ಧಾರವಾಡ

ಕಲಘಟಗಿ ಬಸ್ ಡಿಪೋ ನಿರ್ಮಾಣ: 20ರಂದು ರಸ್ತೆ ತಡೆ

Published On :

ಕಲಘಟಗಿ: ತಾಲೂಕು ಕೇಂದ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ  ಬಸ್ ಡಿಪೋ ನಿರ್ಮಿಸದಿದ್ದರೆ ಜ. 20ರಂದು ರಸ್ತೆ ತಡೆ ನಡೆಸಲು ಕರ್ನಾಟಕ ಜನಪರ ಅಭಿವೃದ್ಧಿ ಹೋರಾಟ ತಾಲೂಕು ಸಮಿತಿ ನಿರ್ಧರಿಸಿದೆ. ಗುರುವಾರ ಈ ಕುರಿತು ತಹಸೀಲ್ದಾರ್‌ಗೆ ನೀಡಿದ ಮನವಿಯಲ್ಲಿ, ಹಲವು ವರ್ಷಗಳಿಂದ ಡಿಪೋ ನಿರ್ಮಾಣ ಆಗದ್ದರಿಂದ ಜನತೆ, ವಿದ್ಯಾರ್ಥಿಗಳು ಪ್ರತಿಭಟನೆ ಹಾದ್ನಿ ಹಿಡಿದಿದ್ದೇವೆ. ಸಾರಿಗೆ ಸಚಿವರಿಗೆ, ಸ್ಥಳೀಯ ಶಾಸಕರಿಗೆ ಮನವಿ ನೀಡಿದರೂ ಬೇಡಿಕೆ ಈಡೇರಿಲ್ಲ.  ತಾಲೂಕಿನ ಜನರಿಗೆ ಸಾರಿಗೆ ಸೌಲಭ್ಯ ಸರಿಯಾಗಿ ಸಿಗದೆ ಪರದಾಡುವಂತಾಗಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಯಲ್ಲಪ್ಪ ಯಲ್ಲಾರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಡ್ಡೇರ ಹೇಳಿದರು. ತಾಲೂಕು ಗೌರವಾಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಉಪಾಧ್ಯಕ್ಷ ಶಿವಾನಂದ ದೊಡ್ಡಮನಿ, ಕಾರ್ಯದರ್ಶಿ ಉಮೇಶ ವೀರಾಪುರ, ಕಲ್ಮೇಶ ಇನಾಮತಿ, ಸಂತೋಷ ಮೇಟಿ, ಸುನೀಲ ಹುಲ್ಲಂಬಿ, ನಾಗರಾಜ ಮಾದರ, ಶ್ರೀಕಾಂತ ಬಿಸನಳ್ಳಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.