ಕ್ರಿಕೆಟ್ ಬೆಟ್ಟಿಂಗ್: 7 ಮಂದಿಗೆ ಪೊಲೀಸ್ ಆತಿಥ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 21
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 'ಕನ್ನಡಪ್ರಭ' ಅವಳಿನಗರದಲ್ಲಿ 'ಕ್ರಿಕೆಟ್ ಬೆಟ್ಟಿಂಗ್ ಜೋರು' ಎಂಬ ಶೀರ್ಷಿಕೆ ಪ್ರಕಟಿಸಿದ ವಿಶೇಷ ವರದಿಗೆ ಎಚ್ಚೆತ್ತ ಪೊಲೀಸ್ ಇಲಾಖೆ, ಮಂಗಳವಾರ ಅವಳಿ ನಗರದ 3 ಕಡೆಗಳಲ್ಲಿ ದಿಢೀರ್ ದಾಳಿನಡೆಸಿದೆ.
ವಿದ್ಯಾನಗರ, ಹಳೆಹುಬ್ಬಳ್ಳಿ ಹಾಗೂ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಒಟ್ಟು 7 ಜನರನ್ನು ಬಂಧಿಸಿ, ಅವರಿಂದ ರು. 13,646 ಹಾಗೂ ಬೆಟ್ಟಿಂಗ್ಗೆ ಉಪಯೋಗಿಸಿದ 18 ಮೊಬೈಲ್ ಹಾಗೂ 3 ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುಂಭಕೋಣಂ ಪ್ಲಾಟ್ನ ಮನೆಯೊಂದರಲ್ಲಿ ಆಸ್ಟ್ರೇಲಿಯಾದಲ್ಲಿ ಮಂಗಳವಾರ ನಡೆದ 20:20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರಿ ಪ್ರಮಾಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆದಿದೆ ಎಂಬ ಮಾಹಿತಿ ಕಲೆ ಹಾಕಿದ ಉಪನಗರ ಠಾಣೆ ಪೊಲೀಸುರು ದಾಳಿ ನಡೆಸಿದ್ದರು.
ಶಂಕರ ಭೀಮಾಸಾ ಮೆಹರವಾಡೆ, ರಾಹುಲ್ ಮನೋಜಕುಮಾರ ಅಗ್ರವಾಲ ಎಂಬಿಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ. ಇದೇ ರೀತಿಯಾಗಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯನಗರದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಚಂದ್ರಶೇಖರ ಮೋತಿಲಾಲ ದಲಭಂಜನ, ಗುರುನಾಥ ಕೃಷ್ಣಾಸಾ ಮೇತ್ರಾಣಿ ಹಾಗೂ ಭಾಸ್ಕರ್ ಮೇತ್ರಾಣಿ ಎಂಬುವರ ಸಿಕ್ಕಿ ಹಾಕಿಕೊಂಡಿದ್ದಾರೆ.
ಹಳೆಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರವಿಂದನಗರದಲ್ಲಿರುವ ಸುನೀಲ ಕೃಷ್ಣಾಸಾ ಇರಕಲ್ ಎಂಬುವರ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸರು ದಾಳಿ ನಡೆಸಿದಾಗ, ರಾಜು ಕೃಷ್ಣಾಸಾ ಇರಕಲ್ ಹಾಗೂ ದೀಪಕ ಇರಕಲ್ ಎಂಬುವರು ಬಂಧಿಸಲ್ಪಟ್ಟಿದ್ದಾರೆ.
ಬೆಟ್ಟಿಂಗ್ ಅವ್ಯಾಹತ
ಅವಳಿನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾಳಸಂತೆಯಲ್ಲಿ ಸೀಮೆಎಣ್ಣೆ ಮಾರಾಟ ಭರ್ಜರಿಯಾಗಿ ನಡೆದಿದ್ದು, ಆಯಾ ಠಾಣೆಗಳಲ್ಲಿ ಅಪರಾಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಂಪೂರ್ಣ ಮಾಹಿತಿ ಇದ್ದರೂ ಅದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಇನ್ನೂ ಕೆಲ ಅಕ್ರಮ ಕುಳಗಳು, ಕಮೀಷನರ್ ಸಾಹೇಬ್ರು ತಮಗೆ ಬಹಳಷ್ಟು ಕ್ಲೋಸ್ ಎಂದು ಫೋಸ್ ನೀಡುತ್ತ ಸಣ್ಣಪುಟ್ಟ ದಂಧೆಕಾರರಲ್ಲಿ ವಿಶ್ವಾಸ ತುಂಬಿ ಅಕ್ರಮ ಚಟುವಟಿಕೆಯಿಂದ ದೂರು ಸರಿಯದಂತೆ ಫೋಸ್ ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ಈ ಮೊದಲು ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಕ್ರಿಕೆಟ್ ಬುಕ್ಕಿಗಳು ಹಾಗೂ ಸೀಮೆಎಣ್ಣೆ ಕಾಳಸಂತೆಕೋರರು ಇದೀಗ ಧಾರವಾಡದತ್ತ ಮುಖ ಮಾಡಿದ್ದಾರೆ ಎಂದು ಗೊತ್ತಾಗಿದೆ. ಧಾರವಾಡದಲ್ಲಿ ಬೆಟ್ಟಿಂಗ್ ಹಾಗೂ ಸೀಮೆಎಣ್ಣೆ ಕಾಳಸಂತೆ ವ್ಯವಹಾರ ಅತ್ಯಂತ ಭರ್ಜರಿಯಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಧಾರವಾಡದಿಂದಲೇ ಈ ಎರಡೂ ವ್ಯವಹಾರಗಳನ್ನು ನಿಭಾಯಿಸಿಕೊಂಡು ಬರಲು ಕೆಲವರು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ಪೊಲೀಸ್ ಆಯುಕ್ತ ರವೀಂದ್ರಪ್ರಸಾದ ಈ ಅಕ್ರಮ ಕುಳಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಲ್ಲಿ ಸ್ವಲ್ಪವೂ ವಿಳಂಬ ಮಾಡಿದರೆ ಕಮೀಷನರೇಟ್ಗೆ ಕೆಟ್ಟ ಹೆಸರು ಬರುವುದರಲ್ಲಿ ಸಂಶಯವೇ ಇಲ್ಲ.
ಈ ದಂಧೆಯಲ್ಲಿದ್ದ ಕೆಲ ಹಳೆಯ ತಿಮಿಂಗಳುಗಳು ಇದೀಗ ಗ್ಯಾಬ್ಲಿಂಗ್ ದಂಧೆಯತ್ತ ತಿರುಗಿದ್ದಾರೆ ಎಂದು ಗೊತ್ತಾಗಿದ್ದು, ನಗರದ ಹೊರ ವಲಯದಲ್ಲಿ ಈ ಅವ್ಯವಹಾರ ಮುಂದುವರಿಸಿಕೊಂಡು ಹೊರಟಿದ್ದಾರೆ. ಈ ಎಲ್ಲ ವ್ಯವಹಾರಗಳಿಗೆ ಇಲಾಖೆಯ ಕೆಲ ಅಧಿಕಾರಿಗಳು ಸಹ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಯಾವುದೇ ಕಾರಣಕ್ಕೂ ಅಕ್ರಮ ದಂಧೆಗಳು ಮಹಾನಗರದಲ್ಲಿ ಮತ್ತೆ ತಲೆ ಎತ್ತದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾದ ಮಹತ್ತರ ಜವಾಬ್ದಾರಿ ಪೊಲೀಸ್ ಆಯುಕ್ತರ ಮೇಲಿದ್ದು, ಇದನ್ನು ಯಾವ ರೀತಿಯಲ್ಲಿ ನಿಭಾಯಿಸುತ್ತಾರೋ ಕಾದುನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

