ಧಾರವಾಡ

ಮಹಾಪ್ರಬಂಧಕರೊಂದಿಗೆ ಸಂಸದ ಜೋಶಿ ಚರ್ಚೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ.14
ನೈಋತ್ಯ ರೇಲ್ವೆ ಮಹಾಪ್ರಬಂಧಕರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಪ್ರದೀಪ ಸಕ್ಸೆನಾ ಅವರನ್ನು ಈಚೆಗೆ ಸಂಸದ ಪ್ರಹ್ಲಾದ ಜೋಶಿ ಭೇಟಿ ಮಾಡಿ ರಾಜ್ಯದ ಮತ್ತು ಈ ಭಾಗದ ರೇಲ್ವೆ ಯೋಜನೆಗಳ ಕುರಿತು ಚರ್ಚಿಸಿದರು.
ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಸುಧಾರಣಾ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಹೊಸ ನಿಲ್ದಾಣದಲ್ಲಿ ಸ್ವಯಂಚಾಲಿತ ಮೆಟ್ಟಿಲುಗಳ ಕಾಮಗಾರಿ ಆರಂಭವಾಗಿಲ್ಲ.
ಅದೇ ರೀತಿ ಹುಬ್ಬಳ್ಳಿ-ಅಂಕೋಲಾ ಹೊಸಮಾರ್ಗದ ಪ್ರಗತಿ ಮತ್ತು ರಾಜ್ಯದ ಇತರ ಹೊಸಮಾರ್ಗಗಳ ಬಗ್ಗೆ ಸಂಸದ ಜೋಶಿ ಮತ್ತು ಪಿ.ಜೆ. ಸಕ್ಸೆನಾ ಮಧ್ಯೆ ವಿವರವಾದ ಚರ್ಚೆ ನಡೆಯಿತು. ಹುಬ್ಬಳ್ಳಿ-ಲೋಕಮಾನ್ಯ ತಿಲಕ (ಮುಂಬೈ) ಸಾಪ್ತಾಹಿಕ ರೈಲು ನಿತ್ಯ ಸಂಚರಿಸಬೇಕು. ಹುಬ್ಬಳ್ಳಿ-ಸಿಕಂದರಾಬಾದ್ ರೈಲು ನಿತ್ಯ ಸಂಚರಿಸಬೇಕು. ಹುಬ್ಬಳ್ಳಿ-ಮುಂಬೈ ರೈಲಿಗೆ ಅಳ್ನ್ನಾವರದಲ್ಲಿ ನಿಲುಗಡೆ ಕಲ್ಪಿಸಬೇಕು. ಧಾರವಾಡ-ಮೈಸೂರು ರೈಲಿಗೆ ಯಲವಿಗಿ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿದ್ದು ಈ ಸೌಲಭ್ಯ ಮುಂದುವರಿಸಬೇಕು. ಸಂಶಿ ಗ್ರಾಮದಲ್ಲಿನ ರೇಲ್ವೆ ಬ್ರಿಜ್ ಸಮಸ್ಯೆ, ಧಾರವಾಡ ತಾಲೂಕಿನ ಕೂಗಲಗೇರಿ ಕಾಶಿನಟ್ಟಿ ಹಾಗೂ ಪುರ ಗ್ರಾಮಗಳ ಹತ್ತಿರದ ರೇಲ್ವೆಗೇಟ್ ಸಮಸ್ಯೆಗಳು ಸೇರಿದಂತೆ  ಇತರ ವಿಷಯಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದ ಭೂಸ್ವಾಧೀನ ಕುರಿತು ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಸಂಶಿ ಗ್ರಾಮಪಂಚಾಯತಿ ಸದಸ್ಯರಾದ ಪ್ರಕಾಶ ಪಾಟೀಲ, ಶಿವಣ್ಣ ಸೊರಟಿ, ಎ.ಬಿ. ಉಪ್ಪಿನ, ಆರ್.ಜಿ. ಪಾಟೀಲ, ಸಿ.ವಿ. ಕೋರಿ, ಸಿ.ವಿ. ಬೆಳ್ಳಟ್ಟಿ,  ಬಸಣ್ಣ ಉಣಕಲ್, ಎಲ್ಲಪ್ಪಗೌಡ ಬಳಗಾನೂರ, ಉಮೇಶಗೌಡ ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.