ಗವಿಸಿದ್ಧೇಶ್ವರ ಜಾತ್ರೆಗೆ ವಿಧ್ಯುಕ್ತ ಚಾಲನೆ
ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆಗೆ ಮಂಗಳವಾರದಿಂದಲೇ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಮುತ್ತೈದೆಯರು ಮಕ್ಕಳು ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಮೂಲಕ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಸಂಜೆ ಬಸವ ಪಟ ಆರೋಹಣ ನಡೆಯಿತು.
ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಸಂಪ್ರದಾಯದಂತೆ ಮಂಗಳವಾರ ಶ್ರೀ ಅನ್ನಪೂರ್ಣೇಶ್ವರಿಗೆ ಉಡಿತುಂಬುವ ಕಾರ್ಯಕ್ರಮ ಸಂಜೆ ಜರುಗಿತು. ಕಾರ್ಯಕ್ರಮದಲ್ಲಿ ಇರಕಲ್‌ಗಡಾ ಗ್ರಾಮದ ಜೈ ಸಂತೋಷಿಮಾತಾ ಮಂದಿರದ ರತ್ನಮ್ಮತಾಯಿ ಅವರು 20-25 ವರ್ಷಗಳಿಂದಲೂ ಶ್ರೀಮಠಕ್ಕೆ ಆಗಮಿಸಿ ಗವಿಮಠದ ಬೆಟ್ಟದ ಮೇಲಿನ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿವಿಧ ಅಲಂಕಾರ ಮಾಡಿ ವಿವಿಧ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಯಿತು. ಹೋಳಿಗೆ, ಸಜ್ಜಕ ನೈವೇದ್ಯ ಸಮರ್ಪಿಸಲಾಯಿತು. ಉಡಿತುಂಬುವ ಕಾಯಕಕ್ಕೆ ರತ್ನಮ್ಮತಾಯಿ ಅವರು ನೆರವೇರಿಸಿದರು. ಬಳಿಕ ಸ್ವಾಮಿಗಳ ಪಾದೋದಕ ಆಗಮಿಸಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ಕೊಪ್ಪಳ ಸೇರಿದಂತೆ ವಿವಿಧ ಗ್ರಾಮಗಳ ಮಹಿಳೆಯರು ಉಡಿ ತುಂಬುವ ಕಾರ್ಯದಲ್ಲಿ ನಿರತರಾಗಿದ್ದರು. ಉಡಿ ತುಂಬಲು ಬಂದ ಸಾವಿರಾರು ಮಹಿಳೆಯರು ತಮ್ಮ ಇಷ್ಟಾರ್ಥಗಳ ಕುರಿತು ಬೇಡಿಕೊಂಡರು. ಉಡಿ ತುಂಬುವ ಕಾರ್ಯದಲ್ಲಿ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗ, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಅಕ್ಕಿ, ಕಣ, ಎಲೆ, ಅಡಿಕೆ, ಹಸಿರುಬಳೆ, ಹೀಗೆ ಮಂಗಲದ್ರವ್ಯಗಳನ್ನು ಉಡಿ ತುಂಬುವ ವೇಳೆ ಅರ್ಪಿಸಲಾಯಿತು.
ಬಸವ ಪಟ ಆರೋಹಣ: ಶ್ರೀ ಗವಿಮಠದಲ್ಲಿ ಸಂಜೆ 6ಕ್ಕೆ ಬಸವ ಪಟ ಆರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಬಸವ ಪಟದಲ್ಲಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ, ಗಿಡ-ಮರ ಬಳ್ಳಿ ಮುಂತಾದ ಪ್ರಕೃತೀಯ ಚಿತ್ರಣಗಳು ಅದರಲ್ಲಿ ಅಳವಡಿಸಲಾಗಿದೆ. ಬಸವ ಪಟವನ್ನು ವಿಧಿ-ವಿಧಾನಗಳಿಂದ ಪೂಜೆಗೈದು ಮಂಗಳಾರತಿ ಎತ್ತಿ ಕರ್ತೃ ಗದ್ದುಗೆಗೆ ಪ್ರದಕ್ಷಣೆಗೈದು ಗದ್ದುಗೆ ಮುಂಭಾಗದಲ್ಲಿ ಶಿಲಾ ಕಂಬಕ್ಕೆ ಕಟ್ಟುವುದರ ಮೂಲಕ ಜಾತ್ರಾ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

