ಧಾರವಾಡ

ವಿಶ್ವಮಾನವತೆ ಮೈಗೂಡಿಸಿಕೊಂಡ ಡಾ. ಪಂಚಾಕ್ಷರಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 14
ಪ್ರೇಮವನ್ನು ಕಾವ್ಯದ ಮೂಲವಾಗಿಸಿಕೊಂಡು ಸಾಹಿತ್ಯ ಕೃಷಿ ಮಾಡುವ ಮೂಲಕ ಡಾ. ಪಂಚಾಕ್ಷರಿ ಹಿರೇಮಠ ಅವರು ವಿಶ್ವಮಾನವತೆ ಮೈಗೂಡಿಸಿಕೊಂಡರು ಎಂದು ಸಾಹಿತಿ ಡಾ. ಪ್ರಹ್ಲಾದ ಅಗಸನಕಟ್ಟೆ ಹೇಳಿದರು.
ಡಾ. ಪಂಚಾಕ್ಷರಿ ಹಿರೇಮಠ ದತ್ತಿ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಪಂಚಾಕ್ಷರಿ ಹಿರೇಮಠರ ಕಾವ್ಯ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.
ಡಾ. ಪಂಚಾಕ್ಷರಿ ಕಾವ್ಯದಲ್ಲಿ ಪ್ರೇಮ, ಅನುಭಾವವಿದೆ. ಅವರ ಕಾವ್ಯಕ್ಕೆ ನಂಜನ್ನು ಅಮೃತವನ್ನಾಗಿಸುವ ಶಕ್ತಿ ಇದೆ. ಡಾ. ಪಂಚಾಕ್ಷರಿ ಅವರ ಕಾವ್ಯದಲ್ಲಿ ಭಕ್ತಿ ಪಂಥದ ಪ್ರತಿಪಾದಕರಾದ ಕಬೀರ್, ಮೀರಾಬಾಯಿ, ಚೈತನ್ಯರು, ರಮಾನಂದರು ಹಾಗೂ ಬಸವಣ್ಣನವರ ಪ್ರಭಾವವನ್ನು ಕಾಣಬಹುದು. ಇವರ ಕಾವ್ಯಗಳಲ್ಲಿ ಕ್ರಾಂತಿ, ರಸೋತ್ಪತ್ತಿ ಹಾಗೂ ಸ್ವತಂತ್ರ ವಿಚಾರದೊಂದಿಗೆ ಅಪ್ಪಟ ದೇಶಿಯ ಸೊಗಡು ಕಾಣುತ್ತೇವೆ ಎಂದು ಹೇಳಿದರು.
ತಮ್ಮ ಕಾವ್ಯ ಜೀವನದೊಂದಿಗೆ ಬಹುಭಾಷಾ ವಿಶಾರದರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಉತ್ತಮ ವಾಗ್ಮಿಗಳಾಗಿ ಕನ್ನಡ ಸಾಹಿತ್ಯ  ಶ್ರೀಮಂತಗೊಳಿಸಿದ್ದಾರೆ.
ಡಾ. ಪಂಚಾಕ್ಷರಿ ಹೀರೇಮಠ ತಮ್ಮ ಸಾಹಿತ್ಯ ಜೀವನದ ಅನುಭವಗಳನ್ನು ಹಂಚಿಕೊಂಡರು. ಸಂಘದ ಕಾರ್ಯಾಧ್ಯಕ್ಷ ಪ್ರೊ. ಬಿ.ವಿ. ಗುಂಜೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಜಯಶ್ರೀ ಮೃತ್ಯುಂಜಯ ಹಿರೇಮಠ ಪ್ರಾರ್ಥಿಸಿದರು. ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಮೃತ್ಯುಂಜಯ ಹಿರೇಮಠ, ಶಿಕ್ಷಕರಾದ ವೀರಣ್ಣ ಒಡ್ಡೀನ, ರಾಘವೇಂದ್ರ, ರವೀಂದ್ರ ವಸ್ತ್ರದ, ಎಂ.ಬಿ. ಹೆಗ್ಗೇರಿ, ದೇವಪ್ಪ ಸುಣಗಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.