ಧಾರವಾಡ

ಪೈಗಂಬರ ತತ್ವ ಅಳವಡಿಸಿಕೊಳ್ಳಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 14
ಪ್ರವಾದಿ ಮಹ್ಮದ್ ಪೈಗಂಬರ್ ಅವರು ಮನುಕುಲಕ್ಕೆ ನೀಡಿರುವ ತತ್ವ, ಸಿದ್ಧಾಂತವನ್ನು ಅಳವಡಿಸಿಕೊಂಡು ಈದ್-ಮಿಲಾದ್-ಉನ್-ನಬಿ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಹೋರಾಟ ವೇದಿಕೆ ವತಿಯಿಂದ ಪ್ರವಾದಿ ಮಹ್ಮದ ಪೈಗಂಬರರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಹಜರತ್ ಸೈಯ್ಯದ ಫತೇಶಾವಲಿ ದರ್ಗಾದಲ್ಲಿ ಬಡವರಿಗೆ ಕಂಬಳಿ ವಿತರಿಸಿ ಅವರು ಮಾತನಾಡಿದರು.
ವೇದಿಕೆ ಕಾರ್ಯದರ್ಶಿ ನಜೀರ್‌ಅಹ್ಮದ್ ಕೋಲಕಾರ, ಸಮಾಜದಲ್ಲಿ ನಿರ್ಗತಿಕರಾಗಿ ಜೀವನ ನಡೆಸುತ್ತಿರುವವರಿಗೆ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತ ಮುಖಂಡ ಮಹ್ಮದ್‌ರಫೀಕ್ ಬಂಕಾಪುರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಮೌಲಾನಾ ಜಹರುದ್ದೀನ್ ಖಾಜಿ, ನಜೀರಹ್ಮದ್ ಕೋಲಕಾರ, ಬಾಬಾಜಾನ್ ಮುಧೋಳ, ಬಾಬುಲಾಲ್ ಮುಲ್ಲಾ, ಮುನ್ನಾ ಲಕ್ಕುಂಡಿ, ಅಹ್ಮದಬಾಷಾ ಇನಾಂದಾರ, ಮುನ್ನಾವಡ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಇಕ್ಬಾಲ್ ಚಿತ್ತೆವಾಲೆ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.