ಧಾರವಾಡ

ಹುಬ್ಬಳ್ಳಿ: ಆಶ್ರಯ ಮನೆಗೆ ಒತ್ತಾಯಿಸಿ ಪ್ರತಿಭಟನೆ

Published On :

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಬಡವರಿಗೆ, ನಿರ್ಗತಿಕರಿಗೆ ಆಶ್ರಯ ಯೋಜನೆಯಡಿ ಸೂರು ಕಲ್ಪಿಸಬೇಕು ಎಂದು ಆಗ್ರಹಿಸಿ ಗುರುವಾರ ಕನ್ನಡ ಕ್ರಾಂತಿದೀಪ ಸಂಘಟನೆ ವತಿಯಿಂದ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ನಗರವಾಸಿ ಬಡವರಿಗೆ ಸೂರು ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ವಿವಿಧ ವಸತಿ ಯೋಜನೆಗಳು ಅನರ್ಹರಿಗೆ ತಲುಪುತ್ತಿವೆ. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಸರ್ಕಾರ ಫಲಾನುಭವಿಗಳ ಹೆಸರಿನಲ್ಲಿ ಆಸ್ತಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಮನೆಗಳನ್ನು ನೀಡಲು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡಕ್ರಾಂತಿ ದೀಪ ಸಂಘಟನೆ ಗ್ರಾಮೀಣ ಜಿಲ್ಲಾಧ್ಯಕ್ಷೆ ಭರಮವ್ವ ಮ್ಯಾಗಳಮನಿ, ತಾಲೂಕು ಅಧ್ಯಕ್ಷ ಅಫ್ಜಲ್ ಖಾನ್, ಭರಮಮ್ಮ ಸೇರಿದಂತೆ ಇನ್ನಿತರರು ಇದ್ದರು.
--
ಧಾರವಾಡದಲ್ಲಿ ಆಹ್ಲಾದಕರ ಭಾವಗೀತ ಸಂಜೆ
ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಕ್ರಾಂತಿಯ ಅಂಗವಾಗಿ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ ಮಾಸಿಕ ಭಾವಗೀತ ಗಾಯನ ಯಶಸ್ವಿಯಾಗಿ ನಡೆಯಿತು.
ಅಂಬಿಕಾತನಯದತ್ತರ ಕವಿತೆಗಳಾದ ಏಲಾವನ ಲವಲೀವನ, ಬದುಕು ಮಾಯೆಯ ಮಾಟ, ಟೊಂಕದ ಮ್ಯಾಲ ಕೈಯಿಟ್ಟುಕೊಂಡು, ಸಂವತ್ಸರ ಸೂರ್ಯಪಾನ, ಯಾರವ್ವ ಇವ ಚೆಲುವ ಹೀಗೆ ವೈವಿಧ್ಯಮಯ ಗೀತೆಗಳನ್ನು ಗಾಯಕಿ ಇಂದಿರಾ ಜಗದೀಶ ಮಳಗಿ ಪ್ರಸ್ತುತಪಡಿಸಿದರು.
ಜಿ.ಎಸ್. ಶಿವರುದ್ರಪ್ಪನವರ ಎಲ್ಲೋ ಹುಡುಕಿದೆ ಇಲ್ಲದ ದೇವರ, ಡಿ.ಎಸ್. ಕರ್ಕಿ ಅವರ ಎಲೆ ಎಲೆ ಮಲ್ಲಿಗೆ, ಕೃಷ್ಣಮೂರ್ತಿ ಪುರಾಣಿಕರ ಬಂದಾ ಬಂದಾ, ಎಚ್.ಎಸ್. ವೆಂಕಟೇಶಮೂರ್ತಿ ಅವರ ಶಿಶುಗೀತೆ ಪದಗಳ ಮೇಲೆ ಕವಿತೆಗಳನ್ನು ಹಾಡಿದರು.
ಕ್ಯಾಸಿಯೋದಲ್ಲಿ ರಾಜು ಎಮ್ಮಿಗನೂರ, ತಬಲಾದಲ್ಲಿ ಅನಿಲ ಮೇತ್ರಿ ಹಾಗೂ ತಂಬೂರದಲ್ಲಿ ಸುಷ್ಮಾ ಮಳಿಗಿ ಸಾಥ್ ನೀಡಿದರು. ಪ್ರೊ. ಎ.ಜಿ. ಸಬರದ, ರಾಮಚಂದ್ರ ಧೋಂಗಡೆ, ಜಗದೀಶ ಮಳಗಿ, ಜಿ.ಬಿ. ಹೊಂಬಳ, ವಿ.ಜಿ. ತಿಗರಿ, ಕೀರ್ತಿವತಿ, ಪದ್ಮಾ ಬೇಂದ್ರೆ, ನಾಗರತ್ನಾ ದೇಸಾಯಿ ಇದ್ದರು. ಬೇಂದ್ರೆ ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ಸ್ವಾಗತಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.