ಧಾರವಾಡ

ಹಠಾತ್ ಪ್ರವಾಹದಲ್ಲಿ ಸಿಲುಕಿದ ಗ್ರಾಮಸ್ಥರು

Published On :

ನವಲಗುಂದ: ತಾಲೂಕಿನ ಶಿಶುವಿನಹಳ್ಳಿ ಮತ್ತು ಇಂಗಳಹಳ್ಳಿ ಮಧ್ಯೆ ಹರಿಯುವ ಎರಡು ಹಳ್ಳಗಳಲ್ಲಿ ಶನಿವಾರ ರಾತ್ರಿ ದಿಢೀರ್ ಪ್ರವಾಹ ಬಂದಿದ್ದರಿಂದ ಸುಮಾರು 8ರಿಂದ 10 ಜನರು ಗ್ರಾಮಗಳಿಗೆ ಮರಳಲು ಪರದಾಡುವಂತಾಗಿದೆ.
ಸುತ್ತಲಿನ ಪ್ರದೇಶಗಳಲ್ಲಿ ಭಾರಿ ಏಕಾಏಕಿ ಮಳೆಯಾಗಿದ್ದರಿಂದ ಎರಡು ಗ್ರಾಮಗಳ ಮಧ್ಯೆ ಹರಿಯುವ ರಾಡಿ ಹಳ್ಳ ಮತ್ತು ರಾಯನಾಳ ಹಳ್ಳಗಳಲ್ಲಿ ಶನಿವಾರ ರಾತ್ರಿ ಭಾರಿ ಪ್ರಮಾಣದಲ್ಲಿ ನೀರು ಬಂದಿತ್ತು. ಎರಡು ಟ್ರ್ಯಾಕ್ಟರ್, ಒಂದು ಟಾಟಾ ಏಸ್, ಒಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 8ರಿಂದ 10 ಜನರು ಪ್ರವಾಹದಿಂದಾಗಿ ದಂಡೆಗಳ ಮೇಲೆ ನಿಂತಿದ್ದಾರೆ. ಯಾವುದೇ ಅಪಾಯವಾಗಿಲ್ಲ. ಇವರೆಲ್ಲರೂ ತಾಲೂಕಿನ ಬಲ್ಲರವಾಡ ಗ್ರಾಮದವರು. ರಾತ್ರಿ 9ರಿಂದಲೇ ಹಳ್ಳಗಳ ದಂಡೆಯಲ್ಲಿ ನಿಂತಿದ್ದು, ನೀರು ಇಳಿದ ಮೇಲಷ್ಟೇ ಅವರು ಊರಿಗೆ ಮರಳಲು ಸಾಧ್ಯವಾಗುತ್ತದೆ. ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ನವಲಗುಂದ ಎಎಸ್‌ಐ ಆನಂದ ಡೋರೆ ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರನ್ನೂ ಕರೆಸಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.