದರಿಂದ ನಿಜಾಮುದ್ದೀನ್ ಸೈಯ್ಯದ್ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳುವ ಮೂಲಕ ಆ ಭಾಗದ ಬಡ ಹಾಗೂ ಮುಗ್ಧ ನಾಗರಿಕರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಪೊಲೀಸರಿಂದ ಪರಿಶೀಲನೆ: ಭವಾನಿನಗರದ ಧೋಬಿ ಘಾಟ ಪ್ರದೇಶದಲ್ಲಿ ನಿಜಾಮುದ್ದೀನ್ ಸೈಯ್ಯದ್ ಎಂಬ ವ್ಯಕ್ತಿ ಅತಿಕ್ರಮಣ ಪ್ರವೇಶ ಮಾಡಿ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.