ಧಾರವಾಡ

ಒಳಮೀಸಲಾತಿಗೆ ಮಾದರ ಸಮಾಜ ಸೇರಿಸಿ: ಆಗ್ರಹ

Published On :

ಕಲಘಟಗಿ: ಎಲ್ಲ ರಾಜಕೀಯ ಪಕ್ಷಗಳು ಮಾದರ ಸಮಾಜ ಬಾಂಧವರನ್ನು ಕೇವಲ ಮತಬ್ಯಾಂಕ್‌ವನ್ನಾಗಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಆರೋಪಿಸಿದರು.
ಪಪಂ ಸಭಾಭವನದಲ್ಲಿ ಜರುಗಿದ ತಾಲೂಕು ಮಾದರ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರದಿಂದ ಸಮಾಜಕ್ಕೆ ಲಭಿಸಬೇಕಾಗಿರುವ ಸವಲತ್ತುಗಳನ್ನು ಪಡೆಯಲು ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ಸಲಹೆ ನೀಡಿದ ಅವರು, ಮಾದರರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರೆಯುವಂತಾಗಲು ಈ ಸಮಾಜವನ್ನು ಒಳಮೀಸಲಾತಿ ವ್ಯಾಪ್ತಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕಾರ್ಯ ಪ್ರವೃತ್ತರಾಗದಿದ್ದಲ್ಲಿ ಸಮಾಜ ಬಾಂಧವರು ಲೋಕಸಭೆ ಚುನಾವಣೆಯಲ್ಲಿ ಅಂತಹ ಪಕ್ಷಗಳಿಗೆ ತಕ್ಕಪಾಠ ಕಲಿಸಬೇಕು ಎಂದರು.
ಫೆ. 23ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಜ್ಯ ಮಾದರ ಸಮಾಜದ ಸಮಾವೇಶವನ್ನು ಯಶಸ್ವಿಗೆ ಎಲ್ಲರೂ ಶ್ರಮಿಸಬೇಕೆಂದರು. ಜಿಲ್ಲಾ  ಮಾದರ ಸಮಾಜದ ಅಧ್ಯಕ್ಷ ಅಶೋಕ ದೊಡ್ಡಮನಿ, ರಾಮಣ್ಣ ಹರಿಜನ, ವೆಂಕಟೇಶ ಸಕ್ಪಾಲ, ತಾಲೂಕು ಸಮಾಜದ ಅಧ್ಯಕ್ಷ ಶಿವಪ್ಪ ಸೊಲಾರಕೊಪ್ಪ, ಶಿವಪ್ಪ ನಡುವಿನಮನಿ, ಉಳವಪ್ಪ ಬಿದರಳ್ಳಿ, ವೈ. ಎನ್. ಮಾಳಗಿ, ದೇವೇಂದ್ರ ಕಟ್ಟಿಮನಿ, ನಿಂಗಪ್ಪ ಮಾದರ, ಬನಪ್ಪ ಮಾಳಗಿ, ಯಲ್ಲಪ್ಪ ಹುಲಮನಿ, ಯಲ್ಲಪ್ಪ ದೊಡ್ಡಮನಿ, ಚನ್ನಮ್ಮ ಮುತ್ತಗಿ, ನಿಂಗಪ್ಪ ಕಟ್ಟಿಮನಿ, ನಿಂಗಪ್ಪ ಹರಿಜನ, ದುರ್ಗಪ್ಪ ಇತರರಿದ್ದರು.
---
ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಇಂದು ಚಾಲನೆ
ಅಣ್ಣಿಗೇರಿ: ಜಿಲ್ಲಾಡಳಿತದ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೊರಬನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜ. 13 ರಂದು ಮೆಕ್ಕೆಜೋಳ ಖರೀದಿ ಕೇಂದ್ರದ ಆರಂಭಗೊಳ್ಳಲಿದೆ. ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಪ್ರಸಕ್ತ ವರ್ಷ ಈಗಾಗಲೇ  ನವಲಗುಂದ ತಾಲೂಕು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದೆ. ಪ್ರಸಕ್ತ ಸಾಲಿನಲ್ಲಿ 20 ಸಾವಿರ ಹೆಕ್ಟೇರ್ ಜಮೀನಿನಲ್ಲಿ 7ರಿಂದ 8 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಉತ್ಪಾದನೆಯಾಗುವ ಸಂಭವವಿದೆ. ಒಂದೇ ಕೇಂದ್ರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆ ಖರೀದಿಸಲು ಮುಂದಾದ್ದಲ್ಲಿ ರೈತರಿಗೆ ತೀರಾ ಅನಾನುಕೂಲವಾಗಲಿದ್ದು ಇನ್ನಷ್ಟು ಕೇಂದ್ರಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತ ಇದೀಗ ಮತ್ತೊಂದು ಮೆಕ್ಕೆಜೋಳ ಕೇಂದ್ರದ ಆರಂಭಕ್ಕೆ ಸಮ್ಮತಿ ಸೂಚಿಸಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಎಪಿಎಂಸಿ ಅಧ್ಯಕ್ಷ ಅಣ್ಣಪ್ಪ ಭಾಗಿ, ಸದಸ್ಯರಾದ ವಿಲಾಸರೆಡ್ಡಿ ಕೋನರೆಡ್ಡಿ, ಪ್ರಕಾಶ ಅಂಗಡಿ, ಗಂಗಪ್ಪ ಮನಮಿ ಸಮಿತಿ ಕಾರ್ಯದರ್ಶಿ ಮೋಹನ ಮೇಗೇರಿ ವಿನಂತಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.