ತಂತ್ರಜ್ಞಾನಕ್ಕೆ ಪ್ರಾಚೀನ ಭಾರತೀಯರ ಕೊಡುಗೆ ಅಪಾರ
ಧಾರವಾಡ: ಪುರಾತತ್ವ ಸಾಕ್ಷ್ಯಾಧಾರದ ಪ್ರಕಾರ ಭಾರತ ವಿಜ್ಞಾನ ಹಾಗೂ ಗಣಿತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿತ್ತು ಎಂದು ಟಿಸಿಎಸ್ನ ಮಾಜಿ ಉಪಾಧ್ಯಕ್ಷ ಪ್ರೊ. ಶಿವಾನಂದ ಕಣವಿ ಹೇಳಿದರು.
'ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾಚೀನ ಭಾರತದ ಕೆಲವು ಸಾಧನೆಗಳು' ಹಾಗೂ 'ಪ್ರೋಬಿಂಗ್ ಸಿಕ್ರೆಟ್ಸ್ ಆಫ್ ಮ್ಯಾಟರ್' ವಿಷಯಗಳ ಕುರಿತು ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್ಯಭಟ ಮತ್ತು ಬ್ರಹ್ಮಗುಪ್ತ ಅವರು ಗಣಿತ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗ್ನೆ ನೀಡಿದ್ದಾರೆ. ಪುರಾತತ್ವದ ಲೋಹಶಾಸ್ತ್ರದ ಆಧಾರಗಳ ಪ್ರಕಾರ ಲೋಹಶಾಸ್ತ್ರದಲ್ಲೂ ಭಾರತೀಯರು ಪರಿಣಿತಿ ಹೊಂದಿದ್ದರೆಂದು ಹೇಳಬಹುದು ಎಂದರು.
ಪ್ರಾಸ್ತ್ತಾವಿಕವಾಗಿ ಮಾತನಾಡಿದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಯು.ಎಸ್. ರಾಯಕರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾಚೀನ ಭಾರತದ ಕೆಲವು ಸಾಧನೆಗಳು, ಪ್ರೋಬಿಂಗ್ ಸಿಕ್ರೆಟ್ಸ್ ಆಫ್ ಮ್ಯಾಟರ್ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮದ ಉದ್ದೇಶ ಹೇಳಿದರು. ಪ್ರೊ. ಉಮಾಕಾಂತ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಪಿ. ಹಿರೇಮಠ, ಭೌತಶಾಸ್ತ್ರ ವಿಭಾಗದ ಪ್ರೊ. ಎನ್.ಎಂ. ಬಡಿಗೇರ, ಎಸ್.ವಿ. ಮಿಶ್ರಾ ಉಪಸ್ಥಿತರಿದ್ದರು. ಚಂದ್ರಕಾಂತ ಚಂಡೂರ ನಿರೂಪಿಸಿ, ವಂದಿಸಿದರು. ಎಸ್.ಕೆ. ರಂಜಣಿಗಿ, ಆರ್.ಪಿ. ಗಾಳಿ, ಎಂ.ಸಿ. ಕಂದಗಲ್ಲ, ಎ.ಎಸ್. ಅಂತಣ್ಣವರ್, ಅಭಿಷೇಕ್ ಸಿ., ಪ್ರಮೋದ ಆರ್., ಎಂ.ಕೆ. ಹೋರಕೇ, ಲಕ್ಷ್ಮಣ ಕೆ.ಎನ್., ಶ್ಯಾಮ ತೇಲಗಾರ, ಕು.ಬಿ.ಎಸ್. ಗಾಂವಕರ ಮತ್ತಿತರರು ಹಾಜರಿದ್ದಿರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

